Site icon Vistara News

Murder Case: ಸರಗಳ್ಳರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

chain snatchers murderes

ಬೆಂಗಳೂರು: ಬೆಸವನಗುಡಿಯ ಅರ್ಬಾಝ್‌ ಎಂಬ ಸರಗಳ್ಳನ ಕೊಲೆಯ (Murder Case) ಹಿಂದಿನ ಅಸಲಿಯತ್ತನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹತ್ಯೆಯಾದವನು ಹಾಗೂ ಹಂತಕರು ಎಲ್ಲರೂ ಚೈನ್ ಸ್ನ್ಯಾಚರ್ಸ್ (Chain snatchers) ಆಗಿದ್ದು, ಇವರ ನಡುವಿನ ಕಲಹವೇ ಕೊಲೆಗೆ ಕಾರಣವಾಗಿದೆ.

ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾಸೀಫ್, ಸಬೀರ್, ಅರ್ಮಾನ್ ಹಾಗು ಶಫಿ ಬಂಧಿತ ಆರೋಪಿಗಳು. ಈ ಹಿಂದೆ ಇವರು ಕೊಲೆಯಾದ ಅರ್ಬಾಝ್ ಜತೆ ಸೇರಿ ಐವರೂ ಬೈಕುಗಳಲ್ಲಿ ಸುತ್ತಾಡುತ್ತಾ ಸರಗಳ್ಳತನ ಮಾಡುತ್ತಿದ್ದರು.

ಹಂತಕರು ನಾಲ್ವರೂ ಪೊಲೀಸರ ಕೈಗೆ ಈ ಮೊದಲು ಸಿಕ್ಕಿಬಿದ್ದಿದ್ದರು. ತಾವು ಮಾತ್ರ ಯಾಕೆ ಸಿಕ್ಕಿಬೀಳಬೇಕೆಂದು ಅರ್ಬಾಝ್‌ನ ಹೆಸರನ್ನೂ ಹೇಳಿ, ಪ್ರಕರಣದಲ್ಲಿಲ್ಲದಿದ್ದರೂ ಆತನನ್ನೂ ಆರೋಪಿಯನ್ನಾಗಿಸಿದ್ದರು.
ಆದರೆ ಆ ಕಳ್ಳತನದಲ್ಲಿ ಅರ್ಬಾಝ್ ಪಾತ್ರ ಇರಲಿಲ್ಲ. ಆ ವೇಳೆ ಅರ್ಬಾಝ್‌ನನ್ನೂ ಆರೋಪಿಯನ್ನಾಗಿಸಿ ಪೊಲೀಸರು ತೀವ್ರವಾಗಿ ವರ್ಕ್ ಮಾಡಿದ್ದರು.

ಕೇಸಿನಲ್ಲಿಲ್ಲದಿದ್ದರೂ ಸುಮ್ಮನೆ ವರ್ಕ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಸಿಟ್ಟಾಗಿದ್ದ ಅರ್ಬಾಝ್, ನಂತರ ಇದೇ ಸಿಟ್ಟಿನಲ್ಲಿ ಜಯನಗರ ಬಳಿ ನಾಲ್ವರ ಮೇಲೆ ಒಬ್ಬನೇ ಹಲ್ಲೆ ನಡೆಸಿದ್ದ. ನಾಲ್ವರಿಗೂ ಒಬ್ಬನೇ ಹಲ್ಲೆ ಮಾಡಿ ತಲೆ ಸೀಳಿದ್ದ. ಇದೇ ದ್ವೇಷವಿಟ್ಟುಕೊಂಡು ಹಂತಕರು ಅರ್ಬಾಝ್ ಹತ್ಯೆಗೆ ಹೊಂಚು ಹಾಕಿದ್ದರು. ಶುಕ್ರವಾರ ಖಾಜಿ ರಸ್ತೆ ಬಳಿ ಬರುತ್ತಿದ್ದಂತೆ ಅಟ್ಯಾಕ್ ಮಾಡಿದ್ದರು. ತಲೆಗೆ ನೇರವಾಗಿ ಮಾರಕಾಸ್ತ್ರದಿಂದ ಹೊಡೆದ ಹಿನ್ನೆಲೆಯಲ್ಲಿ ಅರ್ಬಾಝ್ ಅರೆಜೀವವಾಗಿದ್ದ.

ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲ ನೀಡದೆ ಸಾವಿಗೀಡಾಗಿದ್ದಾನೆ. ಆರೋಪಿಗಳನ್ನು ಮೂರು ದಿನಗಳ ಕಾಲ ವಿಶೇಷ ಪೊಲೀಸ್‌ ತಂಡ ಹುಡುಕಾಡಿ ನಂತರ ಬಂಧಿಸಿದೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Kolar News: ಬಾರ್‌ನಲ್ಲಿ ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ

Exit mobile version