ಬೆಂಗಳೂರು: ಸಿರಿಯಲ್ ನಟಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು ಎಂದು ಯುವಕನೊಬ್ಬ ಆತ್ಮಹತ್ಯೆಗೆ (Love Case) ಶರಣಾಗಿದ್ದಾನೆ. ಮದನ್ (25) ಮೃತ ದುರ್ದೈವಿ. ಸಿರಿಯಲ್ ನಟಿ ವೀಣಾ ಎಂಬಾಕೆ ಜತೆಗೆ ಮದನ್ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ. ನಿನ್ನೆ ರಾತ್ರಿ ಇಬ್ಬರು ಒಂದೇ ರೂಮಿನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ನಂತರ ಮದನ್ ಜತೆಗೆ ವೀಣಾ ಮದುವೆ ಪ್ರಸ್ತಾಪಿಸಿದ್ದಳಂತೆ.
ಮದನ್ ಇವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಸಿರಿಯಲ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ವೀಣಾಳನ್ನು ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್ ಹೊಂದಿದ್ದರು.
ವೀಣಾ ಕನ್ನಡತಿ ಸೀರಿಯಲ್ ಹಾಗೂ ಕೆಲವು ಆ್ಯಡ್ ಗಳಲ್ಲಿ ನಟಿಸುತ್ತಿದ್ದಳು ಎನ್ನಲಾಗಿದೆ. ಸದ್ಯ ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಯುವತಿ ಹಲವು ಯುವಕರಿಗೆ ಮದುವೆ ಆಗುವುದಾಗಿ ವಂಚಿಸಿದ್ದಾಳೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಕೈ ಕೊಯ್ದುಕೊಂಡು ಗಲಾಟೆ ಮಾಡಿದ್ದ ನಟಿ
ಮದುವೆಯಾಗುವಂತೆ ಒತ್ತಾಯಿಸಿ ವೀಣಾ ಈ ಹಿಂದೆ ಕೈ ಕೊಯ್ದುಕೊಂಡು ಮದನ್ ಮನೆ ಮುಂದೆ ಗಲಾಟೆ ಮಾಡಿದ್ದಳಂತೆ. ವೀಣಾಗೆ ಹಲವು ಹುಡುಗರ ಪರಿಚಯವಿತ್ತು. ಇದರಿಂದ ಆಕೆಯ ಕ್ಯಾರೆಕ್ಟರ್ ಮೇಲೆ ಮದನ್ ಅನುಮಾನ ಪಟ್ಟಿದ್ದ. ಹೀಗಾಗಿ ಮದನ್ ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ.
ಆದರೆ ಫೋನ್ ಮೂಲಕ ಮದನ್‌ಗೆ ಟಾರ್ಚರ್ ನೀಡುತ್ತಿದ್ದಳಂತೆ. ಸಿಕೆ ಪಾಳ್ಯದಲ್ಲಿ ರೂಂ ಮಾಡಿ ವಾಸವಿದ್ದ ವೀಣಾ ನಿನ್ನೆಯೂ ಸಹ ಮದನ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ನಿನ್ನೆ ಇಬ್ಬರು ಪಾರ್ಟಿ ಮಾಡಿದ್ದು, 8:30 ರಾತ್ರಿಯಲ್ಲಿ ಮತ್ತೆ ಮದುವೆ ವಿಚಾರ ಪ್ರಸ್ತಾಪವಾಗಿದೆ. ಇಬ್ಬರೂ ಕಂಠಪೂರ್ತಿ ಪಾನಮತ್ತರಾಗಿದ್ದರು. ಈ ವೇಳೆ ವಾಶ್ ರೂಂ ಗೆ ಹೋಗಿ ಬರ್ತಿನಿ ಅಂತ ಹೇಳಿದ್ದ ಮದನ್, ಅಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ
ರಾಯಚೂರು: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ (Self harming) ಮಾಡಿಕೊಂಡಿದ್ದಾನೆ. ಜಮೀನು ವಿಚಾರಕ್ಕೆ (Land dispute) ಅತ್ತೆ – ಅಳಿಯನ ನಡುವೆ ಜಗಳ (Family Dispute) ನಡೆದಿದ್ದು, ಅತ್ತೆಯ ಬೆದರಿಕೆಗೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಹುಲಿಗೇಪ್ಪ (20) ಮೃತ ದುರ್ದೈವಿ.
ಮನೆಯಲ್ಲಿ ಯಾರು ಇಲ್ಲದ ವೇಳೆ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದಾನೆ. ಡೆತ್ ನೋಟ್‌ನಲ್ಲಿ ಜಾಗದ ವಿಚಾರವಾಗಿ ಅತ್ತೆ ಲಕ್ಷ್ಮಿ, ಅತ್ತೆಯ ಮಗಳ ಅನುರಾಧ, ಮಹಾದೇವಿ, ಅನಿಲ್ ಎಂಬುವವರ ಹೆಸರು ಪ್ರಸ್ತಾಪ ಮಾಡಿದ್ದಾನೆ. ನನ್ನ ಸಾವಿಗೆ ನನ್ನ ಅತ್ತೆ ಲಕ್ಷ್ಮಿದೇವಿ ಮತ್ತು ಆಕೆಯ ಮಕ್ಕಳೇ ಕಾರಣ. ನಮ್ಮ 17 ಗುಂಟೆ ಜಾಗ ತಮ್ಮದು ಎಂದು ನಮಗೆ ಬೆದರಿಕೆ ಹಾಕಿದ್ದಾರೆ. ನನ್ನ ಸಾವಿನ ಬಳಿಕವಾದರೂ ನಮ್ಮ ಜಾಗ ನಮಗೆ ಕೊಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಿರವಾರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ