ಬೆಂಗಳೂರು: ಮೇ 10ರಂದು ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಿಗೆ ಕಂಟ್ರೂಲ್ ರೂಂ ಸ್ಥಾಪನೆ ಮಾಡಲಾಗಿದೆ.
ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಂಟ್ರೂಲ್ ರೂಂ ಸ್ಥಾಪಿಸಲಾಗಿದ್ದು, ಚುನಾವಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳನ್ನು ಇಲ್ಲಿ ಆಲಿಸಲಾಗುತ್ತದೆ.
ಮತದಾರರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಚುನಾವಣೆಗೆ ಸಂಬಂಧಿಸಿದಂತೆ ಏನಾದರೂ ದೂರುಗಳಿದ್ದರೆ ಅವುಗಳನ್ನು ಇಲ್ಲಿ ಸಲ್ಲಿಸಬಹುದು.
ಕುಂದು ಕೊರತೆಗಳನ್ನು ತಿಳಿಸಲು ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ 080-29915527/080-29915528.
ಇ-ಮೇಲ್- adeobu.controlroom@gmail.com ಮೂಲಕವೂ ಸಲ್ಲಿಸಬಹುದು.
ಕಚೇರಿಯ ಸಾಮಾಜಿಕ ಮಾಧ್ಯಮ/ ಜಾಲತಾಣಗಳ ಕೊಂಡಿ: ಫೇಸ್‌ಬುಕ್- Deputy Commissioner Bengaluru Urban (https://www.facebook.com/DcBlrUrban/)
ಇನ್ಸ್ಟಾಗ್ರಾಮ್- dc_bangalore_urban (https://www.instagram.com/dcbangaloreurban)
ಟ್ವಿಟರ್- DC_blrurban (https://twitter.com/DCblrurban)
ಇವುಗಳ ಮೂಲಕ ಕೂಡ ದೂರು ಸಲ್ಲಿಸಬಹುದು. ಈ ಬಗ್ಗೆ ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ.