ಬೆಂಗಳೂರು: ಹಣಕ್ಕಾಗಿ ಯುವಕನೊಬ್ಬ ತನ್ನ ಸಹಚರರೊಂದಿಗೆ ಸೇರಿ ಗೆಳೆಯನನ್ನೇ ಕಿಡ್ನ್ಯಾಪ್ ಮಾಡಿ (Kidnap Case) ಜೈಲುಪಾಲಾಗಿದ್ದಾನೆ. ಕೇರಳ ಮೂಲದ ಸಾಹೀಲ್ ಸಲೀಂ ಕಿಡ್ನ್ಯಾಪ್ ಆದವನು. ಪ್ರಮುಖ ಆರೋಪಿ ಮುಬಾರಕ್ ಎಂಬಾತ ತನ್ನ ಸ್ನೇಹಿತ ಸುಂದರ್ ಜತೆಗೆ ಮತ್ತೊಂದಿಷ್ಟು ಜನರೊಟ್ಟಿಗೆ ಪ್ಲ್ಯಾನ್ ಮಾಡಿ ಸಾಹೀಲ್‌ನನ್ನು ಕಿಡ್ನ್ಯಾಪ್ ಮಾಡಿದ್ದರು.
ಪದವಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್ ಬೆಂಗಳೂರಿನ ಸಂಪಿಗೆಹಳ್ಳಿಯ ಪಿಜಿವೊಂದರಲ್ಲಿ ವಾಸವಿದ್ದ. ಮುಬಾರಕ್ ಹಾಗೂ ಸಾಹೀಲ್ ಇಬ್ಬರು ಪಿಯುಸಿಯಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದರು.
ಸಾಹೀಲ್ ಆರ್ಮಿ ಆಫೀಸರ್ ಮಗ.. ಆತನ ಬಳಿ ಸಿಕ್ಕಾಪಟ್ಟೆ ಹಣ ಇರುತ್ತೆ ಎಂದು ಕಿಡ್ನ್ಯಾಪ್ ಪ್ಲಾನ್ ಮಾಡಿದ್ದ. ಪಿಜಿಯಲ್ಲಿದ್ದ ಸಾಹೀಲ್‌ನನ್ನು ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಈ ವೇಳೆ ಸಾಹೀಲ್‌ನಿಂದ 25 ಸಾವಿರ ರೂ. ಹಣ ಪಡೆದು ಬಿಟ್ಟು ಕಳಿಸಿದ್ದರು. ಇದರಿಂದ ಹೆದರಿದ ಸಾಹೀಲ್ ಕೇರಳ ಸೇರಿದ್ದ.
ಮಗ ಪಿಜಿ ತೊರೆದು ಮನೆ ಸೇರಿದ್ದು ಪೋಷಕರಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ವಿಚಾರಿಸಿದಾಗ ಸಾಹಿಲ್ ತನ್ನ ತಂದೆ ಬಳಿ ನಡೆದಿದ್ದನ್ನು ತಿಳಿಸಿದ್ದ. ಸದ್ಯ ಸಾಹೀಲ್ ತಂದೆ ನೀಡಿದ ದೂರಿನನ್ವಯ ಸಂಪಿಗೆಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.
ಇದನ್ನೂ ಓದಿ: Bengaluru Rains: ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್, ಫುಲ್ ಖುಷ್
6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ
ಯಾದಗಿರಿ: ಹಾಡಹಗಲೆ ದುಷ್ಕರ್ಮಿಯೊಬ್ಬ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು (kidnap case) ಯತ್ನಿಸಿದ್ದಾರೆ. ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ (Crime News) ನಡೆದಿದೆ. 6 ವರ್ಷದ ಸಂಜನಾ ಎಂಬಾಕೆ ಎಂದಿನಂತೆ ಸ್ನೇಹಿತೆ ಮನೆಯಿಂದ ಟ್ಯೂಶನ್‌ಗೆ ತೆರಳುತ್ತಿದ್ದಳು.
ಈ ವೇಳೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೊರ್ವ ಬಾಲಕಿಯ ಕಣ್ಣಿಗೆ ಸ್ಪ್ರೇ ಮಾಡಿದ್ದಾನೆ. ಬಳಿಕ ಅಪಹರಿಸಲು ಯತ್ನಿಸಿದಾಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ಸದ್ಯ ಪೋಷಕರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ