ಬೆಂಗಳೂರು: ಪಬ್ ಮೇಲೆ ದಾಳಿ ಮಾಡಿ ನೈತಿಕ ಪೊಲೀಸ್ಗಿರಿ ತೋರಿಸಿದ ಘಟನೆ ಶನಿವಾರ ರಾತ್ರಿ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬ್ರಿಗೇಡ್ ರಸ್ತೆಯ ಒಂದು ಪಬ್ನಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ಕಾರ್ಮಿಕ ಪರಿಷತ್ ಎಂಬ ಸಂಘಟನೆ ಡೋಲು ಬಡಿದು ಪಬ್ಗೆ ನುಗ್ಗಲು ಮುಂದಾಗಿತ್ತು. ಪಬ್ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ಮಾಡುವ ಯುವಜನರನ್ನು ಟಾರ್ಗೆಟ್ ಮಾಡಲು ಈ ಸಂಘಟನೆ ಮುಂದಾಗಿತ್ತು. ಈ ವೇಳೆ ಪಬ್ನ ಬೌನ್ಸರ್ಗಳು ತಡೆದಿದ್ದರಿಂದ ಎರಡೂ ಕಡೆಯವರು ವಾಗ್ವಾದಕ್ಕೆ ಮುಂದಾಗಿದ್ದರು. ಪಬ್ನ ಬೌನ್ಸರ್ಗಳು ಹಾಗೂ ಸಂಘಟನೆಯಿಂದ ಬಂದಿದ್ದ 15 ಜನರ ನಡುವೆ ಜಟಾಪಟಿ ನಡೆದಿದ್ದು, ಎರಡೂ ಕಡೆಯವರು ರಸ್ತೆಯಲ್ಲಿ ಹೊಡೆದಾಡಿಕೊಂಡರು.
ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ನೈತಿಕ ಪೊಲೀಸ್ಗಿರಿ ಮಾಡುತ್ತಿದ್ದ 15 ಜನರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಘಟನೆ ಸಂಬಂಧ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: New Year 2023 | ಹೊಸ ವರ್ಷಕ್ಕೂ ನೈತಿಕ ಪೊಲೀಸ್ಗಿರಿ ಟೆನ್ಶನ್; ಹಿಂದು ಸಂಘಟನೆಗಳ ಪ್ರಮುಖರಿಗೆ ನೋಟಿಸ್