Site icon Vistara News

Jail mafia: ಜೈಲಿನೊಳಗಿಂದ ಮೊಬೈಲ್‌ ಡೀಲ್‌ ಬಂದ್;‌ ಕೈದಿಗಳ ಆಟಕ್ಕೆ ಕಮಿಷನರ್‌ ಬ್ರೇಕ್‌

parappana1

ಬೆಂಗಳೂರು: ಪರಪ್ಪನ ಆಗ್ರಹಾರ ಜೈಲಿನಲ್ಲಿ ಕದ್ದು ಮೊಬೈಲ್‌ ಇಟ್ಟುಕೊಂಡು ಹೊರಗಡೆ ಸಂಪರ್ಕ ಸಾಧಿಸುವ ಕೈದಿಗಳ ಆಟವನ್ನು (Jail mafia) ಬಂದ್‌ ಮಾಡಲು ಕಮೀಷನರ್ ಮುಂದಾಗಿದ್ದಾರೆ. ಇಲ್ಲಿ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ನಿರ್ಮಿಸಲಾಗುತ್ತಿದ್ದು, ಇನ್ನು ಮುಂದೆ ಜೈಲಿನೊಳಗಿಂದಲೇ ನಡೆಯುವ ರೌಡಿ ಚಟುವಟಿಕೆಗಳಿಗೆ ಬ್ರೇಕ್‌ ಬೀಳಲಿದೆ.

ಇದುವರೆಗೂ ಕೆಲವು ಪ್ರಭಾವಿ ರೌಡಿಗಳು ಲಂಚ ನೀಡಿಯೋ, ಕದ್ದು ತರಿಸಿಯೋ ಜೈಲಿನೊಳಗೆ ಮೊಬೈಲ್‌ ಇಟ್ಟುಕೊಳ್ಳುತ್ತಿದ್ದರು. ಇಲ್ಲಿಂದಲೇ ಹೊರಗಿನ ಡೀಲಿಂಗ್‌ಗಳನ್ನು ನಡೆಸುತ್ತಿದ್ದರು. ಆದರೆ ಇನ್ನು ಮುಂದೆ ಅಂಥ ಸರ್ಕಸ್ ಮಾಡಿ ಮೊಬೈಲ್ ಇಟ್ಟುಕೊಂಡರೂ ಉಪಯೋಗವಿಲ್ಲ. ಜೈಲಿನಿಂದ ಡೀಲ್ ಮಾಡುವ ರೌಡಿಗಳಿಗೆ ಕಮೀಷನರ್ ದಯಾನಂದ್ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.

ಜೈಲಿನ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ಇನ್‌ಸ್ಟಾಲ್‌ ಮಾಡಲಾಗುತ್ತಿದ್ದು, ಹೊಸ ತಂತ್ರಜ್ಞಾನದಿಂದಾಗಿ ಔಟ್ ಗೋಯಿಂಗ್ ಹಾಗೂ ಇನ್‌ಕಮಿಂಗ್ ಕರೆಗಳು ಕೂಡ ನಿರ್ಬಂಧಕ್ಕೊಳಗಾಗಲಿವೆ.

ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳ ಜೊತೆ ಕಮೀಷನರ್ ಚರ್ಚೆ ನಡೆಸಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ರೂಪುರೇಷೆ ರಚಿಸಲು ಮುಂದಾಗಿದ್ದಾರೆ. ಜೈಲಿನಿಂದ ಮೊಬೈಲ್ ಬಳಸಿ ಹಲವು ರೌಡಿಗಳು ಹೊರಗಡೆ ಡೀಲಿಂಗ್ ನಡೆಸುವ, ಜೈಲಿನಿಂದಲೇ ಸುಪಾರಿ ನೀಡಿ ದುಷ್ಕೃತ್ಯಗಳಲ್ಲಿ ಭಾಗಿ‌ಯಾಗುತ್ತಿರುವ ಹಿನ್ನೆಲೆಯಲ್ಲಿ, ಜೈಲಿನ ಎಲ್ಲ ಅಕ್ರಮಗಳಿಗೂ ಕಡಿವಾಣ ಹಾಕಲು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಜೈಲಿನಲ್ಲಿ ಡ್ರಗ್ಸ್ ಸರಬರಾಜು, ಮಾಫಿಯಾ ಯಾವುದೂ ಇರಬಾರದು ಎಂದು ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Veerappan Aide Dead: ಪರಪ್ಪನ ಅಗ್ರಹಾರದಲ್ಲಿ ವೀರಪ್ಪನ್‌ ಸಹಚರ ಸಾವು

Exit mobile version