ಬೆಂಗಳೂರು: ಲಸಿಕೆ ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ತಿಳಿಸಿದ್ದ ರಾಹುಲ್ ಗಾಂಧಿ (Rahul Gandhi), ಇದೇ ಕಾರಣಕ್ಕೆ ಮದುವೆ ಆಗಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಕ್ಕೆ ಕಾಂಗ್ರೆಸ್ ಲೀಗಲ್ ನೋಟಿಸ್ ನೀಡಿದೆ.
ಕೆಪಿಸಿಸಿ ಯುವ ಘಟಕದ ಕಾನೂನು ಕೋಶದ ಅಧ್ಯಕ್ಷ ಶತಭಿಷ್ ಶಿವಣ್ಣ ನೋಟಿಸ್ ನೀಡಿದ್ದು, ಕಟೀಲ್ ಹೇಳಿಕೆಯಿಂದ ರಾಹುಲ್ ಗಾಂಧಿಯವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಾನಹಾನಿಯಾಗಿದೆ ಎಂದಿದ್ದಾರೆ.
ರಾಮನಗರದಲ್ಲಿ ಮಾರ್ಚ್ 5ರಂದು ಮಾತನಾಡಿದ್ದ ಕಟೀಲ್, ಲಸಿಕೆ ತೆಗೆದುಕೊಳ್ಳಬೇಡಿ ಮಕ್ಕಳಾಗುವುದಿಲ್ಲ ಎಂದು ರಾಹುಲ್ ಗಾಂದಿ ಹಾಗೂ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ ರಾತ್ರೋರಾತ್ರಿ ಕದ್ದುಮುಚ್ಚಿ ಲಸಿಕೆ ಪಡೆದು ಬಂದರು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಮದುವೆ ಆಗಿಲ್ಲ ಎಂದು ಎಂಎಲ್‌ಸಿ ಮಂಜುನಾಥ್ ಹೇಳುತ್ತಿದ್ದರು ಎಂದು ಹೇಳಿದ್ದರು.
ಈ ಹೇಳಿಕೆಯು ಅತ್ಯಂತ ಕೀಳು ಅಭಿರುಚಿಯಿಂದ ಕೂಡಿದೆ. ಈ ಮಾತನ್ನು ಕೂಡಲೆ ಹಿಂಪಡೆಯಬೇಕು ಹಾಗೂ ಮಾನನಷ್ಟಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು. 15 ದಿನದೊಳಗೆ ಈ ಲೀಗಲ್ ನೋಟಿಸ್‌ಗೆ ಉತ್ತರಿಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Karnataka Election : ರಾಹುಲ್ ಮದುವೆ ಆಗದಿರುವುದಕ್ಕೆ ಏನು ಕಾರಣ? ವಿದಾದಾತ್ಮಕ ಹೇಳಿಕೆ ನೀಡಿದ ನಳಿನ್ ಕುಮಾರ್ ಕಟೀಲ್