Site icon Vistara News

ಎಚ್‌.ಡಿ. ಕುಮಾರಸ್ವಾಮಿ ಸ್ವಜಾತಿ ಕೂಪಮಂಡೂಕ: ಬ್ರಾಹ್ಮಣರ ಕುರಿತ ಹೇಳಿಕೆ ಬಗ್ಗೆ ಎನ್‌. ರವಿಕುಮಾರ್‌ ಆಕ್ರೋಶ

MLC Ravikumar

ಬೆಂಗಳೂರು: ಪ್ರಲ್ಹಾದ ಜೋಶಿಯವರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಹಾಗೂ ಮಹಾತ್ಮಾ ಗಾಂಧಿಯವರನ್ನು ಕೊಂದ ಬ್ರಾಹ್ಮಣರ ವರ್ಗಕ್ಕೆ ಸೇರಿದವರು ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌, ಕುಮಾರಸ್ವಾಮಿ ಸ್ವಜಾತಿ ಕೂಪಮಂಡೂಕ ಎಂದಿದ್ದಾರೆ.

ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ ಹಾಗೂ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ಬ್ರಾಹ್ಮಣ ವರ್ಗಕ್ಕೆ ಸೇರಿದ ಪ್ರಲ್ಹಾದ ಜೋಶಿ ಅವರನ್ನು ಸಿಎಂ ಮಾಡಲು ಆರ್‌ಎಸ್‌ಎಸ್‌ ಸಂಚು ರೂಪಿಸುತ್ತಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದರು.

ಈ ಕುರಿತು ಮಾತನಾಡಿದ ರವಿಕುಮಾರ್‌, ಬ್ರಾಹ್ಮಣರ ಸಮುದಾಯದ ಬಗ್ಗೆ ಎಚ್ಡಿಕೆ ಈ‌ ರೀತಿ ಅವಹೇಳನ ಮಾಡಬಾರದು. ಇದನ್ನು ಬಿಜೆಪಿ ಖಂಡಿಸುತ್ತದೆ. ಎಚ್ಡಿಕೆ ಸ್ವಜಾತಿ ಕೂಪಮಂಡೂಕ. ಸ್ವಜಾತಿ ಬಿಟ್ಟು ಹೊರಗೆ ಬರಲ್ಲ ಅವರು. ಎಚ್ಡಿಕೆ ತಮ್ಮ ಕುಟುಂಬ, ಮನೆ ಬಿಟ್ಟು ಹೊರಗೆ ಬರಲಿ. ಅವರ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಅಂತ ಹೇಳಲಿ. ಅವರು ಸಿಎಂ ಆಗಿದ್ದಾಗ ತಾಜ್ ವೆಸ್ಟ್ ಹೊಟೇಲ್ ‌ನಿಂದ ಆಡಳಿತ ಮಾಡ್ತಿದ್ರು. ಇದನ್ನು ಜನ ಮರೆತಿಲ್ಲ, ಅಷ್ಟೊಂದು ಸ್ವಾರ್ಥಿ ರಾಜಕಾರಣಿ ಅವರು ಎಂದರು.

ರಾಜ್ಯದ ಅತ್ಯಂತ ಸ್ವಾರ್ಥಿ ರಾಜಕಾರಣಿ ಎಚ್‌.ಡಿ. ಕುಮಾರಸ್ವಾಮಿ ಎಂದ ರವಿಕುಮಾರ್‌, ಯಾರಿಗೂ ಬಹುಮತ ಬರಬಾರದು, ನಮ್ಮನೆ ಬಾಗಿಲಿಗೆ ಎಲ್ರೂ ಬರಬೇಕು ಎಂದು ಕುಮಾರಸ್ವಾಮಿ ಬಯಸುತ್ತಾರೆ. ಅವರು ಕೂಪಮಂಡೂಕ ಯೋಚನೆಗಳಿಂದ ಹೊರಗೆ ಬರಲಿ. ಪ್ರಹ್ಲಾದ್ ಜೋಷಿ ಅವರು ಸರಿಯಾಗಿ ಹೇಳಿದ್ದಾರೆ. ಪಂಚರತ್ನ ಯಾತ್ರೆ ಬದಲು ನವಗ್ರಹ ಯಾತ್ರೆ ಮಾಡಲಿ. ಐದು ಜನ ಅಲ್ಲ ಒಂಭತ್ತು ಜನ ಅವರ ಮನೆಯಲ್ಲಿದ್ದಾರೆ.

ಗಾಂಧಿ ಅವರ ಹತ್ಯೆ ಪ್ರಕರಣ ಬಗ್ಗೆ ಜಸ್ಟೀಸ್ ಕಪೂರ್ ಕಮಿಟಿ ವರದಿ ಕೊಟ್ಟಿದೆ. ಈ ವರದಿಯನ್ನು ಎಚ್ಡಿಕೆ ಓದಲಿ. ಆರೆಸೆಸ್ ಪಾತ್ರ ಇಲ್ಲ ಅಂತ ವರದಿಯಲ್ಲಿದೆ. ಸುಪ್ರೀಂಕೋರ್ಟ್ ಕೂಡಾ ಇದನ್ನೇ ಹೇಳಿದೆ. ಪ್ರಹ್ಲಾದ್ ಜೋಷಿ ಅವರು ಸತ್ಯ ಹೇಳಿದಾರೆ, ಅಷ್ಟಕ್ಕೇ ಕುಮಾರಸ್ವಾಮಿ ಅವರಿಗೆ ಸಿಟ್ಟು ಬಂದಿದೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಅದು ಮಹಾರಾಷ್ಟ್ರದಲ್ಲಿ ‌ಇರೋದು. ಕುಮಾರಸ್ವಾಮಿ ಅವರು ಇದರಲ್ಲಿ ಪಿಎಚ್ಡಿ ಮಾಡಿದ್ದಾರಾ?

ಇದನ್ನೂ ಓದಿ : ಶೃಂಗೇರಿ ಮಠವನ್ನು ಒಡೆದ, ಮಹಾತ್ಮಾ ಗಾಂಧಿಯನ್ನು ಕೊಂದ ಬ್ರಾಹ್ಮಣರು ಇವರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

ಅವರ ಕಿರುಕುಳಕ್ಕೆ ಅವರ ಪಕ್ಷದಲ್ಲಿ ಇದ್ದ ಬ್ರಾಹ್ಮಣ ವೈಎಸ್ವಿ ದತ್ತಾ ಪಕ್ಷ ಬಿಟ್ಟು ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, ಎಂಟು ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ. ಆ ರೀತಿ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುವ ಭಯದಿಂದ ಅವರು ಹೀಗೆ ಮಾತಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಎಚ್ಡಿಕೆ ಭಯದಿಂದ ಚಡಪಡಿಸ್ತಿದ್ದಾರೆ.
ಎಚ್ಡಿಕೆ ಸಿಡಿ ಮತ್ತು ತಾಜ್ ವೆಸ್ಟೆಂಡ್ ಹೊಟೇಲ್, ಅವರ ಮನೆ, ತೋಟದ ಮನೆ, ಇವೆಲ್ಲ ಪ್ರಕರಣಗಳ ಬಗ್ಗೆ ನಮಗೂ ಗೊತ್ತಿದ. ಅವರು ಮಾತಾಡಲಿ, ಅವರು ಇದೇ ಥರ ಮುಂದುವರೆದರೆ ನಾವೂ ಮಾತಾಡ್ತೀವಿ. ನಾವೂ ರಾಜಕಾರಣ ಮಾಡಲು ಬಂದವರು. ಅವರೇನು ಹರಿಶ್ಚಂದ್ರ ಅಲ್ಲ, ನಾವೂ ಮಾತಾಡ್ತೇವೆ ಎಂದರು.

Exit mobile version