Site icon Vistara News

Murder Case : ಬೆಂಗಳೂರಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಂದನೇ ಹಂತಕ!

Foreign woman found dead in Bengaluru

ಬೆಂಗಳೂರು: ವಿದೇಶಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೇಲ್ನೋಟಕ್ಕೆ ಹಂತಕರು ಉಸಿರುಗಟ್ಟಿಸಿ ಕೊಲೆ ಮಾಡಿರುವ (Murder Case) ಶಂಕೆ ವ್ಯಕ್ತವಾಗಿದೆ. ಉಜ್ಬೇಕಿಸ್ತಾನ ಮೂಲದ ಜರೀನಾ ಮೃತ ದುರ್ದೈವಿ.

ಬೆಂಗಳೂರಿನ ಬಿಡಿಎ ಮೇಲ್ಸೇತುವೆ ಸಮೀಪದ ಖಾಸಗಿ ಹೋಟೆಲ್‌ನ ಎರಡನೇ ಮಹಡಿಯ ಕೊಠಡಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಟೂರಿಸ್ಟ್ ವೀಸಾದಡಿ ಜರೀನಾ ನಾಲ್ಕು ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿಗೆ ಬಂದಿದ್ದರು. ನಿನ್ನೆ ರೂಮಿನೊಳಗೆ ಹೋದ ಜರೀನಾಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.

ಹೀಗಾಗಿ ಅನುಮಾನಗೊಂಡು ಹೋಟೆಲ್‌ ಸಿಬ್ಬಂದಿ ಬುಧವಾರ ಸಂಜೆ 4.30ರ ಸುಮಾರಿಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಮಾಸ್ಟರ್ ಕೀ ಮೂಲಕ ರಾತ್ರಿ ರೂಂನ ಬಾಗಿಲು ತೆರೆದು ನೋಡಿದಾಗ ಶವವಾಗಿ ಪತ್ತೆಯಾಗಿದ್ದಾಳೆ. ಜರೀನಾ ದೇಹದ ಮೇಲೆ ಗಾಯದ ಕಲೆಗಳು ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಹೋಟೆಲ್‌ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಫ್ಎಸ್ಎಲ್, ಬೆರಳಚ್ಚು ಹಾಗೂ ಶ್ವಾನದಳ ದೌಡಾಯಿಸಿದೆ. ಶೇಷಾದ್ರಿಪುರಂ ಪೊಲೀಸರು ಮಹಿಳೆ ತಂಗಿದ್ದ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಶೇಖರ್, ಸಿಎಆರ್‌ಡಿಸಿಪಿ ಅರುಣಾಂಶು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೋಟೆಲ್‌ನ ದಾಖಲಾತಿ ಪುಸ್ತಕ, ಸಿಸಿಟಿವಿ ಹಾಗೂ ಯಾರೆಲ್ಲ ಹೋಟೆಲ್‌ಗೆ ಬಂದು ಹೋಗಿದ್ದಾರೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

ಖಾಸಗಿ ಹೋಟೆಲ್ ಮ್ಯಾನೇಜರ್ ಕೊಟ್ಟ ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇರುವುದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

ರಕ್ತಮಯವಾಗಿ ಅಂಗಾತ ಬಿದ್ದಿದ್ದ ಜರೀನಾ

ಹೋಟೆಲ್‌ ಜನರಲ್ ಮ್ಯಾನೇಜರ್ ಗೌರವ್ ಕುಮಾರ್ ಸಿಂಗ್‌ ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ರಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕಳೆದ‌ ಮಾ. 5 ರಂದು ಬ್ರೋಕರ್ ರಾಹುಲ್ ಕುಮಾರ್‌ ಎಂಬಾತ ಮುಖಾಂತರ ಜರೀನಾ ಹೋಟೆಲ್‌ ರೂಂ‌ಮ್‌ ನಂಬರ್ 216ರಲ್ಲಿ‌ ತಂಗಿದ್ದಳು. ದಿನಕ್ಕೆ 5,500 ರಂತೆ ರಾಹುಲ್‌ ಮಾ.16 ರವರಗೆ ಹೊಟೇಲ್ ರೂಂ ಬಾಡಿಗೆಗೆ ಬುಕ್ ಮಾಡಿದ್ದ.

ನಿನ್ನೆ ಬುಧವಾರ ಮಧ್ಯಾಹ್ನ ಹೊಟೇಲ್ ಸಿಬ್ಬಂದಿಗೆ ಜರೀನಾ ಬಾಡಿಗೆ ಹಣವನ್ನು ನೀಡಿ ರೂಂಗೆ ಹೋಗಿದ್ದಳು. ರಾತ್ರಿ 10.30ರ ಹೊತ್ತಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಜರೀನಾ ಕರೆ ಸ್ವೀಕರಿಸುತ್ತಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದರು. ಹೌಸ್ ಕಿಪಿಂಗ್ ಸಿಬ್ಬಂದಿ ತೆರಳಿ ಗಮನಿಸಿದಾಗ ಮಹಿಳೆ ಬಾಗಿಲು ತೆರೆಯುತ್ತಿಲ್ಲಾ ಎಂದು ಮಾಹಿತಿ ನೀಡಿದ್ದ. ಈ ಬಗ್ಗೆ ರಾಹುಲ್‌ಗೆ ತಿಳಿಸಿದ್ದ ಹೊಟೇಲ್ ಸಿಬ್ಬಂದಿ ನಂತರ ಮಾಸ್ಟರ್ ಕೀ ಬಳಸಿ ರೂಂ ಬಾಗಿಲು ತೆರೆದಿದ್ದಾರೆ. ರೂಂ ತೆರೆದಾಗ ನೆಲದ ಮೇಲೆ ಅಂಗಾತವಾಗಿ ಬಿದ್ದಿದ್ದ ಜರೀನಾ ಮುಖದಲ್ಲಿ ಸಣ್ಣಪುಟ್ಟ ಗಾಯಗಳಿಂದ ರಕ್ತಮಯವಾಗಿದ್ದು ಕಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version