Site icon Vistara News

Murder Case : ಸೀರೆಯಿಂದ ಕುತ್ತಿಗೆ ಬಿಗಿದು ಹೆಂಡತಿಯನ್ನು ಕೊಂದು ಎಸ್ಕೇಪ್‌

Murder Case in Bengaluru

ಬೆಂಗಳೂರು: ಪಾಪಿ ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ (murder case) ಪರಾರಿ ಆಗಿದ್ದಾನೆ. ಬೆಂಗಳೂರಿನ (Bengaluru News) ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೇತ್ರಾವತಿ ಹತ್ಯೆಯಾದವಳು. ವೆಂಕಟೇಶ್‌ ಕೊಲೆ ಆರೋಪಿ ಆಗಿದ್ದಾನೆ.

ಪತ್ನಿ ನೇತ್ರಾವತಿಯನ್ನು ಸೀರೆಯಿಂದ ಆಕೆಯ ಕುತ್ತಿಗೆ ಬಿಗಿದು ವೆಂಕಟೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಿನ್ನೆ ಶನಿವಾರ ರಾತ್ರಿ ಹತ್ಯೆ ಮಾಡಿ ಎಸ್ಕೇಪ್‌ ಆಗಿದ್ದಾನೆ. ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತ ದುರ್ದೈವಿ

ಮಾಗಡಿಯ ಗೇರುಪುರ ಮೂಲದ ವೆಂಕಟೇಶ್ ಕ್ರೇನ್ ಆಪರೇಟರ್ ಆಗಿದ್ದ, ನೇತ್ರಾವತಿ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ನೇತ್ರಾವತಿ ಹಾಗೂ ವೆಂಕಟೇಶ್‌ ದಂಪತಿಗೆ 9 ವರ್ಷದ ಮಗನಿದ್ದಾನೆ. ನಾಲ್ಕು ವರ್ಷಗಳಿಂದ ಕಾಮಾಕ್ಷಿಪಾಳ್ಯದ ರಂಗನಾಥಪುರದಲ್ಲಿ ವಾಸವಿದ್ದ ವೆಂಕಟೇಶ್‌ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ನಿತ್ಯ ಗಂಡ-ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು. ನೇತ್ರಾವತಿಗೆ ಹಣ ತರುವಂತೆ ವೆಂಕಟೇಶ್‌ ಒತ್ತಾಯಿಸುತ್ತಿದ್ದ. ನಿನ್ನೆ ಶನಿವಾರ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಪತ್ನಿ ಮೇಲೆ ಹಲ್ಲೆ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ. ಪರಾರಿ ಆಗಿರುವ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸಿದಾಗ, ಮನೆ ಸುತ್ತಮುತ್ತ ಓಡಾಡಿಕೊಂಡಿದ್ದವನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ನಿಧನ; ಬೊಮ್ಮಾಯಿ ಕಂಬನಿ

ತಲೆ ಮೇಲೆ ಕಲ್ಲು ಎತ್ತಿಹಾಕಿ ಸೆಕ್ಯೂರಿಟಿ ಗಾರ್ಡ್‌ನ ಬರ್ಬರ ಹತ್ಯೆ

ಬೆಂಗಳೂರು: ಸೆಕ್ಯೂರಿಟಿ ಗಾರ್ಡ್‌ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ (Murder Case) ಮಾಡಲಾಗಿದೆ. ಬೆಂಗಳೂರಿನ ಕೋಣನ ಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Bengaluru News) ಘಟನೆ ನಡೆದಿದೆ. ಈರೇಶ್ (25) ಮೃತ ದುರ್ದೈವಿ.

ನಿರ್ಮಾಣ ಹಂತದ ಕಟ್ಟಡದಲ್ಲಿ ಈರೇಶ್‌ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. ನಿನ್ನೆ ಶನಿವಾರ ಮಧ್ಯರಾತ್ರಿ ನಿದ್ದೆಗೆ ಜಾರಿದ್ದ ಈರೇಶ್‌ ಮೇಲೆ ಯಾರೋ ಹಂತಕರು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೋಣನಕುಂಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version