ಬೆಂಗಳೂರು: ಈಗಾಗಲೆ ಜೆಡಿಎಸ್ ವತಿಯಿಂದ ಪಂಚರತ್ನ ರಥಯಾತ್ರೆ ನಡೆಯುತ್ತಿದು, ಕಾಂಗ್ರೆಸ್‌ನಿಂದಲೂ ಜನಧ್ವನಿ ಯಾತ್ರೆ ಚಾಲನೆಯಲ್ಲಿದೆ. ದೇಶದ ರಾಜಕೀಯ ಕ್ಷೇತ್ರದಲ್ಲಿ ರಥಯಾತ್ರೆ ಆರಂಭಿಸಿದ ಬಿಜೆಪಿ ಇದೀಗ ಕರ್ನಾಟಕ ಚುನಾವಣೆಗೂ (Karnataka Politics) ಮುನ್ನ ರಥಯಾತ್ರೆ ಆರಂಭಿಸುವ ಚಿಂತನೆ ನಡೆಸುತ್ತಿದೆ.
ಈ ಕುರಿತು ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ವಿಜಯ ಸಂಕಲ್ಪ ಅಭಿಯಾನದ ಬಳಿಕ ರಥಯಾತ್ರೆ ಮಾಡುವ ಆಲೋಚನೆ ಇದೆ. ಈ ಬಗ್ಗೆ ರೂಪುರೇಷೆ ಸಿದ್ದಪಡಿಸಿ ನಿರ್ಧಾರ ಮಾಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರಲು ಏನು ಬೇಕು ಅದನ್ನು ನಾವು ಮಾಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಬಣ ರಾಜಕೀಯ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಇರುವುದು ಒಂದೇ ಬಣ ಅದು ಬಿಜೆಪಿ ಬಣ. ಬಿಜೆಪಿಯಲ್ಲಿ ಇರೋದು ಒಂದೇ ಒಂದು ಬಣ ಬಿಜೆಪಿ ಬಣ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ. ಮೋದಿ,ನಡ್ಡಾ, ಯಡಿಯೂರಪ್ಪ ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡ್ತೀವಿ ಎಂದರು.
ಇದನ್ನೂ ಓದಿ : JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ
ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ ಅವರು ಪಕ್ಷದ ಹಿರಿಯ ನಾಯಕ. ಅನೇಕ ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡ್ತಿದ್ದಾರೆ. ಏನಾಗಿದೆ ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.