Site icon Vistara News

IT raid | ಎಂಜಿಎಂ ಗ್ರೂಪ್‌ ಮೇಲೆ ಐಟಿ ರೇಡ್‌, ಬೆಂಗಳೂರಿನ ಹಲವೆಡೆ ಸೇರಿ 50 ಕಡೆ ಶೋಧ

it raid

ಬೆಂಗಳೂರು: ಎಂಜಿಎಂ ಸಮೂಹ ಸಂಸ್ಥೆಯ ಮೇಲೆ ಇಂದು (ಬುಧವಾರ) ತಮಿಳುನಾಡು ಐಟಿ ಅಧಿಕಾರಿಗಳು ದಾಳಿ (IT raid) ನಡೆಸಿದ್ದಾರೆ. ಚೆನ್ನೈ, ಬೆಂಗಳೂರುನಲ್ಲಿ ಸೇರಿ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಒಟ್ಟು 50 ಬ್ರಾಂಚ್‌ ಆಫೀಸ್‌ ಹೊಂದಿರುವ ಈ ಸಂಸ್ಥೆಯ ಮೇಲೆ ಐಟಿ ಅಧಿಕಾರಗಳು ದಿಢೀರ್‌ ದಾಳಿ ನಡೆಸಿದ್ದು ಬೆಂಗಳೂರಿನ ಜಯನಗರದ ಕಚೇರಿಯಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ.

ಎಂ.ಜಿ. ಮುತ್ತು ಮಾಲಿಕತ್ವದ ಎಂಜಿಎಂ ಗೋಲ್ಡ್‌ ಸಂಸ್ಥೆ 250‌ ಕೋಟಿ ರೂ. ಹಗರಣ ಹಾಗೂ ವಂಚನೆಯ ಆರೋಪ ಎದುರಿಸುತ್ತಿದೆ. ತೆರಿಗೆ ವಂಚನೆ ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಎಂಜಿಎಂ ಸಂಸ್ಥೆಯ ಮೇಲೆ ಐಟಿ ಅಧಿಕಾರಗಳು ಪರಿಶೀಲನೆ ನಡೆಸಿದ್ದಾರೆ. 15ಕ್ಕೂ ಅಧಿಕ ಐಟಿ ಅಧಿಕಾರಿಗಳು ಎಂಜಿಎಂನ ಕೇಂದ್ರ ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಕೊಯಿಮತ್ತೂರು, ಕೊಚ್ಚಿ , ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಹಲವೆಡೆ, ಬೆಂಗಳೂರು ಸೇರಿದಂತೆ ಒಟ್ಟು ಐವತ್ತು ಕಡೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಐದು ರಾಜ್ಯಗಳ 400 ಸ್ಥಳಗಳಲ್ಲಿ ಲಿಕ್ಕರ್‌ ಸೇರಿದಂತೆ ನಾನಾ ಉದ್ದಿಮೆಗಳ ಮೇಲೆ ಐಟಿ ದಾಳಿ

Exit mobile version