ಬೆಂಗಳೂರು: ನಾಗಮಂಗಲದ ಫೈಟರ್ ರವಿಯನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದು ಹಾಗೂ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿಸಿದ್ದರ ವಿರುದ್ಧ ಬಿಜೆಪಿಯನ್ನು ಟೀಕಿಸುತ್ತಿರುವ ಕಾಂಗ್ರೆಸ್ (Karnataka Congress), ಕ್ಯಾಸಿನೊ, ಇಸ್ಪೀಟ್ ಕ್ಲಬ್ ಮಾಲೀಕನನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಿದ್ಧವಾಗಿದೆ.
ಬಿಜೆಪಿಯಿಂದ ರಾಜೀನಾಮೆ ನೀಡಿದರುವ ಎಂಎಲ್‌ಸಿ ಪುಟ್ಟಣ್ಣ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಇವರ ಜತೆಗೆ, ಮದ್ದೂರಿನ ಉದಯ್ ಗೌಡ (ಕದಲೂರು ಉದಯ್) ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಮೈತ್ರಿ ಸರ್ಕಾರವನ್ನು ಕೆಡವಿದ ಕಿಂಗ್‌ಪಿನ್ ಉದಯ್ ಎಂದು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
ಇಸ್ಪೀಟ್, ಕ್ಯಾಸಿನೋ ಬಿಸಿನೆಸ್ ನಡೆಸ್ತಿರುವ ಉದಯ್ ಗೌಡ, ಶ್ರೀಲಂಕಾ, ಗೋವಾದಲ್ಲಿ ಕ್ಯಾಸಿನೋ ಹೊಂದಿದ್ದಾರೆ. ಅನೇಕ ದಿನಗಳಿಂದ ಮದ್ದೂರಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತ ಚುನಾವಣೆಗೆ ತಯಾರಿ ನಡೆಸಿದ್ದಾರೆ.
ಮೋದಿಗೆ ಏನು ಗೊತ್ತಾಗುತ್ತದೆ?
ಫೈಟರ್ ರವಿಯನ್ನು ಭೇಟಿ ಮಾಡಿಸಿದ್ದು, ರಾಜ್ಯ ಬಿಜೆಪಿ ನಾಯಕರು. ಮೋದಿಯವರಿಗೆ ಏನು ಗೊತ್ತಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಬಸವನಗುಡಿ ವಿಧಾನ ಸಭಾ ಕ್ಷೇತ್ರದ ಹನುಮಂತನಗರದ ಇಂದಿರಾ ಕ್ಯಾಂಟೀನ್ ಮುಚ್ಚಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿದರು.
ಮೋದಿಗೆ ಪೈಟರ್ ರವಿ ಕೈ ಮುಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂರು ವರ್ಷದಲ್ಲಿ 20 ಸಾವಿರ ರೌಡಿ ಶೀಟರ್ ಗಳನ್ನು ತೆಗೆದು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಚುನಾವಣಾ ಟಿಕೆಟ್ ಕೊಡ್ತಾ ಇದ್ದಾರೆ. ಪಾಪ ಮೋದಿಗೆ ಎನು ಗೊತ್ತು? ಅವರ ಭದ್ರತಾ ಪಡೆಯುವರು ಅದನ್ನ ಪರಿಶೀಲನೆ ಮಾಡಬೇಕು. ರಾಜ್ಯ ನಾಯಕರೇ ಕರೆಕೊಂಡು ಹೋಗಿ ಮುಂದೆ ನಿಲ್ಲಿಸಿರುತ್ತಾರೆ ಎಂದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಒಂದೂವರೆ ಕೋಟಿ ಜನ ಬೆಂಗಳೂರಿನಲ್ಲಿ ಇದ್ದಾರೆ. ಶ್ರಮಿಕ ವರ್ಗಕ್ಕೆ ಊಟ ಕೊಡಬೇಕು ಎಂದು ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ಅನುಕೂಲ ಆಗಲಿ ಎಂದು ಇಂದಿರಾ ಕ್ಯಾಂಟೀನ್ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಇಂದಿರಾ ಕ್ಯಾಂಟೀನ್ ನಿರ್ಲಕ್ಷ್ಯ ಮಾಡಿದೆ. ಕರೆಂಟ್ ಬಿಲ್ ಕಟಿಲ್ಲ, ಬಾಡಿಗೆ ಕಟ್ಟಿಲ್ಲ.
30ಕ್ಕೂ ಅಧಿಕ ಕ್ಯಾಂಟೀನ್ ಮುಚ್ಚಿವೆ. ಮೊಬೈಲ್ ಇಂದಿರಾ ಕ್ಯಾಂಟೀನ್ ಮುಚ್ಚಿವೆ, ಕೆಟ್ಟು ನಿಂತಿವೆ. ನಮ್ಮ ಸರ್ಕಾರ ಬರುತ್ತದೆ, ಈಗ ಮುಚ್ಚಿರುವ ಕ್ಯಾಂಟೀನ್ ಮತ್ತೆ ಓಪನ್ ಮಾಡ್ತೇವೆ. ಸರ್ಕಾರ ಎರಡು ದಿನದಲ್ಲಿ ಮುಚ್ಚಿರುವ ಕ್ಯಾಂಟೀನ್ ಓಪನ್ ಮಾಡಿಲ್ಲ ಎಂದ್ರೆ ,ನಮ್ಮ ಕಾರ್ಯಕರ್ತರೆ ಆಹಾರ ಹಂಚಿಕೆ ಮಾಡ್ತಾರೆ. ಊಟ ರೆಡಿ ಮಾಡಿ ಹಂಚುತ್ತೇವೆ. ಕೋವಿಡ್ ಟೈಮ್ ನಲ್ಲಿ ಆಹಾರ ಹಂಚಿದ್ದೇವೆ, ಆಗ ಬಿಜೆಪಿಯವರ ಮನೆಯಲ್ಲಿ ಇದ್ದರು. ಈಗ ಬಂದವರೇ, ಮಗಧೀರ ರೀತಿಯಲ್ಲಿ ಕುದುರೆ ಹತ್ತಿಕೊಂಡು ಬರ್ತಾ ಇದ್ದಾರೆ ಎಂದರು.
ಇದನ್ನೂ ಓದಿ: Maddur: ಬಿಜೆಪಿ ಎಸ್.ಎಂ. ಕೃಷ್ಣ ಹೇಳಿದವರಿಗೆ ಕಾಂಗ್ರೆಸ್ ಟಿಕೆಟ್?: ಮದ್ದೂರು ಟಿಕೆಟ್ ಬಗ್ಗೆ ಡಿಕೆಶಿ ನಿರ್ಧಾರ