Site icon Vistara News

Karnataka Election : ನಾನು ಬಸವ ಅನುಯಾಯಿ; ಲಿಂಗಾಯತ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಸಿದ್ದರಾಮಯ್ಯ

siddaramaiah talk about Lingayat damage control

siddaramaiah

ಬೆಳಗಾವಿ: ಭ್ರಷ್ಟ ಮುಖ್ಯಮಂತ್ರಿ ಹೇಳಿಕೆ ನೀಡಿ ಲಿಂಗಾಯತ ಸಮುದಾಯದ ವಿಚಾರದಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡ್ಯಾಮೇಜ್‌ ಕಂಟ್ರೋಲ್‌ಗಾಗಿ ನಾನಾ ಪ್ರಯತ್ನಗಳನ್ನು ನಡೆಸಿದ್ದಾರೆ. ಗೋಕಾಕದಲ್ಲಿ ನಡೆದ ವಿಧಾನಸಭಾ ಚುನಾವಣೆ (Karnataka Election) ಸಂಬಂಧಿತ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ತಾನು ಬಸವಣ್ಣನ ವಿಚಾರದಲ್ಲಿ ಏನೇನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ʻʻʻನಾನು ಬಸವ ಜಯಂತಿಯಂದೇ ಪ್ರಮಾಣ ವಚನ ಸ್ವೀಕರಿಸಿದ್ದೆ. ಈಗಲೂ ಕೂಡ ಬಸವಾದಿ ಶರಣರ ಹಾದಿಯಲ್ಲಿ ನಡೆಯಬೇಕೆಂಬುದು ನನ್ನ ಉದ್ದೇಶ. ನಾನು ಕೂಡಲಸಂಗಮಕ್ಕೆ ಯಾವುದೇ ಕಾರ್ಯಕ್ರಮ ಇಲ್ಲದಿದ್ದರೂ ನಿನ್ನೆ ಹೋಗಿದ್ದೆ. ಬಸವಣ್ಣನವರ ಭಾವಚಿತ್ರ ‌ಕಚೇರಿಯಲ್ಲಿ ಇಡಬೇಕು ಎಂದು ಆದೇಶ ಮಾಡಿದ್ದೇ ನಾನುʼʼ ಎಂದು ಸಿದ್ದರಾಮಯ್ಯ ತನ್ನ ನಿಲುವುಗಳನ್ನು ವಿವರಿಸಿದರು.

ʻʻಅಧಿಕಾರಿಗಳಿಗೆ, ಶಾಸಕರಿಗೆ ಬಸವಣ್ಣನ ಆದರ್ಶಗಳು ಪ್ರೇರಣೆ ಆಗಲಿ ಎಂದು ಭಾವಚಿತ್ರ ಹಾಕಿಸಿದ್ದೆ. ಆದರೆ, ಬಸವಣ್ಣನ ವಿಚಾರಗಳಿಗೆ ಬಿಜೆಪಿಯವರೇ ಎಳ್ಳುನೀರು ಬಿಟ್ಟಿದ್ದಾರೆ. ಬಸವಣ್ಣನ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅವರ ದಾರಿಯಲ್ಲಿ ನಡೆಯುತ್ತಿಲ್ಲʼʼ ಎಂದು ಹೇಳಿದ ಅವರು, ನಮಗೆ ಇನ್ನೊಮ್ಮೆ ಅಧಿಕಾರ ಕೊಡಿ, ನುಡಿದಂತೆ ನಡೆಯುತ್ತೇವೆ ಎಂದೂ ಭರವಸೆ ನೀಡಿದರು.

ʻʻನಾಳೆ (ಏಪ್ರಿಲ್‌ 25) ನಮ್ಮ ಪ್ರಣಾಳಿಕೆ ‌ಬಿಡುಗಡೆ ಆಗಲಿದೆ, ಈಗಾಗಲೇ ‌ಗ್ಯಾರಂಟಿ ಕಾರ್ಡ್‌ ಕೊಟ್ಟಿದ್ದೇವೆ. ಇನ್ನಷ್ಟು ಕೊಡುಗೆಗಳು ಪ್ರಣಾಳಿಕೆಯಲ್ಲಿ ಇರಲಿವೆʼʼ ಎಂದು ಸಿದ್ದರಾಮಯ್ಯ ಹೇಳಿದರು. ʻʻ200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ, ವಿದ್ಯಾನಿಧಿ ಯೋಜನೆ, ಅನ್ನಭಾಗ್ಯ ಯೋಜನೆ ಕೊಡುತ್ತೇವೆ. 10 ಕೆಜಿ ಅಕ್ಕಿ ‌ಮೊದಲನೇ ಕ್ಯಾಬಿನೆಟ್ ಸಭೆಯಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆʼʼ ಎಂದರು ಸಿದ್ದರಾಮಯ್ಯ.

ನಾ ಖಾವೂಂಗಾ, ನಾ ಖಾನೆದೂಂಗಾ ಎಲ್ಲಿ ಹೋಯಿತು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯದ್ವಾತದ್ವಾ ಭ್ರಷ್ಟಾಚಾರ ನಡೆದಿದೆ. ಇದೊಂದು ಭ್ರಷ್ಟ ಸರ್ಕಾರ ಎಂದು ಜನರು ಬೀದಿ ಬೀದಿಯಲ್ಲಿ ಮಾತನಾಡುತಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾಮಗಾರಿ ಮಾಡಿದರೂ 40 % ಕಮಿಷನ್‌ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನರೇಂದ್ರ ಮೋದಿ ನಾ ಖಾವೂಂಗಾ ನಾ ಖಾನೇದೂಂಗಾ ಅಂತ ಹೇಳ್ತಾರೆ. ಆದರೆ, ಬಿಜೆಪಿ ಸರ್ಕಾರಕ್ಕೆ ತಿನ್ನುವುದಕ್ಕೆ ಯಾಕೆ ಅವಕಾಶ ಕೊಟ್ಟಿರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಒಂದೇ ಒಂದು ಮನೆ ಕೊಡಿಸಿದ್ರಾ?

ನಾನು ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ. ನಾನು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆ ಕಟ್ಟಿಸಿದ್ದೆ. ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಹೊಸ ಮನೆ ಮಂಜೂರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಗುಜರಾತ್‌ನಲ್ಲಿ ಯಾಕೆ ಅಕ್ಕಿ ಕೊಟ್ಟಿಲ್ಲ?

ʻʻನಾನು ಅಧಿಕಾರದಲ್ಲಿದ್ದಾಗ ಏಳು ಕೆಜಿ ಅಕ್ಕಿ ಫ್ರೀಯಾಗಿ ಕೊಡ್ತಿದ್ದೆ. ಬಿಜೆಪಿಯವರು ಅದು ನಮ್ಮದು ಅಂತಾರೆ. ಹಾಗಾದ್ರೆ ಗುಜರಾತ್ ನಲ್ಲಿ ಯಾಕೆ ಕೊಡಲಿಲ್ಲ? ಕೃಷಿ ಭಾಗ್ಯ ಇದೆಯಾ? ಇಂದಿರಾ ಕ್ಯಾಂಟಿನ್ ಇದೆಯಾ?ʼʼ ಎಂದು ಕೇಳಿದರು.

ʻʻನಾನು ಅಧಿಕಾರದಲ್ಲಿದ್ದಾಗ ಏಳು ಕೆಜಿ ಅಕ್ಕಿ ಫ್ರೀಯಾಗಿ ಕೊಡ್ತಿದ್ದೆ. ಬಿಜೆಪಿಯವರು ಅದು ನಮ್ಮದು ಅಂತಾರೆ. ಹಾಗಾದ್ರೆ ಗುಜರಾತ್ ನಲ್ಲಿ ಯಾಕೆ ಕೊಡಲಿಲ್ಲ? ಕೃಷಿ ಭಾಗ್ಯ ಇದೆಯಾ? ಇಂದಿರಾ ಕ್ಯಾಂಟಿನ್ ಇದೆಯಾ?ʼʼ ಎಂದು ಕೇಳಿದರು.

ʻʻನಾನು ಅಧಿಕಾರದಲ್ಲಿದ್ದಾಗ ಏಳು ಕೆಜಿ ಅಕ್ಕಿ ಫ್ರೀಯಾಗಿ ಕೊಡ್ತಿದ್ದೆ. ಬಿಜೆಪಿಯವರು ಅದು ನಮ್ಮದು ಅಂತಾರೆ. ಹಾಗಾದ್ರೆ ಗುಜರಾತ್ ನಲ್ಲಿ ಯಾಕೆ ಕೊಡಲಿಲ್ಲ? ಕೃಷಿ ಭಾಗ್ಯ ಇದೆಯಾ? ಇಂದಿರಾ ಕ್ಯಾಂಟಿನ್ ಇದೆಯಾ?ʼʼ ಎಂದು ಕೇಳಿದರು.

ಗೋಕಾಕದಲ್ಲಿ ಭಯದ ವಾತಾವರಣ

ʻʻಗೋಕಾಕದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇಂಥವರು ನಿಮ್ಮ ಜನಪ್ರತಿನಿಧಿ ಆಗಬೇಕಾʼʼ ಎಂದು ಕೇಳಿದ ಅವರು, ʻನಾವೆಲ್ಲರೂ ನಿಮ್ಮೊಂದಿಗೆ ಇದ್ದೀವಿ. ನೀವು ಮುಕ್ತ ವಾತಾವರಣದಲ್ಲಿ ವೋಟ್‌ ಮಾಡಿ. ನಮ್ದೇ ಸರ್ಕಾರ ಬರ್ತದೆ ಡೋಂಟ್‌ ವರಿʼʼ ಎಂದರು. ಬಿಜೆಪಿಯವರ ಬಾಲಂಗೋಚಿತರ ಕೆಲಸ ಮಾಡುವ ಪೊಲೀಸರನ್ನು ಕೂಡಾ ಬದಲಾವಣೆ ಮಾಡುತ್ತೇವೆ ಎಂದರು. ʻʻಯಂಗ್ ಸ್ಟರ್ ಡಾಕ್ಟ್ರೂ ಇನ್ನು ಚಿಕ್ಕ ವಯಸ್ಸಿನ ಮಹಾಂತೇಶ ಕಡಾಡಿ ಪರವಾಗಿ ನಾವು ನಿಲ್ತೀವಿʼʼ ಎಂದರು ಸಿದ್ದರಾಮಯ್ಯ.

Exit mobile version