Site icon Vistara News

Labour protest: ಸರ್ಕಾರದ ವಿರುದ್ಧ ಸಿಡಿದೆದ್ದ ಕಾರ್ಮಿಕರು, ಬೃಹತ್‌ ಪ್ರತಿಭಟನೆ

Labour protest in Bangalore

ಬೆಂಗಳೂರು: ಕಟ್ಟಡ (Building Labours) ಮತ್ತು ಅಸಂಘಟಿತ ವಲಯದ ಕಾರ್ಮಿಕರು (Labours from Unorganized sector) ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್‌ ಪ್ರತಿಭಟನೆ (Labour Protest) ನಡೆಸಿದರು. ಕಾರ್ಮಿಕ ಇಲಾಖೆಯ ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಭಾಗಿಯಾಗಿದ್ದರು.

ಕಾರ್ಮಿಕರ ಪ್ರಮುಖ ಬೇಡಿಕೆಗಳು

1. ನೋಂದಣಿ ಮತ್ತು ನವೀಕರಣ ಅವಧಿಯನ್ನು ಮೊದಲಿನಂತೆ ಮೂರು ವರ್ಷಕ್ಕೆ ವಿಸ್ತರಿಸಬೇಕು.

2.ನೋಂದಣಿ ಮತ್ತು ಸವಲತ್ತುಗಳಿಗಾಗಿ ಅರ್ಜಿಹಾಕಲು ಅವೈಜ್ಞಾನಿಕ ಮಾನದಂಡಗಳನ್ನು ತಕ್ಷಣದಿಂದ ನಿಲ್ಲಿಸಬೇಕು.

3. ಶೈಕ್ಷಣಿಕ ಸಹಾಯಧನಕ್ಕೆ ಸಂಬಂಧಿಸಿದಂತೆ ಈಗಾಗಲೆ ಏಕಾಏಕಿ ಇಳಿಕೆಮಾಡಿ 30/10/2023 ರಂದು ಹೊರಡಿಸಿರುವ ಆದೇಶವನ್ನು ರದ್ದು ಮಾಡಬೇಕು.

4. ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಜಮಾ ಆಗಿರುವುದಿಲ್ಲ ಅಂತಹ ಕಾರ್ಮಿಕರಿಗೆ ಮಾಹಿತಿ ನೀಡಿ ಅವಶ್ಯಕತೆ ಇರುವ ದಾಖಲೆಗಳನ್ನು ಪಡೆದು ಸಹಾಯಧನ ಜಮಾ ಮಾಡಬೇಕು.

5.ಪ್ರತಿ ತಾಲೂಕಿನಲ್ಲಿ ತಾಲೂಕುವಾರು ಪ್ರತ್ಯೇಕವಾಗಿ ಕಾರ್ಮಿಕ ನಿರೀಕ್ಷಕರನ್ನು ನೇಮಕಾತಿ ಮಾಡಬೇಕು.ʼ

6. ಫಲಾನುಭವಿಗಳು ಕೆಲವು ಸವಲತ್ತುಗಳನ್ನು ಪಡೆಯುವಾಗ ಅರ್ಜಿಗಳನ್ನು ಹಾಕಲು ಆರು ತಿಂಗಳು ನಿಗಧಿ ಮಾಡಿರುವ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಬೇಕು.

7. 60 ವರ್ಷ ತುಂಬಿದ ನಂತರ ನೀಡುವ ಪಿಂಚಣಿಗಾಗಿ ಸಲ್ಲಿಸುವ ಅರ್ಜಿಯ ನಿರ್ಧಿಷ್ಟ ಅವಧಿಯನ್ನು ಸಮಾಜ ಕಲ್ಯಾಣ ಇಲಾಖೆ ಮಾದರಿಯಂತೆ ಅನಿರ್ದಿಷ್ಟ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು..

8.ಈ ಹಿಂದೆ ತಂದಿರುವ “ಕಾರ್ಮಿಕ ಗೃಹಭಾಗ್ಯ” ಮತ್ತು “ಕಾರ್ಮಿಕ ಅನಿಲಭಾಗ್ಯ” ಯೋಜನೆಯನ್ನು ತಕ್ಷಣ ಕಾರ್ಯರೂಪಕ್ಕೆ ತರುವ ಮೂಲಕ ಕಾರ್ಮಿಕರಿಗೆ ನೆರವು ಅಗಬೇಕು.

9. ಈಗಾಗಲೆ ಸರ್ಕಾರವೆ ವಿಶೇಷ ಅಸಂಘಟಿತ ಕಾರ್ಮಿಕರೆಂದು ಗುರುತಿಸಿರುವ ಫಲಾನುಭವಿಗಳು ಸಹಜಮರಣ ಹೊಂದಿದಾಗ ಅಂತ್ಯಕ್ರಿಯೆ ವೆಚ್ಚ ಮತ್ತು ಸಹಾಯಧನವನ್ನು ಕಲ್ಪಿಸಬೇಕು.

10. ಖಾಸಗಿ ವಾಣಿಜ್ಯ ವಾಹನ ಚಾಲಕರ ಮೇಲೆ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಮೋಟಾರು ವಾಹನ ಕಾಯ್ದೆ, ಹಿಟ್ ಅಂಡ್ ರನ್ ಪ್ರಕರಣ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಬೇಕು.

ಇದನ್ನೂ ಓದಿ: Farmers protest : ಅನ್ನದಾತರಿಂದ ಬೆಂಗಳೂರು ಚಲೋ; ಸಾಲ ಮನ್ನಾ, ರೈತ ಪರ ಬಜೆಟ್‌ಗೆ ಹಕ್ಕೊತ್ತಾಯ

Exit mobile version