Site icon Vistara News

Love affair : ಪ್ರಿಯಕರ ಪೊಲೀಸನನ್ನು ಬೆಂಕಿ ಹಚ್ಚಿ ಕೊಂದ ಹೋಂ ಗಾರ್ಡ್‌ ರಾಣಿ; ಹಿಂದಿದೆ 2ನೇ ಲವ್‌ ಸ್ಟೋರಿ!

Police murder Case sanjay and Rani

ಬೆಂಗಳೂರು: ಇದು ಅವಿವಾಹಿತ ಪೊಲೀಸ್‌ ಕಾನ್ಸ್‌ಟೇಬಲ್‌ (police Constable) ಮತ್ತು ವಿವಾಹಿತ ಹೋಮ್‌ ಗಾರ್ಡ್‌ ಮಹಿಳೆ (Home guard woman) ನಡುವಿನ ಲವ್‌ ಕಂ ಹೇಟ್‌ ಸ್ಟೋರಿ (Love affair). ಮದುವೆಯಾಗಿದ್ದರೂ ಎರಡೆರಡು ಪ್ರೇಮಿಗಳನ್ನು ಮೆಂಟೇನ್‌ ಮಾಡುತ್ತಿದ್ದ ಆಕೆ ಒಬ್ಬರಿಗೆ ಗೊತ್ತಾಗದಂತೆ ಇನ್ನೊಬ್ಬನ ಜತೆ ಚಕ್ಕಂದ ಆಡುತ್ತಿದ್ದಳು. ಇದು ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಗೊತ್ತಾಯಿತು. ಆತ ಅದನ್ನು ಪ್ರಶ್ನಿಸಿದ್ದೇ ತಡ, ಆಕೆ ಪೆಟ್ರೋಲನ್ನು ಅವನ ಮೇಲೆ ಸುರಿದು ಬೆಂಕಿ ಹಚ್ಚೇ ಬಿಟ್ಟಳು! ಮುಂದೇನಾಯಿತು?

ಅವರಿಬ್ಬರೂ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದರು. ಅವನು ಪೊಲೀಸ್‌ ಕಾನ್ಸ್‌ ಟೇಬಲ್‌ ಸಂಜಯ್‌. ಅವಳು ಹೋಮ್‌ ಗಾರ್ಡ್‌ ರಾಣಿ. ಅವರಿಬ್ಬರು ಠಾಣೆಯಲ್ಲಿ ಕೆಲಸ ಮಾಡಿದ್ದಕ್ಕಿಂತ ಲವ್ವಿಡವ್ವಿ ಮಾಡ್ಕೊಂಡು ಚಕ್ಕಂದ ಆಡಿದ್ದೇ ಹೆಚ್ಚು!

ಹಾಗಂತ ಅವಳೇನೂ ಇನ್ನೂ ಎಳೆ ಯುವತಿಯಲ್ಲ. ಮದುವೆಯಾಗಿ ಗಂಡ ಇದ್ದಾನೆ, ಮಕ್ಕಳೂ ಇದ್ದಾರೆ. ಆದರೆ, ಪ್ರೇಮದ ಆಕರ್ಷಣೆಯನ್ನು ಬಿಡಲಾಗದೆ ಆಕೆ ಕಾನ್ಸ್‌ಟೇಬಲ್‌ನನ್ನು ಆವರಿಸಿಕೊಂಡಿದ್ದಳು. 2021ರಿಂದಲೇ ಅವರು ಸ್ವಚ್ಛಂದ ಹಕ್ಕಿಗಳಂತೆ ಹಾರಾಡುತ್ತಿದ್ದರು.

ಆದರೆ, ಇತ್ತೀಚೆಗೆ ಯಾಕೋ ಹೋಮ್‌ ಗಾರ್ಡ್‌ ಲವ್ವರ್‌ ಪೊಲೀಸ್‌ ಕಾನ್ಸ್‌ಟೇಬಲ್‌ ನನ್ನು ದೂರ ಮಾಡಲು ಶುರು ಮಾಡಿದ್ದಳು. ಇದು ಅಷ್ಟು ದಿನ ಆಕೆಯ ಜತೆ ಓಡಾಡಿ ಮಜಾ ಮಾಡಿದ್ದ ಕಾನ್‌ಸ್ಟೇಬಲ್‌ಗೆ ಸಹಿಸಲು ಸಾಧ್ಯವಾಗಲಿಲ್ಲ. ಏನಾಗಿದೆ ಎಂದು ಹೇಳು ಎಂದು ಆಕೆಯನ್ನು ಪದೇಪದೇ ಕೇಳಿದ್ದ. ಆದರೆ, ಆಕೆ ಏನೂ ಹೇಳಿರಲಿಲ್ಲ. ಬಹುಶಃ ಗಂಡ, ಮಕ್ಕಳು ಎನ್ನುವ ಕಾರಣ ಹೇಳಿರಬೇಕು.

ಅದೇನೇ ಹೇಳಿದರೂ ಪೊಲೀಸ್‌ ತಡೆದುಕೊಳ್ಳಲು ಆಗಲೇ ಇಲ್ಲ. ಕಳೆದ ಡಿಸೆಂಬರ್‌ 6ರಂದು ಸಂಜೆ ರಾಣಿ ಸಂಜಯ್‌ಗೆ ಕರೆ ಮಾಡಿ ಇವತ್ತು ಸಿಗೋಣ ಎಂದಿದ್ದಳು. ಅವನು ಕೂಡಲೇ ಆಕೆಯ ಮನೆಗೆ ಓಡಿದ. ಅವರಿಬ್ಬರೂ ತಮ್ಮ ಎಂದಿನ ದಿನಚರಿಯಂತೆ ಪರಸ್ಪರ ಖುಷಿಯಿಂದ ಸೇರಿದರು. ಅಷ್ಟು ಹೊತ್ತಿಗೆ ಒಂದು ಬಾಂಬ್‌ ಬಿತ್ತು!

ಅವರಿಬ್ಬರೂ ಖುಷಿಯಲ್ಲಿ ತೇಲುತ್ತಿರುವ ಹೊತ್ತಿನಲ್ಲೇ ಒಂದು ಫೋನ್‌ ಬಂತು. ಅದರಲ್ಲಿದ್ದ ಹೆಸರು ಸುಚೇತನ್‌ (ಹೆಸರು ಬದಲಿಸಲಾಗಿದೆ). ಆ ಹೆಸರು ನೋಡಿದವನೇ ಅವನು ಯಾರು ಎಂದು ಕಾನ್‌ಸ್ಟೇಬಲ್‌ ಪ್ರಶ್ನೆ ಮಾಡಿದ್ದಾನೆ. ಆಕೆ ಸರಿಯಾಗಿ ಉತ್ತರಿಸಲಿಲ್ಲ.

ಸಂಜಯ್‌ ಕೂಡಲೇ ಆಕೆಯ ಮೊಬೈಲ್‌ ಕಿತ್ತುಕೊಂಡು ಚೆಕ್‌ ಮಾಡಿದಾಗ ಅವಳ ಇನ್ನೊಂದು ಲವ್‌ ಸ್ಟೋರಿ ಬೆಳಕಿಗೆ ಬಂದಿದೆ. ಈ ಹೋಮ್‌ ಗಾರ್ಡ್‌ ಸುಚೇತನ್‌ ಜತೆಗೂ ಲವ್ವಿ ಡವ್ವಿ ಆಡುತ್ತಿದ್ದಳು. ನನ್ನ ಜತೆಗಿದ್ದ ಆಕೆ ಬೇರೆಯವರ ಜತೆ ಚಕ್ಕಂದ ಆಡುತ್ತಿರುವುದು, ಸಲಿಗೆಯಿಂದ ಇರುವುದು ನೋಡಿ ಕಾನ್‌ಸ್ಟೇಬಲ್‌ಗೆ ಸಹಿಸಲಾಗಲಿಲ್ಲ.

ಅವರಿಬ್ಬರ ಮಧ್ಯೆ ಜಗಳ ತಾರಕಕ್ಕೇರಿದೆ. ಆಗ ರಾಣಿ ಕೂಡಾ ಬಿಡಲಿಲ್ಲ. ನನ್ನ ಬಗ್ಗೆ ಪ್ರಶ್ನೆ ಮಾಡಿದರೆ ನಿನ್ನನ್ನು ಜೀವಂತ ಬಿಡಲ್ಲ, ಪೆಟ್ರೋಲ್‌ ಹಾಕಿ ಸುಟ್ಟು ಹಾಕುತ್ತೇನೆ ಎಂದಿದ್ದಾಳೆ. ಅವರಿಬ್ಬರ ಮಧ್ಯ ಪಂಥಾಹ್ವಾನ ನಡೆದಿದೆ.

ಈ ನಡುವೆ, ಕಾನ್ಸ್‌ಟೇಬಲ್‌ ಸಂಜಯ್‌ ಪೆಟ್ರೋಲ್‌ ಪಂಪ್‌ಗೆ ಹೋದವನೇ ಒಂದು ಲೀಟರ್‌ ಪೆಟ್ರೋಲ್‌ ಹಿಡಿದುಕೊಂಡುಬಂದಿದ್ದಾನೆ. ಅದನ್ನು ಆಕೆಯ ಮುಂದೆ ಇಟ್ಟು ತಾಕತ್ತಿದ್ದರೆ ಬೆಂಕಿ ಹಚ್ಚು ನೋಡೋಣ ಎಂದಿದ್ದಾನೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ರಾಣಿ ಪೆಟ್ರೋಲನ್ನು ಸಂಜಯ್‌ ಬೆನ್ನಿಗೆ ಸುರಿದು ಬೆಂಕಿ ಹಚ್ಚೇಬಿಟ್ಟಿದ್ದಾಳೆ.

ಅಷ್ಟು ಹೊತ್ತಿಗೆ ಆಕೆಗೆ ಜ್ಞಾನೋದಯ ಆಗಿದೆ. ಕೂಡಲೇ ಆಕೆ ನೀರು ಹಾಕಿ ಬೆಂಕಿ ನಂದಿಸಿ ತನ್ನ ವಾಹನದಲ್ಲಿ ಸಂಜಯ್‌ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಅಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂಬ ನಾಟಕ ಆಡಿದ್ದಾಳೆ. ಪೊಲೀಸರ ತನಿಖೆ ವೇಳೆ ಈಕೆ ಹೋಮ್‌ ಗಾರ್ಡ್‌ ಮತ್ತು ಅವನು ಪೊಲೀಸ್‌ ಎನ್ನುವುದು ಹಾಗೂ ಅವರಿಬ್ಬರ ಲವ್‌ ಸ್ಟೋರಿ ಬಯಲಾಗಿದೆ.

ಇದನ್ನೂ ಓದಿ: Murder Case : ಅನೈತಿಕ ಸಂಬಂಧದ ಸಂಶಯ; ಪತಿಯ ಎದೆಗೇ ಚೂರಿ ಹಾಕಿ ಕೊಂದ ಪತ್ನಿ

ಪ್ರಾಣವನ್ನೇ ಕಳೆದುಕೊಂಡ ಸಂಜಯ್‌

ಈ ನಡುವೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿಯ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಸಂಜಯ್‌ ಈಗ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾನೆ. ಕಾಮದ ಬೆನ್ನು ಹತ್ತಿ ಹೋಗಿ, ಬಳಿಕ ವಿಪರೀತ ಪೊಸೆಸಿವ್‌ನೆಸ್‌ನಿಂದಾಗಿ ಒಂದು ಜೀವವೇ ಹೋಗಿದೆ. ಇದೀಗ ಪೊಲೀಸರು ರಾಣಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.

ಒಬ್ಬನೇ ಮಗನನ್ನು ಕಳೆದುಕೊಂಡ ಹೆತ್ತವರು

ಸಂಜಯ್‌ ತಂದೆ ರಾಜಣ್ಣ ಮತ್ತು ಶಿವರತ್ನಮ್ಮ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದು, ಮಗನನ್ನು ಕಳೆದುಕೊಂಡ ದುಖದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಚೆನ್ನರಾಯಪಟ್ಟಣದ ಈ ದಂಪತಿಗೆ ಸಂಜಯ್‌ ಒಬ್ಬನೇ ಮಗ. ಉಳಿದ ಮೂರು ಜನ ಹೆಣ್ಣು ಮಕ್ಕಳು. ಆತ ಪೊಲೀಸ್‌ ಇಲಾಖೆಗೆ ಸೇರಿ ಆರು ವರ್ಷವಾಗಿದೆ. ಈಗ ಕುಟುಂಬ ತನಗೆ ಆಸರೆಯಾದ ಮಗನನ್ನು ಕಳೆದುಕೊಂಡಿದೆ. ಸಂಜಯ್‌ ಕಳೆದ ಮೂರು ತಿಂಗಳಿನಿಂದ ವಿಶೇಷ ಕರ್ತವ್ಯದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದ.

ರಾಣಿ ಮೂಲತಃ ಮಂಡ್ಯದವಳು. ಹೋಮ್‌ ಗಾರ್ಡ್‌ ಆಗಿದ್ದು ಸದ್ಯ ಬೆಂಗಳೂರಿನ ಅಷ್ಟಲಕ್ಷ್ಮಿ ಲೇಔಟ್‌ನಲ್ಲಿ ವಾಸವಾಗಿದ್ದಾಳೆ. ಆಕೆ ಬೆಳಂದೂರಿನ ಎಸ್‌ಐಎಸ್‌ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದಾಳೆ.

Exit mobile version