ಬೆಂಗಳೂರು: ಇದೊಂಥರಾ ಲವ್, ಸೆಕ್ಸ್, ಕ್ರೈಂನ ಸಮ್ಮಿಲನ (Love and Crime). ಅವರಿಬ್ಬರು ಮೊದಲು ತುಂಬಾ ಚೆನ್ನಾಗಿದ್ದರು. ಚೆನ್ನಾಗಿದ್ದ ಕಾಲದಲ್ಲಿ ಮನೆ, ಹೋಟೆಲ್, ಲಾಡ್ಜ್ ಅನ್ನದೆ ಚೆನ್ನಾಗಿ ಜೂಟಾಟ ಆಡಿದ್ದರು. ಆದರೆ, ಈಗ ಯಾಕೋ ಪರಸ್ಪರ ಜಗಳ ಶುರುವಾಗಿದೆ. ಅವಳು ಅವನನ್ನು ದೂರ ಮಾಡಲು ನೋಡಿದ್ದಾನೆ. ಆದರೆ, ರುಚಿ ನೋಡಿದ ಅವನು ಮಾತ್ರ.. ಬಿಟ್ಟೋಗ್ಬೇಡ.. ನನಗೆ ನೀನೇ ಬೇಕು (Young man stalking woman) ಎನ್ನುವ ಧಾಟಿಯಲ್ಲಿ ಬೆನ್ನು ಹತ್ತುತ್ತಿದ್ದಾನಂತೆ. ಹೀಗಂತ ಮಹಿಳೆ ಬೆಂಗಳೂರಿನ ಆರ್.ಆರ್. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ (Bangalore News).
ಇದೊಂಥರಾ ಸೇಡಿಗೆ ಸೇಡು, ದೂರಿಗೆ ದೂರು ಅನ್ನೋ ತರದ ಕೇಸು. ಇಬ್ಬರೂ ಚೆನ್ನಾಗಿದ್ದವರು ನಂತರ ಯಾವುದೋ ಕಾರಣಕ್ಕೆ ಕಿತ್ತಾಡಿಕೊಂಡು ಈಗ ಬೀದಿ ಜಗಳಕ್ಕೆ ಇಳಿದು ಮಾನ ಹರಾಜು ಮಾಡಿಕೊಳ್ಳುತ್ತಿರುವ ಕಥೆ. ಇವರ ನಿಜವಾದ ಕಥೆ ಏನು ಅಂತ ತಿಳಿಯಲು ಅವರಿಬ್ಬರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದಾಖಲಿಸಿಕೊಂಡಿರುವ ಎರಡು ದೂರುಗಳನ್ನೂ ನೋಡಬೇಕು.
ಅಂದ ಹಾಗೆ ಈ ಕಥೆಯ ಹೀರೋಯಿನ್ ಸಿಂಧೂರಿ ಮನ್ನೆ. 34 ವರ್ಷದ ಈಕೆ ಕೋಣನಕುಂಟೆ ನಿವಾಸಿ. ವೃತ್ತಿಯಲ್ಲಿ ಟೆಕ್ಕಿ. ಅವಳ ಗಂಡ ಬಂಡ ಮಂಜುನಾಥ.. ಸಿಂಧೂರಿ ಟೀಮ್‌ನ ಇನ್ನೊಬ್ಬ ವ್ಯಕ್ತಿ ಸಾಗರ್ ಮಾಘನಹಳ್ಳಿ (33), ಉತ್ತರ ಹಳ್ಳಿ ನಿವಾಸಿ. ಪ್ರಕರಣದ ನಾಯಕ ಬೇಕಾದರೂ ಅನ್ನಿ, ವಿಲನ್ ಬೇಕಾದರೂ ಅನ್ನಿ.. ಅವನ ಹೆಸರು ಶೆರ್ವಿನ್ (24). ರಾಜರಾಜೇಶ್ವರಿ ನಗರದ ನಿವಾಸಿ.
Love and Crime : ಶೆರ್ವಿನ್ ನೀಡಿದ ದೂರಿನಲ್ಲಿ ಏನಿದೆ?
ಈ ಪ್ರಕರಣದಲ್ಲಿ ಮೊದಲು ದೂರು ಕೊಟ್ಟಿದ್ದು ರಾಜರಾಜೇಶ್ವರಿ ನಗರದ ನಿವಾಸಿಯಾಗಿರುವ ಶೆರ್ವಿನ್. ಅವನು ಹೇಳುವ ಪ್ರಕಾರ, ಅವನಿಗೂ ಸಿಂಧೂರಿ ಮನ್ನೆಗೂ ಒಂದು ವರ್ಷದ ಹಿಂದೆ ಪರಿಚಯವಾಗಿದೆ. ಪರಿಚಯವನ್ನು ಮಜಾ ಉಡಾಯಿಸಲು ಬಳಸಿಕೊಂಡ ಅವರಿಬ್ಬರು ಕಂಡ ಕಂಡ ಲಾಡ್ಜ್‌ಗೆ ನುಗ್ಗಿದರು, ಮಜಾ ಮಾಡಿದರು.
ಇದಾಗಿ ಸ್ವಲ್ಪ ಸಮಯ ಕಳೆಯುತ್ತಿದ್ದಂತೆಯೇ ಸಿಂಧೂರಿ ಇಷ್ಟೆಲ್ಲ ಮಜಾ ಮಾಡಿದಿಯಲ್ಲಾ.. ನನಗೆ 20 ಲಕ್ಷ ರೂ. ಕೊಡು ಎಂದು ಪೀಡಿಸಲು ಶುರು ಮಾಡಿದ್ದಾಳೆ. ಹಣ ಕೊಡದೆ ಹೋದರೆ ನನ್ನ-ನಿನ್ನ ವಿಷಯ ಎಲ್ಲವನ್ನೂ ನಿನ್ನ ಮನೆಯವರಿಗೆ ಹೇಳುತ್ತೇನೆ. ನಾವು ಮಜಾ ಉಡಾಯಿಸಿದ ವಿಡಿಯೊ, ಫೋಟೊಗಳು ಇವೆ. ಅದನ್ನು ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದನ್ನು ಅವಳ ಗಂಡನಿಗೆ ಹೇಳಿದರೆ ಅವನೂ ಇದ ಅವಳಿಗೆ ಗಂಡ ಬಂಡ ಮಂಜುನಾಥ್ ಮತ್ತು ಇನ್ನೊಬ್ಬ ಸಾಗರ್ ಮಾಘನಹಳ್ಳಿ ಸೇರಿ ಅವನ ಬೆನ್ನು ಹತ್ತಿದ್ದರು. ಹಣ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ.
ಈ ನಡುವೆ, ಆರೋಪಿಗಳು ಶೆರ್ವಿನ್‌ನನ್ನು ಪೀಡಿಸಿದ ಆರೋಪಿಗಳು ಚಿನ್ನಾಭರಣ ಅಡವಿರಿಸಿ 2 ಲಕ್ಷ ರೂ. ಹಣ ವಸೂಲಿ ಮಾಡಿದ್ದರು. ಇಷ್ಟೇ ಅಲ್ಲ, ಸಿಂಧೂರಿ ಮತ್ತು ಟೀಮ್ ನವೆಂಬರ್ 7ರಂದು ಶೆರ್ವಿನ್ ಮನೆಗೆ ನುಗ್ಗಿ ಹಲ್ಲೆ ಬೇರೆ ಮಾಡಿತ್ತಂತೆ. ಅದಾಗಿ ಕೆಲವು ದಿನದಲ್ಲಿ ಶೆರ್ವಿನ್ ವಿರುದ್ಧ ಸುಳ್ಳು ದೂರು ದಾಖಲಿಸಿ ಜೈಲಿಗೂ ಕಳುಹಿಸಿತ್ತು ಎಂದು ಹೇಳಲಾಗಿದೆ. ಈಗ ಶೆರ್ವಿನ್ ಜೈಲಿನಿಂದ ಹೊರಬಂದು ಈ ಟೀಮ್‌ನ ವಿರುದ್ಧ ದೂರು ದಾಖಲಿಸಿದ್ದಾನೆ.
ಇದನ್ನೂ ಓದಿ: Fraud Case : ಮದುವೆ ಮನೆಯಲ್ಲಿ ಹೈಡ್ರಾಮಾ; ಮಾಜಿ ಪ್ರೇಯಸಿ ಎಂಟ್ರಿ ಕೊಡ್ತಿದ್ದಂತೆಯೇ ವರ ಪರಾರಿ!
Love and Crime : ಬೇಡವೆಂದರೂ ಬಿಡದೆ ಕಾಡುತ್ತಿದ್ದಾನೆ ಅಂತಾಳೆ ಈ ಮಹಿಳೆ
ಇದಕ್ಕೆ ಸಂಬಂಧಿಸಿ ಸಿಂಧೂರಿ ಮನ್ನೆ ಡಿಫರೆಂಟ್ ಸ್ಟೋರಿ ಹೇಳ್ತಾಳೆ. ಅವನು ಮತ್ತು ನಾನು ಪರಿಚಿತರಾಗಿ ಒಟ್ಟಿಗೆ ಇದ್ದಿದ್ದು ನಿಜ. ಆಗ ನಾನು ಅವನಿಗೆ ತುಂಬಾ ಹಣ ಕೊಟ್ಟಿದ್ದೆ. ಆದರೆ ಆತನ ಬುದ್ಧಿ ತಿಳಿದು ದೂರ ಮಾಡಿದ್ದೆ. ಕೊಟ್ಟ ಹಣ ವಾಪಸ್ ಕೇಳಿದ್ದೆ.
ಆದರೆ ಈಗ ಅವನು ನನ್ನ ಮನೆ, ಕಚೇರಿಗೆಲ್ಲ ಬಂದು ಜಗಳ ಮಾಡುತ್ತಿದ್ದಾನೆ. ನನ್ನ ಮತ್ತು ಅವನ ಫೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಬೇಡವೆಂದರೂ ಬೆನ್ನು ಹತ್ತುತ್ತಾನೆ. ಅವನಿಂದ ಮುಕ್ತಿ ಕೊಡಿ ಎನ್ನುವುದು ಅವಳು ನೀಡಿದ ದೂರು.
ಇದನ್ನೂ ಓದಿ : Murder mystery : ಲವರ್ ಜತೆ ಸೇರಿ ಗಂಡನನ್ನೇ ಕೊಂದಳಾ ಹಂತಕಿ; ವಿಷಯ ತಿಳಿದ ಮಗಳ ಹತ್ಯೆಗೂ ಯತ್ನಿಸಿದ ಪಾತಕಿ!
ಇದೀಗ ಪೊಲೀಸರು ಇಬ್ಬರ ವಿಚಾರಗಳನ್ನೂ ಗಮನಿಸುತ್ತಿದ್ದಾರೆ. ಇದು ಮಹಿಳೆಯೊಬ್ಬಳ ಬೆನ್ನು ಹತ್ತಿದ ಯುವಕನ ಕಥೆಯಾ? ಅಥವಾ ಯುವಕನೊಬ್ಬ ಹನಿ ಟ್ರ್ಯಾಪ್‌ಗೆ ಬಿದ್ದ ಕಥೆಯಾ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ.