Site icon Vistara News

Kshatriya Convention : ಕ್ಷತ್ರಿಯ ಸಮಾಜದ ಜತೆಗೆ ಸರ್ಕಾರ ಸದಾ ಇರುತ್ತದೆ: ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

kshatriya-convention-Karnataka cm basavaraj bommai says govt is with kshatriya community

#image_title

ಬೆಂಗಳೂರು: ಕ್ಷತ್ರಿಯ ಸಮುದಾಯದ ಜತೆಗೆ ರಾಜ್ಯ ಸರ್ಕಾರ ಎಂದಿಗೂ ಇರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಕ್ಷತ್ರಿಯ ಒಕ್ಕೂಟಗಳ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿರುವ “ಬೃಹತ್ ಕ್ಷತ್ರಿಯ ಸಮಾವೇಶ”ದಲ್ಲಿ (Kshatriya Convention) ಭಾಗವಹಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು. ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌, ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಪ್ಪಡಿ ಮಠದ ಶ್ರೀಗಳು, ಮಂಜುನಾಥ ಭಾರತಿ ಶ್ರೀಗಳು ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅರುಣ್​ ಸಿಂಗ್​ ಅವರಿಗೆ ಸನ್ಮಾನ

ಮಾತು ಮುಂದುವರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕ್ಷತ್ರಿಯ ಸಮಾಜ ಇಲ್ಲದಿದ್ದರೆ ಭಾರತೀಯರ ಒಗ್ಗಟ್ಟು ಇರುತ್ತಿರಲಿಲ್ಲ. ಈ ಸಮಾವೇಶ ಸಮಾಜವನ್ನು ಒಗ್ಗೂಡಿಸಲು ಮಾಡುತ್ತಿದ್ದೀರ. ಆ ಮೂಲಕ ಹಕ್ಕುಗಳನ್ನು ಪಡೆಯಲು ಯತ್ನಿಸಿದ್ದೀರ. ನನಗೆ ಈ ಸಮಾವೇಶದ ಉದ್ದೇಶ ಅರಿವಾಗಿದೆ. ಮೂಲ ಒಂದೇ ಇದೆ, ಉದ್ದೇಶ ಒಂದೇ ಇದೆ, ನಾವೆಲ್ಲ ಒಂದಾಗಬೇಕಿದೆ. ಹಲವು ಉಪಪಂಗಡಗಳಿಗೆ ಸೌಲಭ್ಯ ಒದಗಿಸುವ ಯತ್ನ ಮಾಡುತ್ತೇನೆ.

ಇದನ್ನೂ ಓದಿ : Kshatriya Samavesha: ಜ.29ರ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮಾವೇಶ ಬೆಂಬಲಿಸಿ ರಾಮ ಕ್ಷತ್ರಿಯ ಸಂಘಟನೆಯ ಬೃಹತ್ ಬೈಕ್ ರ‍್ಯಾಲಿ

ಅರುಣ್​ ಸಿಂಗ್​ ಜತೆ ಬೊಮ್ಮಾಯಿ ಮಾತುಕತೆ

ನಿಮ್ಮ ಸಮಾಜಕ್ಕೆ ನೆರವಾಗುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ಬಜೆಟ್ ಮಾಡುವಾಗ ನಿಮ್ಮ ಬೇಡಿಕೆ ಗಮನದಲ್ಲಿಟ್ಟುಕೊಂಡಿರುತ್ತೇನೆ. ಕ್ಷತ್ರಿಯ ಸಮುದಾಯಭವನ ನಿರ್ಮಾಣದ ಭರವಸೆ ನೀಡುತ್ತಿದ್ದೇನೆ. ಬೆಂಗಳೂರಲ್ಲಿ ಜಾಗ ಗುರುತಿಸಿ ಕೇಂದ್ರ ಕಚೇರಿ ಮಾಡಲು ಚಿಂತನೆ ಮಾಡುತ್ತೇನೆ. ಜ್ಞಾನದ ಕತ್ತಿ ಹಿಡಿಯೋದು ಗೊತ್ತಿದೆ ಎಂದು ವಿವೇಕಾನಂದರು ತಿಳಿಸಿದ್ದಾರೆ. ರಾಮ, ಕೃಷ್ಣ, ಶಿವಾಜಿ, ರಾಣಾ ಪ್ರತಾಪಸಿಂಗ್ ಎಲ್ಲರೂ ಕ್ಷತ್ರಿಯರು. ನಿಮ್ಮ ಸಮುದಾಯದ ಜತೆ ಸದಾ ಇರುತ್ತೇನೆ ಎಂದರು.

Exit mobile version