ಬೆಂಗಳೂರು: ಸಿಟಿ ಪೊಲೀಸರು ಹಾಗೂ ಟ್ರಾಫಿಕ್ ಪೊಲೀಸರು ನಗರದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ (Modi in Bengaluru) ಏರ್ಪಡಿಸಲಾಗಿದೆ.
ಈ ಕಾರ್ಯಕ್ಕೆ 2 ಹೆಚ್ಚುವರಿ ಪೊಲೀಸ್ ಆಯುಕ್ತರು, 2 ಜಂಟಿ ಪೊಲೀಸ್ ಆಯುಕ್ತರು, 30 ಡಿಸಿಪಿಗಳು, 60 ACPಗಳು, 150 ಇನ್ಸ್‌ಪೆಕ್ಟರ್‌ಗಳು, 480 ಸಬ್ ಇನ್ಸಪೆಕ್ಟರ್‌ಗಳು, 40 ksrp ತುಕಡಿಗಳು, 30 car ತುಕಡಿಗಳು ಹಾಗೂ 6 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಧಾನಿಯವರು ಆಗಮಿಸಲಿರುವ ಎಚ್‌ಎಎಲ್ ನಿಲ್ದಾಣ, ಅಲ್ಲಿಂದ ಎಚ್‌ಎಎಲ್ ರಸ್ತೆ, ವಿಧಾನಸೌಧ ಆವರಣ ಹಾಗೂ ಅಲ್ಲಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ ಎಲ್ಲ ರಸ್ತೆಗಳೂ ಪೊಲೀಸ್‌ಮಯವಾಗಿವೆ. ಈ ಮಾರ್ಗದಲ್ಲಿ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಟ್ರಾಫಿಕ್ ಹಾಗು ಲಾ ಆ್ಯಂಡ್ ಆರ್ಡರ್, ಕೆಏಸ್‌ಆರ್‌ಪಿ ಪೊಲೀಸರು ನಿಗಾ ನೋಡಿಕೊಳ್ಳುತ್ತಿದ್ದಾರೆ. ಪ್ರಧಾನಿಯನ್ನು ಬರಮಾಡಿಕೊಳ್ಳಲು 20ಕ್ಕೂ ಹೆಚ್ಚು ವಾಹನಗಳಲ್ಲಿ ಅಧಿಕಾರಿಗಳು ಹೊರಟಿದ್ದು, ಎಚ್‌ಎಎಲ್‌ನಲ್ಲಿ ಕಾದಿದ್ದಾರೆ.
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಫ್ಲಾಟ್‌ಫಾರಂ 7 ಹಾಗೂ 8ರಲ್ಲಿ ಪ್ರಧಾನಿಯಿಂದ ರೈಲಿನ ಉದ್ಘಾಟನೆ ನಡೆಯಲಿರುವುದರಿಂದ, ಬೆಳಗ್ಗೆ 8ರಿಂದ 11 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲುಗಳನ್ನು ಮಧ್ಯಾಹ್ನ 12ರ ನಂತರ ಶೆಡ್ಯೂಲ್ ಮಾಡಲಾಗಿದೆ. ರೈಲ್ವೇ ಸ್ಟೇಷನ್ ಸುತ್ತಮುತ್ತ 1200ಕ್ಕೂ ಹೆಚ್ಚು GRP ಹಾಗೂ ರೈಲ್ವೆ ಪೊಲೀಸರ ನೇಮಕ ಮಾಡಲಾಗಿದೆ.
ಇದನ್ನೂ ಓದಿ | Modi in Bengaluru| ಬೆಂಗಳೂರಿಗೆ ಬರುವ ಪ್ರಧಾನಿ ಎಷ್ಟು ಹೊತ್ತಿಗೆ ಎಲ್ಲಿ ಹೋಗ್ತಾರೆ? ಇಲ್ಲಿದೆ Minute to Minute details