Site icon Vistara News

KILLER BMTC : ಬಿಎಂಟಿಸಿ ಬಸ್‌ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು

BMTV Bus kills child

ಬೆಂಗಳೂರು: ಅಪ್ಪನೊಂದಿಗೆ ಖುಷಿಯಿಂದ ಶಾಲೆಗೆ ಹೋಗುತ್ತಿದ್ದ ನಾಲ್ಕುವರೆ ವರ್ಷದ ಪುಟ್ಟ ಮಗುವೊಂದು (four and half years old child) ಬಿಎಂಟಿಸಿ ಬಸ್‌ ಧಾವಂತಕ್ಕೆ (BMTC Bus Road rage) ಸಿಲುಕಿ ನಡು ರಸ್ತೆಯಲ್ಲೇ ಪ್ರಾಣ ಕಳೆದುಕೊಂಡಿದೆ (Road Accident). ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ (Uttarahalli Main Road) ಈ ಭೀಕರ ಅಪಘಾತ ನಡೆದಿದ್ದು, ಪೂರ್ವಿ ರಾವ್‌ ಎಂಬ ಹೆಸರಿನ ನಾಲ್ಕುವರೆ ವರ್ಷದ ಮಗು ಮೃತಪಟ್ಟಿದೆ.

ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಕ್‌ ಸ್ಕೂಲ್‌ನಲ್ಲಿ (Bangalore International Public School) ಪ್ರಿ ಕೆ.ಜಿ. ತರಗತಿಯಲ್ಲಿ ಓದುತ್ತಿದ್ದ ಪೂರ್ವಿ ರಾವ್‌ಳನ್ನು ತಂದೆ ಪ್ರಸನ್ನ ಅವರನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದಾಗ (KILLER BMTC) ದುರಂತ ಸಂಭವಿಸಿದೆ.

ಬಹುರಾಷ್ಟ್ರೀಯ ಕಂಪನಿಯಾಗಿರುವ ಸಿಸ್ಕೊದಲ್ಲಿ ಉದ್ಯೋಗಿಯಾಗಿರುವ ಪ್ರಸನ್ನ ರಾವ್‌ ಅವರು ಎಂದಿನಂತೆ ತಮ್ಮ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಇಂಟರ್ ನ್ಯಾಶನಲ್ ಪಬ್ಲಿಕ್‌ ಸ್ಕೂಲ್‌ ಕಡೆಗೆ ಹೋಗುತ್ತಿದ್ದರು. ಬೈಕ್‌ ಉತ್ತರಹಳ್ಳಿ ಮುಖ್ಯರಸ್ತೆಯ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ಸಾಗುತಿದ್ದಂತೆಯೇ ಹಿಂಬದಿಯಿಂದ ವೇಗವಾಗಿ ಧಾವಿಸಿ ಬಂದ ಬಿಎಂಟಿಸಿ ಬಸ್‌ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯಾದ ರಭಸಕ್ಕೆ ಬೈಕ್‌ ನಿಯಂತ್ರಣ ಕಳೆದುಕೊಂಡಿದ್ದು, ಪ್ರಸನ್ನ ರಾವ್‌ ಅವರು ಎಡಬದಿಗೆ ಬಿದ್ದರೆ ಏನಾಗುತ್ತಿದೆ ಎಂದೂ ಗೊತ್ತಾಗದೆ ಎದುರಿನಲ್ಲಿ ಕುಳಿತಿದ್ದ ಪುಟ್ಟ ಮಗು ಪೂರ್ವಿ ಬಲ ಬದಿಗೆ ಬಿದ್ದಿದ್ದಾಳೆ. ಹಾಗೆ ಬಿದ್ದ ಆಕೆಯನ್ನು ಬಸ್‌ ಮತ್ತೆ ಕೆಡವಿ ಹಾಕಿದೆ. ಬಿಎಂಟಿಸಿ ಬಸ್‌ನಡಿಗೆ ಬಿದ್ದ ಪುಟ್ಟ ಮಗು ಅಲ್ಲೇ ನರಳಾಡಿ ನರಳಾಡಿ ಪ್ರಾಣ ಕಳೆದುಕೊಂಡಿದೆ.

ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್. ಲೇಔಟ್ ಸಂಚಾರಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಪ್ರತಿ ನಿತ್ಯ ಮಗಳನ್ನು ಬಿಟ್ಟು ಉದ್ಯೋಗಕ್ಕೆ ಹೋಗುತ್ತಿದ್ದ ಪ್ರಸನ್ನ ರಾವ್‌ ಅವರಿಗೆ ಇದೊಂದು ದೊಡ್ಡ ಆಘಾತವಾಗಿದ್ದು, ಪುಟ್ಟ ಮಗುವಿನ ಸಾವಿನಿಂದ ಇಡೀ ಕುಟುಂಬ ಕಂಗಾಲಾಗಿದೆ.

ಇದನ್ನೂ ಓದಿ: Road Accident : ಎರಡು ಬೈಕ್‌ಗಳ ಡಿಕ್ಕಿ; ಕಿಂಡರ್‌ ಗಾರ್ಟನ್‌ ಟೀಚರ್‌ ಯುವತಿ, ಕಾಲೇಜು ಲೆಕ್ಚರರ್‌ ದಾರುಣ ಬಲಿ

ಬಿಎಂಟಿಸಿ ಬಸ್‌ ಚಾಲಕನದ್ದೆ ತಪ್ಪು ಎಂದ ತನಿಖೆ

ಡಿಕ್ಕಿ ಹೊಡೆದ ಬಸ್‌ ಮತ್ತು ಪುಡಿಯಾದ ಬೈಕ್‌

ಈ ದುರ್ಘಟನೆ ಕುರಿತ ಪ್ರಾಥಮಿಕ ತನಿಖೆಯಲ್ಲಿ ಅಪಘಾತಕ್ಕೆ ಬಿಎಂಟಿಸಿ ಬಸ್ ಚಾಲಕ ನಿರ್ಲಕ್ಷ್ಯವೇ ಕಾರಣ ಎನ್ನುವುದು ಬೆಳಕಿಗೆ ಬಂದಿದೆ. ಪ್ರಸನ್ನ ರಾವ್‌ ಮತ್ತು ಬಾಲಕಿ ಪೂರ್ವಿ ತೆರಳುತಿದ್ದ ಬೈಕ್‌ಗೆ ಬಸ್‌ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರಸನ್ನ ಅವರು ಎಡಕ್ಕೆ, ಮಗು ಬಲಕ್ಕೆ ಬಿದ್ದಿದೆ. ಈ ವೇಳೆ ಬಸ್‌ ಮಗುವಿನ ಮೇಲೆ ಹರಿದಿದೆ. ಡಿಕ್ಕಿ ಹೊಡೆದ ಬಳಿಕವಾದರೂ ಬಸ್‌ ನಿಲ್ಲಿಸಿದ್ದರೆ ಮಗು ಉಳಿಯುತ್ತಿತ್ತು ಎಂದು ಹೇಳಲಾಗಿದೆ.

ಹೀಗಾಗಿ ಬಿಎಂಟಿಸಿ ಬಸ್ ಸಂಖ್ಯೆ Ka 57_F0999 ಬಸ್‌ ಮತ್ತು ಚಾಲಕ ಬಸವರಾಜ ಪೂಜಾರಿಯನ್ನು ವಶಕ್ಕೆ ಪಡೆದ ಕೆ ಎಸ್ ಲೇಔಟ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Exit mobile version