Site icon Vistara News

Murder Case : ಕುಡಿದಾಗ ಯಾವಾಗಲೂ ಬೈಯುತ್ತಾನೆಂದು ಗೆಳೆಯನನ್ನೇ ಕೊಂದುಬಿಟ್ಟರು

Murder Case in Bengaluru

ಬೆಂಗಳೂರು: ಹಲಸೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು (Murder Case) ಪೊಲೀಸರು ಭೇದಿಸಿದ್ದಾರೆ. ದೊಮ್ಮಲೂರು ಸಮೀಪ ಸತೀಶ್ ಎಂಬಾತನ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಇದೀಗ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಪವನ್, ಸಂತೋಷ್, ರಂಜಿತ್, ರಂಗನಾಥ್, ವಿನೋದ್ ಬಂಧಿತರು.

ಕಳೆದ 18ರಂದು ಪಲ್ಲಕ್ಕಿ ಉತ್ಸವ ನೋಡಲು ಶಿವಾಜಿನಗರದಿಂದ ದೊಮ್ಮಲೂರಿಗೆ ಸತೀಶ್ ಬಂದಿದ್ದ. ಈ ವೇಳೆ ಹಳೆ ಸ್ನೇಹಿತರೆಲ್ಲರೂ ಒಟ್ಟಾಗಿ ಸಿಕ್ಕಿದ್ದರು. ಖುಷಿಗೆ ಸ್ನೇಹಿತರ ಜತೆಗೂಡಿ ಪಾರ್ಕ್‌ವೊಂದರಲ್ಲಿ ಪಾರ್ಟಿ ಮಾಡಿದ್ದರು. ಕಂಠ ಪೂರ್ತಿ ಕುಡಿಯುತ್ತಿದ್ದಂತೆ ಕಂಟ್ರೋಲ್‌ ತಪ್ಪಿದ ಸತೀಶ್‌, ಜತೆಗೆ ಬಂದಿದ್ದ ಸಂತೋಷ್ ಮತ್ತು ಪವನ್‌ನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ.

ಬಂಧಿತ ಆರೋಪಿಗಳು

ಮಾತ್ರವಲ್ಲದೆ ಅವರನ್ನೆಲ್ಲ ಹಿಡಿದು ತಳ್ಳಾಡಿ ಬೈದು ರದ್ಧಾಂತ ಮಾಡಿದ್ದ. ಸತೀಶ್‌ ಕುಡಿದರೆ ಸಾಕು ಅದೇ ಮತ್ತಿನಲ್ಲಿ ಜತೆಯಲ್ಲಿದ್ದವರನ್ನು ಬೈಯುತ್ತಿದ್ದ. ಆ ದಿನವೂ ಸಹ ಇದೇ ವಿಚಾರಕ್ಕೆ ಗಲಾಟೆಯಾಗಿತ್ತು. ಸಿಟ್ಟಿಗೆದ್ದ ಸಂತೋಷ್‌ ಹಾಗೂ ಪವನ್‌ ಸೇರಿ ಸತೀಶ್‌ನ ತಲೆ ಮೇಲೆ ಸಿಮೆಂಟ್ ಕಲ್ಲು ಎತ್ತಿಹಾಕಿದ್ದರು.

ಗಂಭೀರ ಗಾಯಗೊಂಡ ಸತೀಶ್‌ ಸ್ಥಳದಲ್ಲೇ ಮೃತಪಟ್ಟಿದ್ದ. ಆತ ಬದುಕಿಲ್ಲ ಎಂದು ತಿಳಿದಾಕ್ಷಣ ಕುಡಿತದ ನಶೆಯು ಇಳಿದಿತ್ತು. ನಂತರ ಅಲ್ಲಿಂದ ಎಲ್ಲರೂ ಪರಾರಿ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಹಲಸೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Physical Abuse: ಸ್ಕೂಲ್‌ ಹುಡುಗಿಗೆ ಬೆದರಿಸಿ ರೂಮಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹಿಡಿದ ಬಜರಂಗ ದಳ

ಬೀದರ್‌ನಲ್ಲಿ ಕಾರು ಪಲ್ಟಿಯಾಗಿ ಒಬ್ಬ ಸ್ಥಳದಲ್ಲೇ ಸಾವು; ಮತ್ತೊಬ್ಬನಿಗೆ ಗಾಯ

ಬೀದರ್:‌ ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು (Road Accident), ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬನಿಗೆ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸುನೀಲ್‌ ಬಸವರಾಜ್‌ ನರುಣೆ (28) ಮೃತರು. ಗಾಯಗೊಂಡಿರುವ ಅಂಕುಶ್‌ ಪೂಜಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಬಸವಕಲ್ಯಾಣ ತಾಲೂಕಿನ ಸಸ್ತಾಪುರ ಬಂಗ್ಲಾದ ಅತಲಾಪೂರ ಕ್ರಾಸ್‌ ಬಳಿ ಎರ್ಟಿಗಾ ಕಾರು ವೇಗವಾಗಿ ಚಲಿಸುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಸುನೀಲ್‌ ಬಸವರಾಜ್‌ ನರುಣೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಂಕುಶ್‌ ಪೂಜಾರಿಗೆ ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವಕಲ್ಯಾಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಶನಿವಾರ (ಏಪ್ರಿಲ್‌ 20) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಣಿವೆಯಲ್ಲಿ ಪಲ್ಟಿ ಹೊಡೆದಿದ್ದು, ಸ್ಥಳದಲ್ಲೇ ಒಬ್ಬರು ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಮಂಜುನಾಥ (36) ಸ್ಥಳದಲ್ಲೇ ಮೃತಪಟ್ಟವರು. ಸತೀಶ್ ಹಾಗೂ ಸುಚೇತ ಎಂಬುವವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಹೊಳಲ್ಕೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂವರೂ ಶಿವಮೊಗ್ಗ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಇವರು ಬೆಂಗಳೂರಿನಿಂದ‌ ಶಿವಮೊಗ್ಗಕ್ಕೆ ಕಾರಲ್ಲಿ ಹೊರಟಿದ್ದರು. ಮೃತ ಮಂಜುನಾಥ್ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದರು. ವೀಕೆಂಡ್‌ ಹಿನ್ನೆಲೆಯಲ್ಲಿ ಊರಿನತ್ತ ಹೊರಟಿದ್ದರು ಎನ್ನಲಾಗಿದೆ. ಕಾರು ವೇಗವಾಗಿದ್ದ ಕಾರಣ ಹೊಳಲ್ಕೆರೆ ಹೊರವಲಯದ ಕಣಿವೆ ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗಲಿಲ್ಲ. ಹೀಗಾಗಿ ಪಲ್ಟಿ ಹೊಡೆದಿತ್ತು. ಈ ವೇಳೆ ತೀವ್ರ ರಕ್ತಸ್ರಾವವಾಗಿ ಮಂಜುನಾಥ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರಿಗೆ ಭಾರಿ ಗಾಯಗಳಾಗಿವೆ. ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version