Site icon Vistara News

ಜುಗುರಾಜ್‌ ಹತ್ಯೆ ಮಾಡಲು ಹೆಂಡತಿಯೇ ಕಾರಣ ಎಂದ ಆರೋಪಿ: ಹಾಗಿದ್ರೆ ಬಿಜುರಾಮ್‌ ಪತ್ನಿ ಮಾಡಿದ್ದೇನು?

ಜುಗುರಾಜ್‌ ಹತ್ಯೆ

ಬೆಂಗಳೂರು : ಚಾಮರಾಜಪೇಟೆಯ ನಾಲ್ಕನೇ ಕ್ರಾಸ್‌ನಲ್ಲಿರುವ ಕಿಂಗ್ಸ್ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್‌ನಲ್ಲಿ ಜುಗುರಾಜ್‌ ಕೊಲೆ‌ ನಡೆಸಲು ಪ್ರಮುಖ ಕಾರಣವನ್ನು ಆರೋಪಿ ಬಿಜುರಾಮ್‌ ಬಿಚ್ಚಿಟ್ಟಿದ್ದಾನೆ. ಹೆಂಡತಿಯ ಕಾಟಕ್ಕೆ  ಬೇಸತ್ತು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ವಲ ₹15000 ಸಂಬಳಕ್ಕೆ ಕೆಲಸಕ್ಕೆ ಇದ್ದ ಬಿಜುರಾಮ್‌ಗೆ ಹಣ ತರುವಂತೆ ಪತ್ನಿ ಪ್ರತಿದಿನ ಪೀಡಿಸುತ್ತಿದ್ದಳು. ಇದರಿಂದ ಬೇಸತ್ತು ಜುಗುರಾಜ್‌ನ ಕೊಲೆಗೆ ಪ್ಲಾನ್ ಮಾಡಿರುವುದಾಗಿ ಓಂಪ್ರಕಾಶ್ ಬಳಿ ಬಿಜುರಾಮ್‌ ಹೇಳಿಕೊಂಡಿದ್ದ. ಇದರಿಂದಾಗಿ ಮಹೇಂದ್ರನನ್ನು ಓಂಪ್ರಕಾಶ್‌ ಪರಿಚಯ ಮಾಡಿಸಿದ್ದ. ಮಹೇಂದ್ರ ಮತ್ತು ಬಿಜುರಾಮ್‌ ಸೇರಿ ಕೊಲೆ ಮಾಡುವ ಪ್ಲಾನ್ ಕೂಡ ಮಾಡಿದ್ದರು ಹಾಗೂ ಯೋಜನೆಯಂತೆ ಯಶಸ್ವಿಯಾಗಿದ್ದರು. ಕೊಲೆ ನಂತರ ಚೀಲದಲ್ಲಿ ಚಿನ್ನ, ಹಣ ತುಂಬಿಕೊಂಡು ಎಸ್ಕೇಪ್ ಆಗಿದ್ದ ಬಿಜುರಾಮ್‌ ಬಸ್ ಮೂಲಕ ಚಿತ್ರದುರ್ಗ ಹೋಗಿ ಅಲ್ಲಿಂದ ಕಾರಲ್ಲಿ ಹುಬ್ಬಳ್ಳಿ ತೆರಳಿ ನಂತರ ಟ್ರೈನ್ ಮೂಲಕ ಬಿಜುರಾಮ್‌ ಹಾಗೂ ಮಹೇಂದ್ರ ಗೋವಾಗೆ ತೆರಳಿದ್ದರು. ಅಲ್ಲಿ ಚಿನ್ನ ಇಟ್ಟು ಹಣದೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದರು.

ಇದನ್ನೂ ಓದಿ | ಚಾಮರಾಜಪೇಟೆ ವೃದ್ಧ ಉದ್ಯಮಿಯ ಹಂತಕ ಗುಜರಾತ್‌ನಲ್ಲಿ ಪೊಲೀಸ್‌ ಬಲೆಗೆ

ಅದಾಗಲೇ ಆರೋಪಿಗಳ ಪತ್ತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಟೀಂ ರಚನೆ ಮಾಡಿದ್ದರು. ಇನ್ಸ್‌ಪೆಕ್ಟರ್‌ಗಳಾದ ಎರ್ರಿಸ್ವಾಮಿ, ಲೋಹಿತ್, ಶಿವಕುಮಾರ್, ಚೇತನ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಗೋವಾದಿಂದ ತೆರಳುತ್ತಿದ್ದ ಆರೋಪಿಗಳು ಗುಜರಾತ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಂತರ ಬೆಂಗಳೂರು ಪೊಲೀಸರಿಗೆ ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ವಿಭಾಗ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಹಣ ಮತ್ತು ಚಿನ್ನ ಇಟ್ಟಿದ್ದ ಮಾಹಿತಿ ನೀಡಿದ್ದಾರೆ. ಆರೋಪಿಗಳ ಮಾಹಿತಿ ಮೇಲೆ 8.75 kg ಚಿನ್ನ 53 ಲಕ್ಷ ನಗದು, 4 kg ಬೆಳ್ಳಿ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, ಇನ್ನೊಬ್ಬ A2 ಆರೋಪಿ ಓಂ ಪ್ರಕಾಶ್‌ ರಾವ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ಓಂ ಪ್ರಕಾಶ್‌ ರಾವ್ ಬಳಿ ಅಂದಾಜು 4 ಕೆಜಿ ಚಿನ್ನ ಇರುವುದಾಗಿ ಬಿಜುರಾಮ್‌ ಬಾಯಿ ಬಿಟ್ಟಿದ್ದಾನೆ.

ಮೃತ ಜುಗುರಾಜ್‌ ಜತೆಗಿರುತ್ತಿದ್ದ ಬಿಜುರಾಮ್ ಎಂಬ ವ್ಯಕ್ತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ವೃದ್ದನನ್ನು ಪ್ರತಿ ದಿನ ಅಂಗಡಿಗೆ ಕರೆದುಕೊಂಡು ಹೋಗುವುದು, ಬರುವುದು ಮಾಡುತ್ತಿದ್ದ ಆರೋಪಿ ಬಿಜುರಾಮ್, ಬುಧವಾರ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಬಂದಿದ್ದಾನೆ. ನಂತರ ಕೃತ್ಯ ಎಸೆಗಿದ್ದಾನೆ. ವೃದ್ದನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮುಖಕ್ಕೆ ಖಾರದ ಪುಡಿ ಹಾಕಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಇದನ್ನೂ ಓದಿ | ಜುಗುರಾಜ್‌ ಕೊಲೆ‌ ಪ್ರಕರಣ: ಕಂಪ್ಲೀಟ್‌ ಡೀಟೇಲ್ಸ್‌ ಇಲ್ಲಿದೆ ನೋಡಿ..

Exit mobile version