ಬೆಂಗಳೂರು: ಮಹದೇವಪುರ ಕ್ಷೇತ್ರದಲ್ಲಿ ಕೆರೆಗಳು, ಕ್ರೀಡಾಂಗಣ, ರಸ್ತೆ ಸೇರಿ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ಶ್ರಮ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ (Karnataka Election) ಜನರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಮಹದೇವಪುರ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಹದೇವಪುರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದಾಖಲೆಯ 7,875 ಕೋಟಿ ರೂಪಾಯಿ ಅನುದಾನ ತಂದಿದೆ. 1,020 ಕೋಟಿ ರೂ. ವೆಚ್ಚದಲ್ಲಿ ಮಹದೇವಪುರದಲ್ಲಿ ಹೊಸ ವಿದ್ಯುತ್ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಿಂದ ಕ್ಷೇತ್ರದ ಭವಿಷ್ಯ ಮತ್ತು ಆರ್ಥಿಕ ಸ್ಥಿತಿ ಬೆಳಗಲಿದೆ ಎಂದರು.
ಇನ್ನು ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹಿಂದೆಂದೂ ಕಾಣದಷ್ಟು ಪ್ರೋತ್ಸಾಹ ನೀಡಲಾಗಿದೆ. ಮಹದೇವಪುರದಲ್ಲಿ 8 ಆಟದ ಮೈದಾನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಂಜುಳಾ ಅರವಿಂದ ಲಿಂಬಾವಳಿ ಕೋರಿದರು.
ಇದನ್ನೂ ಓದಿ | Modi In Karnataka: ಬೆಂಗಳೂರಲ್ಲಿ ಮೋದಿ ಮೇನಿಯಾ; ಇಲ್ಲಿದೆ ಎರಡು ದಿನದ ರೋಡ್ ಶೋ ಡಿಟೇಲ್ಸ್
ಶುಕ್ರವಾರ ಕ್ಷೇತ್ರದ ಗರುಡಾಚಾರ್ ಪಾಳ್ಯ, ಮಹೇಶ್ವರಿನಗರ, ಲಕ್ಷ್ಮಿ ಸಾಗರ, ಕಾವೇರಿನಗರ, ಬಸವಣ್ಣನಗರ, ಸೀತಾರಾಮಪಾಳ್ಯ, ಪಟ್ಟಂದೂರು ಅಗ್ರಹಾರ, ಹಾಡೋಸಿದ್ದಾಪುರ, ಚಿಕ್ಕನಾಯಕನಹಳ್ಳಿ, ದಿಣ್ಣೆ, ಹಾಲನಾಯಕನಹಳ್ಳಿ, ಕೋದಂಡರಾಮನಗರ ಸೇರಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಪ್ರಚಾರದಲ್ಲಿ ಅವರಿಗೆ ಮುಖಂಡರಾದ ಅನಂತರಾಮಯ್ಯ, ಮಹೇಂದ್ರ ಮೋದಿ, ನಸ್ರು ರವಿ, ಪ್ರಭು ಸಾಥ್ ನೀಡಿದರು.