Site icon Vistara News

Karnataka Bandh : ನಾಳೆ ರಸ್ತೆಗಿಳಿಯಬೇಡಿ, ಬೆಂಗಳೂರು-ಮೈಸೂರು Express way ಸಹಿತ ಎಲ್ಲ ಹೆದ್ದಾರಿ ಬಂದ್‌ಗೆ ಪ್ಲ್ಯಾನ್‌

Karnataka Bandh Highways may be closed

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ಪ್ರತಿಭಟಿಸಿ (Cauvery Water dispute) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಹಾಗೂ ಸುಪ್ರೀಂಕೋರ್ಟ್‌ (Supreme court) ಮುಂದೆ ನ್ಯಾಯದ ಹಕ್ಕೊತ್ತಾಯ ಮಂಡಿಸಿ ನಡೆಯಲಿರುವ ಸೆ. 29ರ ಕರ್ನಾಟಕ ಬಂದ್‌ಗೆ (Karnataka Bandh) ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ.

ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ ರಾಜ್ಯದಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲು ಪ್ಲ್ಯಾನ್‌ ಮಾಡುತ್ತಿರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ದೂರ ಸಂಚಾರ ಮಾಡುವ ಯೋಚನೆ ಮಾಡದಿರುವುದು ಒಳ್ಳೆಯದು.

ಸೆ. 26ರಂದು ಬೆಂಗಳೂರು ಬಂದ್‌ ಇದ್ದರೆ ಈ ಬಾರಿ ಇಡೀ ಕರ್ನಾಟಕವೇ ಬಂದ್‌ ಆಗಲಿದೆ. ಹೀಗಾಗಿ ರಾಜ್ಯಾದ್ಯಂತ ರಸ್ತೆಗಳನ್ನು ಪ್ರಧಾನವಾಗಿ ಟಾರ್ಗೆಟ್‌ ಮಾಡಲು ಒಕ್ಕೂಟದ ಸಂಘಟನೆಗಳು ಯೋಚಿಸಿವೆ. ಒಂದು ವೇಳೆ ಇದು ಸಕ್ಸಸ್‌ ಆದರೆ ಹೆದ್ದಾರಿಗಳು ದಿನದ ಬಹುಕಾಲ ಬಂದ್‌ ಆಗಲಿವೆ. ಹೀಗಾಗಿ ನೀವು ರಸ್ತೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿದೆ.

ಬಂದ್‌ನ ದಿನ ಟೋಲ್ ಗೇಟ್, ರಾಷ್ಟ್ರೀಯ ಹೆದ್ದಾರಿಗಳನ್ನ ತಡೆಯಲು ಹೋರಾಟಗಾರರು ಪ್ಲ್ಯಾನ್ ಮಾಡಿದ್ದು, ರಾಜ್ಯದ ಪ್ರಮುಖ ಹೆದ್ದಾರಿಗಳೇ ಪ್ರತಿಭಟನೆಯ ಪ್ರಧಾನ ವೇದಿಕೆಗಳಾಗಲಿವೆ. ಪ್ರಧಾನ ಹೆದ್ದಾರಿಗಳು ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲೂ ಪ್ರತಿಭಟನೆಗೆ ಸಿದ್ಧತೆ ನಡೆದಿದೆ.

ಬೆಂಗಳೂರು- ಮೈಸೂರು ಹೆದ್ದಾರಿ ಕಂಪ್ಲೀಟ್ ಬಂದ್

ಸೆಪ್ಟೆಂಬರ್‌ 29ರ ಬಂದ್‌ನ ಸಂದರ್ಭದಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯನ್ನು ಸಂಪೂರ್ಣ ಬಂದ್‌ ಮಾಡಲಾಗುತ್ತದೆ ಎಂದು ವಿಸ್ತಾರ ನ್ಯೂಸ್‌ಗೆ ರೈತ ಮುಖಂಡ ಪ್ರಸನ್ನ ಗೌಡ ಹೇಳಿಕೆ ನೀಡಿದ್ದಾರೆ.

ರಸ್ತೆಯಲ್ಲೇ ಅಡುಗೆ ಮಾಡುತ್ತೇವೆ, ನಡು ರಸ್ತೆಯಲ್ಲೇ ಉಪನ್ಯಾಸ ಮಾಡುತ್ತೇವೆ. ಇಡೀ ದಿನ ವಾಹನ ಸಂಚಾರಕ್ಕೆ ನಿರ್ಬಂಧ ಇರುತ್ತದೆ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ, ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರದಲ್ಲಿ ರಸ್ತೆ ತಡೆ ಮಾಡಲಾಗುವುದು, ಆಂಬುಲೆನ್ಸ್ ಹೊರತುಪಡಿಸಿ ಎಲ್ಲಾ ವಾಹನಗಳಿಗೆ ತಡೆ ಒಡ್ಡುತ್ತೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : Karnataka Bandh : ಕರ್ನಾಟಕ ಬಂದ್‌ಗೆ ನೂರಾರು ಸಂಘಟನೆ ಬೆಂಬಲ; ಯಾವ ಸೇವೆ ಲಭ್ಯ? ಯಾವುದು ಅಲಭ್ಯ?

ರಾಜ್ಯದ ಯಾವೆಲ್ಲ ಪ್ರಮುಖ ಹೆದ್ದಾರಿ ತಡೆಯುವ ಪ್ಲ್ಯಾನ್?

ರಾಜ್ಯದ ಯಾವೆಲ್ಲ ಟೋಲ್ ಗಳ ಬಳಿ ಪ್ರತಿಭಟನೆಗೆ ಪ್ಲ್ಯಾನ್?

Exit mobile version