ಬೆಂಗಳೂರು: ಮನೆಯೊಂದರ ಸಂಪ್ ಸ್ವಚ್ಛಗೊಳಿಸುವ ವೇಳೆಯಲ್ಲಿ ಕರೆಂಟ್ ಶಾಕ್ (electric shock) ಹೊಡೆದು ಕಾರ್ಮಿಕ ಸಾವಿಗೀಡಾದ (Laborer Death) ಘಟನೆ ಜಯನಗರದ 4ನೇ ಬ್ಲಾಕ್‌ನಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಈ ದುರಂತ ಸಂಭವಿಸಿದ್ದು, ಆದಿನಾರಾಯಣ್ ನಾಯ್ಕ್ (44) ಎಂಬವರು ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ ಸಂತೋಷ್ ಎಂಬವರ ಬಿಲ್ಡಿಂಗ್‌ನಲ್ಲಿ ಸಂಪ್ ಕ್ಲೀನ್ ಮಾಡಲು ಆದಿನಾರಾಯಣ್ ನಾಯ್ಕ ಹೋಗಿದ್ದರು. ಕಂಟ್ರಾಕ್ಟರ್ ಚಂದ್ರು ಎಂಬವರ ಮೂಲಕ ಸಂಪ್ ಸ್ವಚ್ಛಗೊಳಿಸಲು ಇವರು ಒಪ್ಪಿಕೊಂಡಿದ್ದರು.
ಈ ವೇಳೆ ಮಾಲೀಕ ಮೋಟಾರ್ ಆಫ್ ಮಾಡದೆ ಸಂಪ್ ಸ್ವಚ್ಛಗೊಳಿಸಲು ತಿಳಿಸಿ ಹೋಗಿದ್ದರು. ಸಂಪ್ ಒಳಗೆ ಇಳಿದು ಸ್ವಚ್ಛಗೊಳಿಸುವಾಗ ಅದರಲ್ಲಿದ್ದ ನೀರಿನಲ್ಲಿ ಕರೆಂಟ್ ಪ್ರಹರಿಸಿ ಶಾಕ್ ಹೊಡೆದು ನಾಯ್ಕ ಒದ್ದಾಡಿದ್ದರು. ಕೂಡಲೇ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮೃತರ ಪತ್ನಿಯಿಂದ ಬಿಲ್ಡಿಂಗ್ ಮಾಲೀಕ ಹಾಗೂ ಕಂಟ್ರಾಕ್ಟರ್ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮಾನಾಸ್ಪದವಾಗಿ ವಿದ್ಯಾರ್ಥಿನಿ ಸಾವು
ಹೊಸಕೋಟೆ: ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾಗಿದ್ದಾಳೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಿಮಾ (18) ಶವವಾಗಿ ಪತ್ತೆಯಾದ ದ್ವೀತಿಯ ಪಿಯು ವಿದ್ಯಾರ್ಥಿನಿ. ಮುಳಬಾಗಿಲು ತಾಲೂಕಿನ ನಂಗಲಿ ಮೂಲದ ವಿದ್ಯಾರ್ಥಿನಿಯಾಗಿರುವ ಈಕೆ ಅಜ್ಜಿ ಮನೆಯಲ್ಲಿದ್ದು ಹೊಸಕೋಟೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಅಜ್ಜಿ ಬೆಳಗ್ಗೆ ಹೂವಿನ ವ್ಯಾಪಾರಕ್ಕೆ ಹೋದ ವೇಳೆ ಘಟನೆ ನಡೆದಿದೆ. ಮೊಮ್ಮಗಳಿಗೆ ಅಜ್ಜಿ ಫೋನ್ ಮಾಡಿದಾಗ ತೆಗೆದಿರಲಿಲ್ಲ. ಹೀಗಾಗಿ ಪಕ್ಕದ ಮನೆಯವರನ್ನು ಕಳಿಸಿ ನೋಡಿದಾಗ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಗಳ ಅಕಾಲಿಕ ಸಾವು ಕಂಡು ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Heart Attack : ಆಟೋದಲ್ಲಿ ಕುಳಿತಿದ್ದಾಗಲೇ ಎದೆನೋವು; ಕೆಳಗಿಳಿದ ಕೂಡಲೇ ಕುಸಿದು ಬಿದ್ದು ಚಾಲಕ ಸಾವು