Site icon Vistara News

IT Raid: ಬೆಂಗಳೂರಿನಲ್ಲಿ 10 ಕಡೆ ಐಟಿ ದಾಳಿ, ತೆರಿಗೆ ಪಾವತಿಸದ ರೆಸ್ಟೋರೆಂಟ್‌ಗಳ ಪರಿಶೀಲನೆ

meghana foods it raid

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಮುಂಜಾನೆ ಐಟಿ ಅಧಿಕಾರಿಗಳು ರೆಸ್ಟೋರೆಂಟ್‌ ಚೈನ್‌ ಒಂದರ ಮೇಲೆ ದಾಳಿ (IT Raid) ನಡೆಸಿದ್ದಾರೆ.

ಮೇಘನಾ ಫುಡ್ಸ್ ಗ್ರೂಪ್ (Meghana foods group) ನಡೆಸುತ್ತಿರುವ ರೆಸ್ಟೋರೆಂಟ್‌ಗಳು (Restaurant) ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ನಗರದ ಕೋರಮಂಗಲದಲ್ಲಿ ಇರುವ ಕಚೇರಿ, ಇಂದಿರಾನಗರ, ಜಯನಗರ ಮತ್ತಿತರ ಕಡೆಗಳಲ್ಲಿ ಇರುವ ರೆಸ್ಟೋರೆಂಟ್‌ಗಳು ಸೇರಿ ಹಲವೆಡೆ ದಾಳಿ ನಡೆಸಲಾಗಿದೆ.

ಮೇಘನಾ ಫುಡ್ಸ್ ಹೆಸರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕಂಪನಿ, ಬೆಂಗಳೂರಿನಲ್ಲಿ ಒಂಬತ್ತು ಔಟ್‌ಲೆಟ್‌ಗಳನ್ನು ಹೊಂದಿದೆ. ಹೈದರಾಬಾದ್‌ ಮೂಲದ ಕಂಪನಿ ಸ್ಥಾಪಕರು 2006ರಿಂದ ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆದಿದ್ದಾರೆ.

ಕಂಪನಿಯ ಆದಾಯ ತೆರಿಗೆ ಪಾವತಿಯಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ ಐದು ಘಂಟೆಯಿಂದ ಕರ್ನಾಟಕ ಮತ್ತು ಗೋವಾ ವಿಭಾಗದ ಐಟಿ ಅಧಿಕಾರಿಗಳ ಹಲವು ತಂಡಗಳು ನಗರದಲ್ಲಿ ಸುಮಾರು ಹತ್ತಕ್ಕೂ ಹಚ್ಚು ಕಡೆಗಳಲ್ಲಿ ದಾಳಿ ನಡೆಸಿವೆ.

ವಿದೇಶದಿಂದ ತರುತ್ತಿದ್ದ 1.5 ಕೆಜಿ ಅಕ್ರಮ ಚಿನ್ನ ವಶಕ್ಕೆ

ಬೆಂಗಳೂರು : ಅಕ್ರಮವಾಗಿ ವಿದೇಶದಿಂದ ತರಲಾಗುತ್ತಿದ್ದ ಚಿನ್ನ‌ವನ್ನು (illegal gold smuggling) ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ (Bengaluru international Airport) ಕಸ್ಟಮ್ಸ್ (Customs) ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಪ್ರತ್ಯೇಕ ಮೂರು ಪ್ರಕರಣಗಳಲ್ಲಿ 1.5 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಕೌಲಾಲಂಪುರ್, ಕುವೈತ್, ಮೆದಿನಾ ಮತ್ತು ಬೆಹ್ರೇನ್‌ನಿಂದ ಬಂದಿದ್ದವರು ಚಿನ್ನವನ್ನು ಬಚ್ಚಿಟ್ಟುಕೊಂಡು ತಂದಿದ್ದರು. ಬಳೆ, ಚೈನ್, ಡಾಲರ್, ಕಟ್ ಪೀಸ್ ಮಾದರಿಯಲ್ಲಿ ಚಿನ್ನ ತರಲಾಗಿತ್ತು. ಲಗೇಜ್ ಬ್ಯಾಗ್‌ನಲ್ಲಿ ಬಟ್ಟೆಯಲ್ಲಿ ಸುತ್ತಿ ಮರೆ ಮಾಚಿ ಚಿನ್ನ ತರಲಾಗಿತ್ತು.

99 ಲಕ್ಷ ಮೌಲ್ಯದ 1.5 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಕೌಲಾಲಂಪುರದಿಂದ ಚಿನ್ನವನ್ನು ನೆಟ್ ಮಾದರಿಯಲ್ಲಿ ಮಾಡಿ ಸಿಲ್ವರ್ ಕೋಟ್ ಮಾಡಿದ್ದ ಸ್ಮಗ್ಲರ್ಸ್, ವಂಚಿಸಲು ಯತ್ನಿಸಿದರೂ ಬಿಡದೆ ಪ್ರಯಾಣಿಕರ ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದರು. ಚಿನ್ನ ವಶಕ್ಕೆ ಪಡೆದು ಅಕ್ರಮ ಸಾಗಾಟ ಮಾಡುತ್ತಿದ್ದವರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: IT Raid : ಬಿಜೆಪಿಯಿಂದ ದೂರ ಸರಿದ ರೌಡಿ ಶೀಟರ್‌ ಫೈಟರ್‌ ರವಿ ಮೇಲೆ ಐಟಿ ದಾಳಿ

Exit mobile version