ಕರ್ನಾಟಕ ಎಲೆಕ್ಷನ್
Karnataka Politics : ಬಿಜೆಪಿಯಿಂದಲೂ ರಥಯಾತ್ರೆ ಪ್ಲಾನ್: ಅರುಣ್ ಸಿಂಗ್ ಸುಳಿವು
ರಾಜ್ಯದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಏನೆಲ್ಲ ಬೇಕೊ ಅದೆಲ್ಲವನ್ನೂ ಮಾಡುವುದಾಗಿ ಅರುಣ್ ಸಿಂಗ್ ಹೇಳಿದ್ದಾರೆ.
ಬೆಂಗಳೂರು: ಈಗಾಗಲೆ ಜೆಡಿಎಸ್ ವತಿಯಿಂದ ಪಂಚರತ್ನ ರಥಯಾತ್ರೆ ನಡೆಯುತ್ತಿದು, ಕಾಂಗ್ರೆಸ್‌ನಿಂದಲೂ ಜನಧ್ವನಿ ಯಾತ್ರೆ ಚಾಲನೆಯಲ್ಲಿದೆ. ದೇಶದ ರಾಜಕೀಯ ಕ್ಷೇತ್ರದಲ್ಲಿ ರಥಯಾತ್ರೆ ಆರಂಭಿಸಿದ ಬಿಜೆಪಿ ಇದೀಗ ಕರ್ನಾಟಕ ಚುನಾವಣೆಗೂ (Karnataka Politics) ಮುನ್ನ ರಥಯಾತ್ರೆ ಆರಂಭಿಸುವ ಚಿಂತನೆ ನಡೆಸುತ್ತಿದೆ.
ಈ ಕುರಿತು ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅರುಣ್ ಸಿಂಗ್, ವಿಜಯ ಸಂಕಲ್ಪ ಅಭಿಯಾನದ ಬಳಿಕ ರಥಯಾತ್ರೆ ಮಾಡುವ ಆಲೋಚನೆ ಇದೆ. ಈ ಬಗ್ಗೆ ರೂಪುರೇಷೆ ಸಿದ್ದಪಡಿಸಿ ನಿರ್ಧಾರ ಮಾಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬರಲು ಏನು ಬೇಕು ಅದನ್ನು ನಾವು ಮಾಡುತ್ತೇವೆ ಎಂದರು.
ಬೆಳಗಾವಿಯಲ್ಲಿ ಬಣ ರಾಜಕೀಯ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಇರುವುದು ಒಂದೇ ಬಣ ಅದು ಬಿಜೆಪಿ ಬಣ. ಬಿಜೆಪಿಯಲ್ಲಿ ಇರೋದು ಒಂದೇ ಒಂದು ಬಣ ಬಿಜೆಪಿ ಬಣ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ. ಮೋದಿ,ನಡ್ಡಾ, ಯಡಿಯೂರಪ್ಪ ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡ್ತೀವಿ ಎಂದರು.
ಇದನ್ನೂ ಓದಿ : JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ
ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ ಅವರು ಪಕ್ಷದ ಹಿರಿಯ ನಾಯಕ. ಅನೇಕ ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡ್ತಿದ್ದಾರೆ. ಏನಾಗಿದೆ ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಕರ್ನಾಟಕ
ವಿಸ್ತಾರ TOP 10 NEWS: ಪಲ್ಸ್ ಆಫ್ ಕಿತ್ತೂರು, ಕಲ್ಯಾಣ ಕರ್ನಾಟಕದಿಂದ, ವರುಣದಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲವರೆಗೆ ಪ್ರಮುಖ ಸುದ್ದಿಗಳಿವು
ಪಲ್ಸ್ ಆಫ್ ಕರ್ನಾಟಕದಲ್ಲಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಜನರ ನಾಡಿಮಿಡಿತ, ವಿಜಯೇಂದ್ರ ವರುಣದಲ್ಲಿ ನಿಲ್ಲಬಾರದು ಎನ್ನುವುದು ಬಿಎಸ್‌ವೈ ಹಿಡಿತ.. ಹೀಗೆ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS
1. Pulse of Karnatana: ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಯಾರ ಪರವಿದ್ದಾರೆ ಮತದಾರರು?ವಿಧಾನಸಭೆ ಚುನಾವಣೆಗೂ ಮುನ್ನ ಕರ್ನಾಟಕದ ಮತದಾರರ ನಾಡಿ ಮಿಡಿತ ಅರಿಯುವ ಪ್ರತಿಷ್ಠಿತ ಸಮೀಕ್ಷೆ ʼಪಲ್ಸ್ ಆಫ್ ಕರ್ನಾಟಕʼದ ಎರಡನೇ ಆವೃತ್ತಿ ಪ್ರಕಟವಾಗುತ್ತಿದೆ. ಇಂದು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳನ್ನೊಳಗೊಂಡ ಕಿತ್ತೂರು ಕರ್ನಾಟಕ ಹಾಗೂ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳನ್ನು ಒಳಗೊಂಡು ಕಲ್ಯಾಣ ಕರ್ನಾಟಕದ ಮತದಾರರ ಮನದಾಳವನ್ನು ಪ್ರಕಟಿಸಲಾಗಿದೆ.
Pulse of Karnataka: ಕಿತ್ತೂರು ಕರ್ನಾಟಕ: ಹಿಂದುತ್ವ ಅಲೆಯ ಪ್ರದೇಶದಲ್ಲಿ ಬೊಮ್ಮಾಯಿ ಪರ ಒಲವು ಹೇಗಿದೆ?
Pulse of Karnataka: ಕಲ್ಯಾಣ ಕರ್ನಾಟಕ: ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಯಾರಿಗೆ ವಿಜಯದ ಹಾರ?
2. ಯಾವುದೇ ಕಾರಣಕ್ಕೆ ವರುಣದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಯಾವುದೇ ಕಾರಣಕ್ಕೆ ವರುಣ ವಿಧಾನಸಭಾ ಕ್ಷೇತ್ರದಿಂಧ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅತ್ತ ಮೈಸೂರಿಗೆ ವಿಜಯೇಂದ್ರ ಭೇಟಿ ನೀಡಿದ್ದು, ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಬಹುದು ಎಂಬ ನಿರೀಕ್ಷೆಗಳಿವೆ. ಅಲ್ಲಿನ ಕಾರ್ಯಕರ್ತರೂ ಇದಕ್ಕೆ ಒತ್ತಾಯ ಮಾಡುತ್ತಿರುವ ಬೆನ್ನಿಗೇ ಯಡಿಯೂರಪ್ಪ ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಹುಲಿ ಎದುರು ಹುಲಿಯೇ ಫೈಟ್ ಮಾಡ್ಬೇಕು; ವರುಣದಿಂದಲೇ ಸ್ಪರ್ಧಿಸಲು ವಿಜಯೇಂದ್ರಗೆ ಒತ್ತಡ
3. ಕಾಂಗ್ರೆಸ್ 2ನೇ ಪಟ್ಟಿ ಏ. 5ಕ್ಕೆ? ರಾಹುಲ್ ಗಾಂಧಿ ಕೋಲಾರ ಪ್ರತಿಭಟನೆ ಏಪ್ರಿಲ್ 5ರ ಬದಲು ಏ.9
ಮುಂದಿನ ವಿಧಾನಸಭಾ ಚುನಾವಣೆಗಾಗಿ (Karnataka Elections) 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮುನ್ನಡೆಯಲ್ಲಿರುವ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಏಪ್ರಿಲ್ 5 ಅಥವಾ 6ರಂದು ಪ್ರಕಟಿಸುವ ಸಾಧ್ಯತೆ ಇದೆ. ಈ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕೋಲಾರ ಭೇಟಿ ಏಪ್ರಿಲ್ ಐದರ ಬದಲಾಗಿ ಏಪ್ರಿಲ್ 9ಕ್ಕೆ ಮರುನಿಗದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. IPL 2023: ಐಪಿಎಲ್ ಕ್ರಿಕೆಟ್ ಹಬ್ಬಕ್ಕೆ ರಂಗು ತುಂಬಿದ ತಮನ್ನಾ, ರಶ್ಮಿಕಾ ಮಂದಣ್ಣ; ಅದ್ಧೂರಿ ಚಾಲನೆ
ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್(IPL 2023) 16ನೇ ಆವೃತ್ತಿಗೆ ಇಂದು (ಶುಕ್ರವಾರ ಮಾರ್ಚ್ 31) ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮುಂದಿನ 2 ತಿಂಗಳು ದೇಶದಲ್ಲಿ ಈ ಕ್ರಿಕೆಟ್ ಹಬ್ಬದ ವಾತಾವರಣ ಇರಲಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ ಹಬ್ಬಕ್ಕೆ ರಂಗು ತುಂಬಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. Banglore-Mysore Expressway: ದಶಪಥ ಹೆದ್ದಾರಿ ಮತ್ತೆ ದುಬಾರಿ; ನಾಳೆಯಿಂದಲೇ ಟೋಲ್ ದರ ಏರಿಕೆ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವಾಹನ ಸವಾರರಿಗೆ ಮತ್ತೆ ಬರೆ ಬೀಳುತ್ತಿದೆ. ಶನಿವಾರದಿಂದ (ಏ. 1) ದರ ಪರಿಷ್ಕರಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಬರೋಬ್ಬರಿ ಶೇಕಡಾ 22ರಷ್ಟು ದರ ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ 0.70% ತನಕ ಏರಿಕೆ
ನಿರೀಕ್ಷೆಯಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು 2023ರ ಏಪ್ರಿಲ್-ಜೂನ್ ಅವಧಿಗೆ (small savings schemes) 0.70% ತನಕ ಏರಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಉಳಿತಾಯ ಯೋಜನೆ, ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಕಿಸಾನ್ ವಿಕಾಸ ಪತ್ರ, ಅಂಚೆ ಇಲಾಖೆಯ ಟೈಮ್ ಡಿಪಾಸಿಟ್, ಸುಕನ್ಯಾ ಸಮೃದ್ಧಿ ಖಾತೆಯ ಬಡ್ಡಿ ದರವನ್ನು ಶೇ.8ಕ್ಕೆ ಏರಿಸಲಾಗಿದೆ. ಇದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ಇದರ ಬಡ್ಡಿ ದರ 7.6% ಆಗಿತ್ತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ನಾಳೆಯಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?
ಕೇಂದ್ರ ಸರ್ಕಾರ 2023-24ರ ಬಜೆಟ್‌ನಲ್ಲಿ ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಯಾಗು ತ್ತಿವೆ. ಇದರ ಪರಿಣಾಮ ಏಪ್ರಿಲ್ 1ರಿಂದ ಕೆಲವು ವಸ್ತುಗಳು ದುಬಾರಿ, ಮತ್ತೆ ಕೆಲವು ಅಗ್ಗವಾಗಲಿದೆ. ಸ್ಥಳೀಯ ಉತ್ಪಾದನೆ ಉತ್ತೇಜನಕ್ಕಾಗಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಮದು ಸುಂಕವನ್ನು 2023-24ರ ಬಜೆಟ್‌ನಲ್ಲಿ ಹೆಚ್ಚಿಸಿದೆ. ಜತೆಗೆ ಹೊಸ ನಿಯಮಾವಳಿಗಳೂ ಜಾರಿಯಾಗಲಿವೆ. ಪೂರ್ಣ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
8. ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣ ಅರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಗುಜರಾತ್ ಹೈಕೋರ್ಟ್ 25 ಸಾವಿರ ದಂಡ ವಿಧಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ಗಳನ್ನು ಪ್ರಧಾನಿ ಕಾರ್ಯಾಲಯವು(PMO) ಒದಗಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಪೂರ್ಣ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
9. Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ 4 ಗಂಟೆ ಕಾಲ ಅತ್ಯಾಚಾರ ರಾಜಧಾನಿ ಬೆಂಗಳೂರಿನಲ್ಲಿ ಭಯ ಹುಟ್ಟಿಸುವ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು (Bangalore horror) ನಡೆದಿದೆ. 19 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿದ ನಾಲ್ವರು ಯುವಕರು ಚಲಿಸುವ ಕಾರಿನಲ್ಲಿ ಆಕೆಯ ಮೇಲೆ ನಾಲ್ಕು ಗಂಟೆಗಳ ಹೊತ್ತು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ತನ್ನ ಗೆಳೆಯನ ಜತೆ ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯನ್ನು ಎಳೆದುಕೊಂಡು ಹೋದ ಈ ದುಷ್ಟರು ಕಾರಿನೊಳಗೆ ಕೂಡಿ ಹಾಕಿ ರಾತ್ರಿ ಇಡೀ ಸುತ್ತಾಡಿಸಿ ದೌರ್ಜನ್ಯ ನಡೆಸಿ ರಾತ್ರಿ 3.30ರ ಹೊತ್ತಿಗೆ ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Viral News : ನೂಡಲ್ಸ್‌ನಿಂದಲೇ ರಸ್ತೆ ಗುಂಡಿ ಮುಚ್ಚುವ ವ್ಯಕ್ತಿ! ವೈರಲ್ ಆಗ್ತಿದೆ ಈತನ ಕೆಲಸ
ರಸ್ತೆ ಗುಂಡಿ ಸಮಸ್ಯೆ ನಮ್ಮ ಬೆಂಗಳೂರಿನ ಮಂದಿಗೆ ಚೆನ್ನಾಗಿ ಗೊತ್ತಿರುವಂತದ್ದು. ಕೇವಲ ಬೆಂಗಳೂರು ಮಾತ್ರವಲ್ಲ, ದೇಶ ವಿದೇಶದಲ್ಲೂ ಈ ರಸ್ತೆ ಗುಂಡಿ ದೊಡ್ಡ ಸಮಸ್ಯೆಯೇ. ಅಭಿವೃದ್ಧಿಹೊಂದಿರುವ ರಾಷ್ಟ್ರ ಎಂದು ಕರೆಸಿಕೊಳ್ಳುವ ಬ್ರಿಟನ್‌ನಲ್ಲೂ ಈ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯೂ ಕೂಡ ಈ ರಸ್ತೆ ಗುಂಡಿ ವಿಚಾರದಲ್ಲಿ ಸಾಕಷ್ಟು ಮಂದಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ, ಸೋತಿದ್ದಾರೆ. ಇದೀಗ ಈ ವ್ಯಕ್ತಿಯೊಬ್ಬರು ವಿಶೇಷ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ (Viral News) ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
1. ಗುಜರಾತ್, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ
2. Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
3. 30 ಕೋಟಿ ರೂ. ಆಸ್ತಿ ಇದ್ದರೂ 3 ಹೊತ್ತು ಊಟ ಹಾಕದ ಮಗ, ಮಾತ್ರೆ ಸೇವಿಸಿ ತಂದೆ-ತಾಯಿ ಆತ್ಮಹತ್ಯೆ
4. ಒಂದೇ ಕುಟುಂಬದ 6 ಮಂದಿಯ ಪ್ರಾಣ ತೆಗೆದ ಸೊಳ್ಳೆ ಬತ್ತಿ; ಹಾಸಿಗೆ ಮೇಲೆ ಬಿದ್ದು ಭುಗಿಲೆದ್ದ ಹೊಗೆ, ಬೆಂಕಿ
5. New Virus: ಕೊರೊನಾ ಬೆನ್ನಲ್ಲೇ ಪತ್ತೆಯಾಯ್ತು ಮತ್ತೊಂಡು ಡೆಡ್ಲಿ ವೈರಸ್! ಭಾರತದಲ್ಲೇ ಮೊದಲ ಕೇಸ್!
ಕರ್ನಾಟಕ
Pulse of Karnataka: ಕಿತ್ತೂರು ಕರ್ನಾಟಕ: ಹಿಂದುತ್ವ ಅಲೆಯ ಪ್ರದೇಶದಲ್ಲಿ ಸಿಎಂ ಬೊಮ್ಮಾಯಿ ಪರ ಒಲವು ಹೇಗಿದೆ?
ಕಿತ್ತೂರು ಕರ್ನಾಟಕ ಭಾಗದಲ್ಲಿ 2018ರಲ್ಲಿ ಜಿಜೆಪಿ 29, ಕಾಂಗ್ರೆಸ್ 13, ಜೆಡಿಎಸ್ 2 ಸ್ಥಾನಗಳನ್ನು ಹೊಂದಿತ್ತು.
ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಚುನಾವಣಾ ಪರ್ವಕಾಲ. ಸದ್ಯ ಜನರ ಒಲವು ಯಾವ ಪಕ್ಷದ ಕಡೆಗಿದೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ.? ವಲಯವಾರು ಯಾವ ರಿಸಲ್ಟ್ ಬರಬಹುದು.? ಹೀಗೆ ಒಟ್ಟು 12 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತ ಅರಿಯೋ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ (Pulse of Karnataka).
ಪಲ್ಸ್ ಆಫ್ ಕರ್ನಾಟಕ ಸರ್ವೇಯಲ್ಲಿ ವಿಸ್ತಾರ ನ್ಯೂಸ್ನ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಉದ್ಯಮಿಗಳು, ಸರ್ಕಾರಿ ನೌಕರರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಬೀದಿ ಬದಿ ವ್ಯಾಪಾರಿಗಳು ಹೀಗೆ ಎಲ್ಲಾ ವರ್ಗ, ಸಮುದಾಯದ ಜನರನ್ನ ಮಾತನಾಡಿಸಿ ಸಮೀಕ್ಷೆ ನಡೆಸಲಾಗಿದೆ.
ಇದೀಗ ಕಿತ್ತೂರು ಕರ್ನಾಟಕ ಭಾಗದ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳು ಈ ವ್ಯಾಪ್ತಿಗೆ ಒಳಗೊಂಡಿದೆ.
ಕರ್ನಾಟಕ
Karnataka Elections : ಕಾಂಗ್ರೆಸ್ 2ನೇ ಪಟ್ಟಿ ಏ. 5ಕ್ಕೆ? ರಾಹುಲ್ ಗಾಂಧಿ ಕೋಲಾರ ಪ್ರತಿಭಟನೆ ಏಪ್ರಿಲ್ 5ರ ಬದಲು ಏ.9
ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿದ್ದನ್ನು ಪ್ರತಿಭಟಿಸಲು ಏಪ್ರಿಲ್ 5ರಂದು ಕೋಲಾರದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವಮ್ಮು ಏಪ್ರಿಲ್ 9ಕ್ಕೆ ಮರುನಿಗದಿ ಮಾಡಲಾಗಿದೆ.
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗಾಗಿ (Karnataka Elections) 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮುನ್ನಡೆಯಲ್ಲಿರುವ ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಏಪ್ರಿಲ್ 5 ಅಥವಾ 6ರಂದು ಪ್ರಕಟಿಸುವ ಸಾಧ್ಯತೆ ಇದೆ. ಈ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕೋಲಾರ ಭೇಟಿ ಏಪ್ರಿಲ್ ಐದರ ಬದಲಾಗಿ ಏಪ್ರಿಲ್ 9ಕ್ಕೆ ಮರುನಿಗದಿಯಾಗಿದೆ.
ಗುರುವಾರ ತಡರಾತ್ರಿವರೆಗೆ ನಡೆದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಎರಡನೇ ಹಂತದ ಟಿಕೆಟ್ ಘೋಷಣೆಯ ಬಗ್ಗೆ ಭಾರಿ ಚರ್ಚೆ ನಡೆಯಿತು. ಇನ್ನು 100 ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಬೇಕಾಗಿದೆ. ಇದೀಗ ಸ್ಕ್ರೀನಿಂಗ್ 60-62 ಕ್ಷೇತ್ರಗಳ ಟಿಕೆಟ್ ಬಹುತೇಕ ಅಂತಿಮಗೊಳಿಸಿದೆ. ಇದರಲ್ಲಿ 25ರಿಂದ 30 ಕ್ಷೇತ್ರಗಳಿಗೆ ಒಂದೇ ಹೆಸರು ಫೈನಲ್ ಮಾಡಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಎರಡು ಹೆಸರು ಶಿಫಾರಸು ಆಗಲಿದೆ. ಎರಡು ಹೆಸರುಗಳಿರುವ ಕ್ಷೇತ್ರಗಳ ಕುರಿತ ತೀರ್ಮಾನವನ್ನು ಹೈಕಮಾಂಡ್ ಗೆ ಬಿಡಲು ತೀರ್ಮಾನಿಸಲಾಗಿದೆ. ಏಪ್ರಿಲ್ 5 ಅಥವಾ 6 ರಂದು ಟಿಕೆಟ್ ಸೆಕೆಂಡ್ ಲಿಸ್ಟ್ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.
ರಾಹುಲ್ ಗಾಂಧಿ ಭೇಟಿಯ ಪೂರ್ವಭಾವಿ ಸಭೆ
ಈ ನಡುವೆ ಏಪ್ರಿಲ್ 5ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಭೇಟಿಯ ಕುರಿತು ಚರ್ಚೆ ನಡೆಸಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪಸ್ರಾದ್, ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಳ್ಳುವುದಕ್ಕೆ ಕಾರಣವಾದ ವಿವಾದಿತ ಭಾಷಣ ನಡೆದ ಕೋಲಾರದ ಅದೇ ಮೈದಾನದಿಂದ ಪ್ರತಿಭಟನೆಯ ಕೂಗನ್ನು ಎಬ್ಬಿಸಲು, ಆ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಅದರ ಲಾಭ ಎತ್ತಲು ಪ್ರಯತ್ನಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲು ಬೇಕಾದ ಯೋಜನೆಗಳು, ಜನರನ್ನು ಸೇರಿಸುವುದು, ಕಾರ್ಯಕ್ರಮದ ಸ್ವರೂಪ ಸೇರಿದಂತೆ ಎಲ್ಲ ವಿಚಾರಗಳ ಚರ್ಚೆಗೆ ಸಭೆಯನ್ನು ಕರೆಯಲಾಗಿತ್ತು.
ಅದರ ನಡುವೆಯೇ ರಾಹುಲ್ ಗಾಂಧಿ ಅವರ ಕೋಲಾರ ಭೇಟಿ ಏಪ್ರಿಲ್ 5ಕ್ಕೆ ಬದಲಾಗಿ 9ಕ್ಕೆ ಮರುನಿಗದಿಯಾಗಿದ್ದರ ಮಾಹಿತಿ ಬಂದಿದೆ. ಹೀಗಾಗಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.
ನಮ್ಮ ಮನೆಯೇ ನಿಮ್ಮ ಮನೆ ಅಭಿಯಾನ
ರಾಹುಲ್ ಗಾಂಧಿ ಅವರನ್ನು ದಿಲ್ಲಿಯ ಸರ್ಕಾರಿ ಬಂಗಲೆಯಿಂದ ಹೊರಹೋಗುವಂತೆ ಸೂಚಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿ ವಿನೂತನ ಅಭಿಯಾನ ನಡೆಸಿದರು.
ʻʻನಮ್ಮ ಮನೆಯೇ ನಿಮ್ಮ ಮನೆ ಅಭಿಯಾನʼʼ ಆರಂಭಿಸಿರುವ ಕಾಂಗ್ರೆಸ್ ಶಾಸಕರು ರಾಹುಲ್ ಗಾಂಧಿ ಅವರನ್ನು ತಮ್ಮ ತಮ್ಮ ನಿವಾಸಕ್ಕೆ ಆಹ್ವಾನ ನೀಡುತ್ತಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.
ಇದನ್ನೂ ಓದಿ :Karnataka Election: ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್: ಕಾಂಗ್ರೆಸ್ ಆರೋಪ
ಕರ್ನಾಟಕ
Pulse of Karnataka: ಕಲ್ಯಾಣ ಕರ್ನಾಟಕ: ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಯಾರಿಗೆ ವಿಜಯದ ಹಾರ?
2018ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಜೆಪಿ 20, ಕಾಂಗ್ರೆಸ್ 22, ಜೆಡಿಎಸ್ 4 ಸ್ಥಾನ ಗಳಿಸಿತ್ತು. ಬಿಜೆಪಿಯು ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಬಹಳಷ್ಟು ಸ್ಥಾನಗಳನ್ನು ಹಿಂಪಡೆಯಲು ಯಶಸ್ವಿಯಾಗಿತ್ತು.
ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಚುನಾವಣಾ ಪರ್ವಕಾಲ. ಸದ್ಯ ಜನರ ಒಲವು ಯಾವ ಪಕ್ಷದ ಕಡೆಗಿದೆ. ಯಾವ ಕ್ಷೇತ್ರದಲ್ಲಿ ಯಾರ ಹವಾ ಇದೆ.? ವಲಯವಾರು ಯಾವ ರಿಸಲ್ಟ್ ಬರಬಹುದು.? ಹೀಗೆ ಒಟ್ಟು 12 ಪ್ರಶ್ನೆಗಳನ್ನು ರಾಜ್ಯದ ಜನತೆಯ ಮುಂದಿಟ್ಟು ನಾಡಿಮಿಡಿತ ಅರಿಯೋ ಪ್ರಯತ್ನವನ್ನು ವಿಸ್ತಾರ ನ್ಯೂಸ್ ನಡೆಸಿದೆ. ಇದಕ್ಕಾಗಿ ವಿಸ್ತಾರ ನ್ಯೂಸ್, ರಾಜ್ಯದ ಪ್ರತಿಷ್ಟಿತ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆಯಾದ ಅಖಾಡ ಜೊತೆಗೂಡಿ ರಾಜ್ಯದ ಮೂಲೆಮೂಲೆಗೆ ತೆರಳಿ ಸ್ಥಳೀಯರ ಪಲ್ಸ್ ಅರಿಯುವ ಕೆಲಸ ಮಾಡಿದೆ. ಇದುವೇ ಪಲ್ಸ್ ಆಫ್ ಕರ್ನಾಟಕ.
ಪಲ್ಸ್ ಆಫ್ ಕರ್ನಾಟಕ ಸರ್ವೇಯಲ್ಲಿ ವಿಸ್ತಾರ ನ್ಯೂಸ್ನ 300ಕ್ಕೂ ಹೆಚ್ಚು ಸಿಬ್ಬಂದಿಯ ಜೊತೆಗೆ ಅಖಾಡದ ಅತಿದೊಡ್ಡ ತಂಡ ಮನೆಮನೆ ಬಾಗಿಲಿಗೆ ತೆರಳಿ ಮಾಹಿತಿ ಸಂಗ್ರಹಿಸಿದೆ. ಉದ್ಯಮಿಗಳು, ಸರ್ಕಾರಿ ನೌಕರರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಬೀದಿ ಬದಿ ವ್ಯಾಪಾರಿಗಳು ಹೀಗೆ ಎಲ್ಲಾ ವರ್ಗ, ಸಮುದಾಯದ ಜನರನ್ನ ಮಾತನಾಡಿಸಿ ಸಮೀಕ್ಷೆ ನಡೆಸಲಾಗಿದೆ.
ಇದೀಗ ಕಲ್ಯಾಣ ಕರ್ನಾಟಕ ಭಾಗದ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಭಾಗದಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳನ್ನು ಒಳಗೊಂಡಿದೆ.
-
ದೇಶ19 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ20 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಗ್ಯಾಜೆಟ್ಸ್9 hours ago
Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
-
ಅಂಕಣ20 hours ago
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
-
ಅಂಕಣ21 hours ago
Brand story : ಚೀನಾದ ಇ-ಕಾಮರ್ಸ್ ದಿಗ್ಗಜ ಅಲಿಬಾಬಾ, 6 ಕಂಪನಿಗಳಾಗಿ ವಿಭಜನೆಯಾಗುತ್ತಿರುವುದೇಕೆ?
-
ಕರ್ನಾಟಕ11 hours ago
B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ
-
ದೇಶ12 hours ago
Gujarat High Court: ಪಿಎಂ ಮೋದಿ ಪದವಿ ಸರ್ಟಿಫಿಕೇಟ್ ಕೇಳಿದ್ದ ದಿಲ್ಲಿ ಸಿಎಂ ಕೇಜ್ರಿವಾಲ್‌ಗೆ 25 ಸಾವಿರ ರೂ. ದಂಡ!
-
ಕರ್ನಾಟಕ14 hours ago
SSLC Exam 2023: ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ; ವಾಟ್ಸಾಪ್ನಲ್ಲಿ ಹರಿದಾಡಿದ ಕನ್ನಡ ಪೇಪರ್