ಬೆಂಗಳೂರು : ಸಹ ನಟನ ಮನೆಗೆ ನುಗ್ಗಿ ಕ್ರೆಡಿಟ್ ಕಾರ್ಡ್ ರಿಕವರಿ ಸಿಬ್ಬಂದಿ ದರ್ಪ ಮೆರೆದಿದ್ದಾರೆ. ಶುಭಂ ಶರ್ಮಾ ಎಂಬ ಚಿತ್ರನಟ ಹಾಗೂ ಅವರ ಸ್ನೇಹಿತರೊಬ್ಬರಿಂದ ದೂರು ದಾಖಲಾಗಿದೆ. ಕೋಟಕ್ ಮಹೀಂದ್ರಾ ಕ್ರೆಡಿಟ್ ಕಾರ್ಡ್ ರಿಕವರಿಮೆನ್ ಆರೋಪಿಯಾಗಿದ್ದು, 2014 ರಿಂದಲೂ ಶುಭಂ ಶರ್ಮಾ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು.
ಕ್ರೆಡಿಟ್ ಪಡೆದು ಸಮಯಕ್ಕೆ ಸರಿಯಾಗಿ ಪಾವತಿ ಕೂಡ ಮಾಡುತ್ತಿದ್ದ ಶುಭಂ ಕೋವಿಡ್ ಸಂಧರ್ಭದಲ್ಲಿ ಚಿತ್ರರಂಗದಲ್ಲಿ ಕೆಲಸವಿಲ್ಲದ ಕಾರಣ ದೈನಂದಿನ ಖರ್ಚಿಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು. ನಂತರ ಬಡ್ಡಿ ಸೇರಿ 2 ಲಕ್ಚದವರೆಗೂ ಪಾವತಿ ಮಾಡೋದು ಬಾಕಿ ಇತ್ತು. ಈ ಹಿನ್ನಲೆಯಲ್ಲಿ ಕೋಟಕ್ ಮಹೀಂದ್ರಾ ಅಧಿಕಾರಿಗಳ ಒಪ್ಪಿಗೆ ಪಡೆದು ಕಂತಿನಲ್ಲಿ ಹಣವನ್ನ ತೀರಿಸುತ್ತಿದ್ದರು. ನಂತರ ಕಿರಣ್ ಹಿಲ್ಲೂರ್ ಎಂಬಾತ ಪದೇ ಪದೆ ಮನೆಗೆ ಬಂದು ಪೂರ್ತಿ ಹಣ ನೀಡುವಂತೆ ಕಿರುಕುಳ ಮಾಡಿದ್ದಾನೆ.
ಇದನ್ನೂ ಓದಿ | ವಿಸ್ತಾರ Explainer: ಅಮೆರಿಕದ ಯುವಕರೇಕೆ ಕಿಲ್ಲರ್ ಆಗುತ್ತಿದ್ದಾರೆ?
ಈ ಬಗ್ಗೆ ಆರ್‌ಬಿಐ ದೂರು ಪ್ರಾಧಿಕಾರಕ್ಕೆ ಶುಭಂ ದೂರು ನೀಡಿದ್ದರು. ಕಸ್ಟಮರ್ ಮನೆಗೆ ಹೋಗಿ ತೊಂದರೆ ಕೊಡಬಾರದು ಮತ್ತು ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿ ಎಂದು ಪ್ರಾಧಿಕಾರವು ಸಂಸ್ಥೆಗೆ ಸೂಚನೆ ನೀಡಿತ್ತು.
ಸೂಚನೆಗೂ ಲೆಕ್ಕಿಸದೆ ಆರೋಪಿ ಕಿರಣ್ ಹಿಲ್ಲೂರ್ ಮತ್ತೆ ಶುಭಂ ಮನೆಗೆ ಹೋಗಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಶುಭಂ ಇಲ್ಲದ ವೇಳೆ ಮನೆಗೆ ನುಗ್ಗಿ ತಾಯಿ, ಅತ್ತಿಗೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದೀಗ ನಟ ಶುಭಂ ಶರ್ಮಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ | ‘ತೆಲುಗಿನ ಕ್ರೈಮ್ ಸಿನೆಮಾಗಳೇ ಪ್ರೇರಣೆ’; ನಿವೃತ್ತ ಯೋಧ ಸುರೇಶ್ ಕೊಲೆ ಆರೋಪಿಗಳು ಅರೆಸ್ಟ್