ಬೆಂಗಳೂರು: ರಾಜಧಾನಿ ಬೆಂಗಳೂರಿಗರ ನೆಚ್ಚಿನ ಸಾರಿಗೆ ಸೇವೆಯಲ್ಲಿ ಬಿಎಂಟಿಸಿಯ ನಂತರದ ಸ್ಥಾನ ನಮ್ಮ ಮೆಟ್ರೋ ಸೇವೆ. ಪ್ರತಿನಿತ್ಯ ಲಕ್ಷಾಂತರ ಬೆಂಗಳೂರಿಗರನ್ನು ಹೊತತೊಯ್ಯುತ್ತಿರುವ ನೆಚ್ಚಿನ ಮೆಟ್ರೊ ಸದ್ಯದಲ್ಲೆ ಪೈಲೆಟ್ ರಹಿತ ವ್ಯವಸ್ಥೆ ತರಲು ಚಿಂತನೆ ನಡೆಸಿದೆ. ಅಂದರೆ ಮೆಟ್ರೊ ರೈಲಿನಲ್ಲಿ ಚಾಲಕರೇ ಇಲ್ಲದೆ ತಾನೇತಾನಾಗಿ ಚಲಿಸುತ್ತದೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಗೆ 9,000 ಮರಗಳಿಗೆ ಕೊಡಲಿ
ಈಗಾಗಲೇ ಈ ವ್ಯವಸ್ಥೆಯು ನವ ದೆಹಲಿಯಲ್ಲಿ ಇದ್ದು, ಬೆಂಗಳೂರಿನಲ್ಲಿಯೂ ತರಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ. ಪೈಲೆಟ್ ರಹಿತ ಮೆಟ್ರೋ ಓಡಿಸಲು ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಸಿಗ್ನಲಿಂಗ್ ಸಿಸ್ಟಮ್ ತಂತ್ರಜ್ಞಾನ ಅಳವಡಿಸಲಿದೆ. ಮೆಟ್ರೋ ಪೈಲೆಟ್ ಇಲ್ಲದೆ ನಿಯಂತ್ರಣ ಕೊಠಡಿಯಲ್ಲಿ ಕುಳಿತು ನಿರ್ವಹಣೆ ಮಾಡಲು ಪ್ಲಾನ್ ಮಾಡಲಾಗಿದೆ.
ಪ್ರಾಯೋಗಿಕವಾಗಿ ಗೊಟ್ಟಿಗೆರೆ – ನಾಗವಾರ ಮೆಟ್ರೋ ಮಾರ್ಗದಲ್ಲಿ ಮೊದಲ ಸ್ವಯಂಚಾಲಿತ ಮೆಟ್ರೋ ಓಡಾಟಕ್ಕೆ ಸಿದ್ಧತೆ ನಡೆದಿದೆ. ಈ ಮೂಲಕ ಆಗಾಗ ಮೆಟ್ರೋ ಸಂಚಾರದಲ್ಲಿ ಆಗುತ್ತಿದ್ದ ಸಂಚಾರ ವ್ಯತ್ಯಯ ತಪ್ಪುವ ವಿಶ್ವಾಸದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಇದ್ದಾರೆ. ಜತೆಗೆ ಆದಾಯದಲ್ಲೂ ಹೆಚ್ಚಳವೂ ಆಗಬಹುದು ಎಂಬ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ | ಮನೆ ಬಾಗಿಲಿಗೆ ಮೆಟ್ರೋ : ಶೀಘ್ರವೇ ಓಡಾಡಲಿದೆ ನಿಯೋ ರೈಲು