ಬೆಂಗಳೂರು: ನಂದಿನಿ ತುಪ್ಪದ ದರದಲ್ಲಿ ಕೆಎಂಎಫ್ ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್‌ಗೆ ಈಗ 30 ರೂ. ಹೆಚ್ಚಳ ಮಾಡಿದೆ. ಆದರೆ ಒಂದು ತಿಂಗಳಿಂದ ಈಚೆಗೆ ಒಂದೊಂದೇ ಹಂತದಲ್ಲಿ 100 ರೂ. ಏರಿಕೆ ಮಾಡಲಾಗಿದೆ.
ಆಗಸ್ಟ್‌ನಲ್ಲಿ ಒಂದು ಲೀಟರ್ ತುಪ್ಪದ ದರ ಸುಮಾರು 450 ರೂ. ಇತ್ತು. ಸೆಪ್ಟೆಂಬರ್ 10ರ ವೇಳೆಗೆ ಈ ದರ 518.18 ರೂ. ಇತ್ತು. ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್‌ಗೆ 570 ರೂ. ಮಾಡಲಾಗಿದೆ. ಇದೇ ವೇಳೆ ಎಲ್ಲ ಗಾತ್ರದ ಉತ್ಪನ್ನಗಳಿಗೂ ದರ ಪರಿಷ್ಕರಣೆ ಮಾಡಲಾಗಿದೆ.
200 ಮಿ.ಲೀ. ಸ್ಯಾಶೆದರ 113.64 ರಿಂದ 125 ರೂ.ಗೆ ಹೆಚ್ಚಳವಾಗಿದೆ. 200 ಎಂ.ಎಲ್. ಪೆಟ್ ಜಾರ್ ದರ 122.73 ರೂ.ನಿಂದ 135 ರೂ.ಗೆ ಏರಿಕೆ ಕಂಡಿದೆ. ಅರ್ಧ ಲೀಟರ್ ಸ್ಯಾಷೆ 259.09 ರೂ.ನಿಂದ 285 ರೂ. ಆಗಿದೆ. ಅರ್ಧ ಲೀಟರ್ ಪೆಟ್ ಜಾರ್ ದರ ಹಿಂದಿನ 268 ರೂ.ನಿಂದ 295 ರೂ.ಗೆ ಹೆಚ್ಚಳವಾಗಿದೆ.
1 ಲೀಟರ್ ಸ್ಯಾಷೆ ದರ 518.18 ರೂ.ನಿಂದ 570 ರೂ.ಗೆ, 1 ಲೀಟರ್ ಪೆಟ್ ಜಾರ್ ದರ 536.36 ರೂ.ನಿಂದ 590 ರೂ.ಗೆ ಏರಿಕೆ ಕಂಡಿದೆ. 5 ಲೀಟರ್ ಪೆಟ್ ಜಾರ್ ದರ 2,637.61 ರೂ.ನಿಂದ 2,875 ರೂ. ಆಗಿದೆ. ಅದೇ ರೀತಿ 15 ಕೆ.ಜಿ. ಟಿನ್ ದರ 0,112.15 ರೂ.ನಿಂದ 9,750 ರೂ. ಗೆ ಏರಿಕೆ ಮಾಡಲಾಗಿದೆ. ಈ ದರಗಳೆಲ್ಲವೂ ಗರಿಷ್ಠ ಮಾರಾಟ ದರವಾಗಿದ್ದು, ಇದರಲ್ಲೇ ಶೇ.12ಜಿಎಸ್‌ಟಿಯೂ ಒಳಪಟ್ಟಿರುತ್ತದೆ.
ಇದನ್ನೂ ಓದಿ }| Milk Price Hike | ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ?; ಸಿಎಂ ಮುಂದೆ ಪ್ರಸ್ತಾವನೆ!