ಶಿವಮೊಗ್ಗ: ಭದ್ರಾವತಿಯ ಶಿಕ್ಷಣ ಕ್ಷೇತ್ರದ ಭೀಷ್ಮ ಎಂದೇ ಖ್ಯಾತರಾಗಿದ್ದ ಕೆ. ಶಾಮಣ್ಣ(82) ಶನಿವಾರ ಬೆಳಗ್ಗೆ ನಿಧನರಾದರು. ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರು, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಪರಿವೀಕ್ಷಕರು ಆಗಿದ್ದರು ಶಾಮಣ್ಣ.
ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು, ಭದ್ರಾವತಿಯಲ್ಲಿ ರಂಗಭೂಮಿಯ ಕಲಾವಿದರನ್ನು ಬಳಸಿಕೊಂಡು ಅದ್ಭುತವಾದ ನಾಟಕ ಪ್ರದರ್ಶನವನ್ನು ನೀಡಿದ್ದರು. ಪ್ರದರ್ಶನದ ಟಿಕೆಟಿನಿಂದ ಬಂದ ಹಣದಲ್ಲಿ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ಶಾಮಣ್ಣ ಅವರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶಾಮಣ್ಣ ಅವರ ನಿಧನಕ್ಕೆ ಶಾಸಕ ಬಿ.ಕೆ. ಸಂಗಮೇಶ್ವರ ಮತ್ತು ನಗರಸಭೆ ಸದಸ್ಯ ಬಿ.ಕೆ. ಮೋಹನ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜಾರಾಮ್ ಬುಕ್‌ಹೌಸ್ ಮಾಲೀಕ ಮಂಜುನಾಥ್ ಕಶ್ಯಪ್ ನಿಧನ