Site icon Vistara News

KSRTC Bus : ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ

KSRTC BUS Woman locks in window of KSRTC bus after going to spit

ಬೆಂಗಳೂರು/ಉಡುಪಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (KSRTC Bus) ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆಯು ಲಾಕ್‌ ಆದ ಘಟನೆ ನಡೆದಿದೆ. ಕಿಟಿಕಿಯಲ್ಲಿ ತಲೆ ಸಿಕ್ಕಿಸಿಕೊಂಡ ಪರಿಣಾಮ ಮಹಿಳೆ ಕೆಲಕಾಲ ಪರದಾಡಬೇಕಾಯಿತು.

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಎಂಜಲು ಉಗುಳಲು ಬಸ್‌ನ ಕಿಟಿಕಿಯ ಸಣ್ಣ ಸಂದಿಯೊಳಗೆ ತಲೆಯನ್ನು ಹೊರಹಾಕಿದ್ದರು. ಹೀಗೆ ಹೊರ ಹಾಕಿದ ತಲೆಯು ವಾಪಸ್‌ ಹಿಂದಕ್ಕೆ ಬಾರದೇ ಅಲ್ಲೆ ಲಾಕ್‌ ಆಗಿತ್ತು. ಕಾರಣ ಕಿಟಕಿಯ ಸಣ್ಣ ಜಾಗಕ್ಕೆ ನುಗ್ಗಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ತಲೆ ಲಾಕ್ ಆಗಿತ್ತು.

ಈ ವೇಳೆ ಮಹಿಳೆಯ ಪರದಾಟ ಹಾಗೂ ಕೂಗಾಟ ಕಂಡು ಸಹ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಮಹಿಳೆ ತಲೆ ಲಾಕ್‌ ಆಗಿರುವುದು ಗಮನಕ್ಕೆ ಬಂದಾಕ್ಷಣ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿದ್ದಾರೆ. ಬಳಿಕ 15 ನಿಮಿಷಗಳ ಕಾರ್ಯಾಚರಣೆ ಮಾಡಿ, ಜಾಗರೂಕತೆಯಿಂದ ಮಹಿಳೆಯ ತಲೆಯನ್ನು ಕಿಟಿಕಿಯಿಂದ ಬಿಡಿಸಿ, ರಕ್ಷಿಸಿದ್ದಾರೆ.

ಇತ್ತ ಮಹಿಳೆಯು ಬದುಕಿತು ಬಡ ಜೀವ ಎಂಬಂತೆ ತಲೆಯನ್ನು ಒಳಗೆ ಎಳೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಯಾಕ್ ಬೇಕಿತ್ತು ಈ ಅವಾಂತರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Road Accident : ಮೈಸೂರು- ಬೆಂಗಳೂರಲ್ಲಿ ಮೂವರ ಪ್ರಾಣ ಕಸಿದ ಮೂರು ಪ್ರತ್ಯೇಕ ಅಪಘಾತ

ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಹಲ್ಲೆ

ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಯ ಮೇಲೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಘಟನೆ ನಡೆದಿದೆ. ಕೆಎಸ್‌ಆರ್‌ಟಿಸಿ ಬಸ್‌ ಆಗುಂಬೆಯಿಂದ ಹೆಬ್ರಿಗೆ ಹೊರಟಿತ್ತು. ಈ ವೇಳೆ ಬಸ್ ಹಿಂದೆ ಇದ್ದ ಪ್ರವಾಸಿಗರ ಕಾರಿಗೆ ಸೈಡ್ ನೀಡಲಿಲ್ಲ ಎನ್ನುವ ಆರೋಪವಿದೆ. ಹೀಗಾಗಿ ಗಾಟಿಯ ಮಧ್ಯೆ ಬಸ್‌ಗೆ ಅಡ್ಡಹಾಕಿ ನಿರ್ವಾಹಕ ಮತ್ತು ಚಾಲಕನಿಗೆ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಿಂದಾಗಿ ಘಾಟಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version