ಬೆಂಗಳೂರು: ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ ಕಂಡ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ʼಏಕತಾ ಪ್ರತಿಮೆʼ ಜಾಗವು ಒಂದೇ ದಿನದಲ್ಲಿ ಆಕರ್ಷಕ ಪ್ರವಾಸಿ ತಾಣದಂತೆ ಜನರನ್ನು ತನ್ನತ್ತ ಸೆಳೆಯುತ್ತಿದೆ.
ಲೋಕಾರ್ಪಣೆಗೆ ಪೂರಕವಾಗಿ ನಡೆದ ಸಾರ್ವಜನಿಕ ಸಭೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದರು. ಆಶ್ಚರ್ಯವೆಂದರೆ ಕಾರ್ಯಕ್ರಮ ಮುಗಿದ ಮೇಲೂ ಸಾವಿರಾರು ಜನರು ತಂಡೋಪ ತಂಡವಾಗಿ ಪ್ರತಿಮೆಯನ್ನು ವೀಕ್ಷಿಸಲು ಆಗಮಿಸುತ್ತಿದ್ದರು.
ಸಭೆ ಮುಗಿದ ಮೇಲೆ ಕುತೂಹಲವುಳ್ಳ ಜನರು ರಾತ್ರಿ ಎರಡು ಗಂಟೆಯಾದರೂ ಪ್ರತಿಮೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದರು. ಬಂದವರಿಗೆ ನಿರಾಸೆಯಾಗದಂತೆ ಪ್ರತಿಮೆಯ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿತ್ತು.
ಮೊದಲ ದಿನದಲ್ಲೇ ಪ್ರವಾಸಿ ತಾಣವಾಗಿ ರೂಪುಗೊಂಡಿರುವುದಕ್ಕೆ ಸಚಿವ ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Modi In Bengaluru | ಅಧಿಕಾರದಲ್ಲಿ ಗೂಟ ಹೊಡ್ಕೊಂಡು ಕೂತಿರ್ತೀರ?: ಕೆಂಪೇಗೌಡರ ಪ್ರತಿಮೆ ಎದುರು BJP ವಿರುದ್ಧ ಗುಡುಗಿದ ಶರವಣ