ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಅವರ ಕೊಲೆ ಮಾಡುವ ಸುಪಾರಿ ಪಡೆದಿರುವ ಆರೋಪಿ ಗಿರೀಶ್ ಬ್ಯಾಕ್‌ಗ್ರೌಂಡ್ ಬೆಚ್ಚಿ ಬೀಳಿಸುವಂತಿದ್ದು, ಈ ಹಿಂದೆಯೂ ಒಬ್ಬ ಬಿಜೆಪಿ ಕೌನ್ಸಿಲರ್ ಹತ್ಯೆಯಲ್ಲಿ ಈತ ಭಾಗಿಯಾಗಿದ್ದಾನೆ.
2017ರಲ್ಲಿ ನಡೆದ ಕೌನ್ಸಿಲರ್ ಶ್ರೀನಿವಾಸ ಪ್ರಸಾದ್ ಅಲಿಯಾಸ್ ಕಿತ್ತಗನಹಳ್ಳಿ ವಾಸು ಕೊಲೆ ಪ್ರಕರಣದ ಆರೋಪಿಯಾಗಿರುವ ಗಿರೀಶ್, ಈಗ ಈಗ ಬಿಜೆಪಿ ಶಾಸಕರ ಕೊಲೆಗೆ ಸುಪಾರಿ ಪಡೆದ ಕೇಸಿನಲ್ಲಿ ಬಂಧನಕ್ಕೀಡಾಗಿದ್ದಾನೆ.
ಮುನ್ಸಿಪಲ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ವಾಸು ಕೊಲೆಯಾಗಿದ್ದರು. ವಾಕಿಂಗ್‌ಗೆ ಹೊರಟಿದ್ದ ವಾಸುವನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೇಸಿನಲ್ಲಿ ಮಹಿಳಾ ಕೌನ್ಸಿಲರ್, ಆಕೆಯ ಮಗ ಸೇರಿ 11 ಜನರ ಬಂಧನ ಆಗಿತ್ತು.
ಇದನ್ನೂ ಓದಿ: MLA Satish Reddy: ಶಾಸಕ ಸತೀಶ್ ರೆಡ್ಡಿ ಕೊಲೆಗೆ ಸ್ಕೆಚ್: ಹೊಳಲ್ಕೆರೆಯಲ್ಲಿ ಮೂವರ ಸೆರೆ; ಪ್ಲ್ಯಾನ್ ಲೀಕ್ ಆಗಿದ್ದು ಹೇಗೆ?
ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಸಹಚರನಾಗಿರುವ ಗಿರೀಶ್ ಮೊದಲಿಗೆ ಪೊಲೀಸರು ಬಂಧಿಸಿದ್ದಾಗ ಎಸ್ಕೇಪ್ ಆಗಿದ್ದ. ಎರಡನೇ ಬಾರಿ ಆತನನ್ನು ಹಿಡಿಯಲಾಗಿತ್ತು. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಸದ್ಯ ಕೊಲೆ ಸುಪಾರಿ ಪ್ರಕರಣದಲ್ಲಿ ಆರೋಪಿ ಗಿರೀಶ್ ಹಾಗೂ ಅಪ್ರಾಪ್ತ ಬಾಲಕನ ತೀವ್ರ ವಿಚಾರಣೆ ನಡೆದಿದೆ. ಸುಪಾರಿ ಕೊಟ್ಟವರು ಯಾರು, ಎಷ್ಟು ಹಣಕ್ಕೆ ಸುಪಾರಿ ಪಡೆದಿದ್ದಾರೆ ಎಂಬ ವಿಚಾರಣೆ ನಡೆದಿದ್ದು, ಆರೋಪಿ ಸುಪಾರಿ ಪಡೆದಿರುವ ಬಗ್ಗೆ ಮಾತನಾಡಿರುವ ಆಡಿಯೋ ಪೊಲೀಸರ ಕೈಗೆ ಸಿಕ್ಕಿದೆ. ಬೊಮ್ಮನಹಳ್ಳಿ ಪೊಲೀಸರು ಈ ಆಡಿಯೋ ಇಟ್ಟುಕೊಂಡು ವಿಚಾರಣೆ ನಡೆಸಿದ್ದು, ಆರೋಪಿಗಳ ಆರು ತಿಂಗಳ ಮೊಬೈಲ್ ಕಾಲ್ ಲಿಸ್ಟ್ ತೆಗೆದಿದ್ದಾರೆ.
ತನಿಖೆ ವೇಳೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹೆಸರು ಕೇಳಿಬಂದಿದೆ. ಆರೋಪಿ ಗಿರೀಶ್, ನಾಗನ ಸಹಚರನಾಗಿದ್ದು, ಪ್ರಕರಣದಲ್ಲಿ ನಾಗನ ಪಾತ್ರ ಇದೆಯಾ ಎಂಬುದರ ಬಗ್ಗೆ ವಿಚಾರಿಸಲಾಗುತ್ತಿದೆ.