Site icon Vistara News

ಭೂಮಾಲೀಕರಿಗೆ ವಾರದೊಳಗೆ ಪರಿಹಾರ ನೀಡಲು ಕ್ರಮ: ಸಚಿವ ವಿ. ಸೋಮಣ್ಣ

Congress leaders opposing v somanna joining congress party

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರದ ಯೋಜನೆಗೆ ಭೂ ಸ್ವಾಧೀನಗೊಳಿಸಲಾಗಿದೆ. ಈ ಬಗ್ಗೆ ಬೆಂಗಳೂರು ಗ್ರಾಮಾಂತರ- ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭೂ ಮಾಲೀಕರ ಹಾಗೂ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಭೂ ಮಾಲೀಕರಿಗೆ ಶೀಘ್ರದಲ್ಲೇ ಪರಿಹಾರಧನವನ್ನು ನೀಡಲಾಗುವುದು ಎಂದು ವಸತಿ ಮತ್ತು ಮೂಲ ಸೌಲಭ್ಯ ಸಚಿವರಾದ ವಿ ಸೋಮಣ್ಣ ತಿಳಿಸಿದರು.

ಸೂರ್ಯ ನಗರದ 4ನೇ ಹಂತದ ಯೋಜನಾ ಪ್ರದೇಶದ ಭೂ ಮಾಲೀಕರು ಮತ್ತು ಅಧಿಕಾರಿಗಳ ಸಭೆ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೂರ್ಯ ನಗರದ 4ನೇ ಹಂತದ ಯೋಜನಾ ಪ್ರದೇಶದಲ್ಲಿ ಭೂಸ್ವಾಧೀನ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭೂ ಸ್ವಾಧೀನಕ್ಕೊಳಗಾದ ಪ್ರದೇಶದಲ್ಲಿರುವ ಮನೆ ಕಟ್ಟಡ, ಕೋಳಿಗೂಡು ಮರ ಹಾಗೂ ಬೋರ್‌ವೆಲ್‌ಗಳಿಗೆ ನ್ಯಾಯ ಸಮ್ಮತವಾದ ಪರಿಹಾರ ನೀಡುವಂತೆ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ | ಗಲಭೆ ನಡೆಸಿ ಅಧಿಕಾರಕ್ಕೇರಲು ಕಾಂಗ್ರೆಸ್‌ ಪ್ರಯತ್ನ: ನಳಿನ್‌ ಕುಮಾರ್‌ ಕಟೀಲ್‌ ಆರೋಪ

ಸೂರ್ಯ ನಗರದ ಭೂಸ್ವಾಧೀನ ಅಂತಿಮ ಅಧಿಸೂಚನೆಯಂತೆ ಒಟ್ಟು 1,938 ಎಕರೆ 13ಗುಂಟೆ ಜಾಗದಲ್ಲಿ 813 ಭೂಮಾಲೀಕರು ಇದ್ದಾರೆ. ಈವರೆಗೆ 454 ಜನ ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ. 359 ಜನ ಒಪ್ಪಿಗೆಯ ಪತ್ರ ನೀಡಿಲ್ಲ. ಇದರಿಂದಾಗಿ 440 ಎಕರೆ ಭೂಸ್ವಾಧೀನದ ಪ್ರಕ್ರಿಯೆ ಇನ್ನೂ ಬಾಕಿ ಇದೆ ಎಂದರು.

ಈಗಾಗಲೇ ವಸತಿ ಯೋಜನೆಯಡಿ 981 ಎಕರೆ ಭೂಮಿ ಸ್ವಾಧೀನಗೊಳಿಸಲು ಸರಕಾರ ಒಪ್ಪಿಗೆ ನೀಡಿದೆ. ಆದರೆ 339 ಎಕರೆ ಭೂಮಿಗೆ ಸಂಬಂಧಿಸಿದ ಮಾಲೀಕರು ಸಿವಿಲ್ ನ್ಯಾಯಾಲಯದಲ್ಲಿ ತಕಾರರು ಪ್ರಕರಣ ದಾಖಲಿಸಿದ್ದಾರೆ. ಈ ಕಾರಣದಿಂದ ಮುಂಗಡ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ 276 ಎಕರೆ ಜಮೀನಿಗೆ ಪ್ರತಿ ಎಕರೆಗೆ ₹20 ಲಕ್ಷದಂತೆ ಒಟ್ಟು ₹55.20 ಕೋಟಿ ಮುಂಗಡ ಹಣ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ವಸತಿ ಇಲಾಖೆ ಆಯುಕ್ತರಾದ ಡಿ ಎಸ್ ರಮೇಶ್, ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Interest rate hike soon : ಬಡ್ಡಿ ದರದಲ್ಲಿ ಶೀಘ್ರ 1% ಹೆಚ್ಚಳದ ಸುಳಿವು ನೀಡಿದ ಆರ್‌ಬಿಐ

Exit mobile version