Site icon Vistara News

Murder case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ಕಲ್ಲು ಎತ್ತಿ ಹಾಕಿ ಸ್ನೇಹಿತನನ್ನೇ ಕೊಂದ

Man murdered by friend in Bengaluru

ಬೆಂಗಳೂರು: ಸಂಜಯನಗರ ವ್ಯಾಪ್ತಿಯಲ್ಲಿ ಹುಡುಗಿ ವಿಚಾರಕ್ಕೆ ಯುವಕನ (Murder case) ಕೊಲೆಯಾಗಿದೆ. ವರುಣ್ ಕೊಲೆಯಾದವನು. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ರೂಮ್ ಮೇಟ್‌ನಿಂದಲೇ ವರುಣ್‌ ಕೊಲೆಯಾಗಿದ್ದಾನೆ.

ವರುಣ್ ಹಾಗೂ ದಿವೇಶ್ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಮೇಲ್ನೋಟಕ್ಕೆ ಇದೇ ವಿಚಾರಕ್ಕೆ ಕೊಲೆಯಾಗಿರುವ ಮಾಹಿತಿ ಲಭ್ಯವಾಗಿದೆ. ಶನಿವಾರ ಇಬ್ಬರ ನಡುವೆ ಪ್ರೀತಿ ವಿಚಾರಕ್ಕೆ ಗಲಾಟೆ ಆಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ದಿವೇಶ್‌ ವರುಣ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಕೊಲೆಯಾದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಕೊಲೆ ಆರೋಪಿ ದಿವೇಶ್‌ನನ್ನು ಪೊಲೀಸರಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಕೊಲೆಗೆ ಕಾರಣ ಹುಡುಗಿ ವಿಚಾರ ಎಂದು ತಿಳಿದು ಬಂದಿದೆ. ವರುಣ್ ಬಾಗಲೂರಿನಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಇವರಿಬ್ಬರು ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಒಂದೇ ಹುಡುಗಿ ಜತೆಗೆ ಇಬ್ಬರು ಡೇಟಿಂಗ್‌

ಸ್ಥಳಕ್ಕೆ ಎಫ್‌ಎಸ್ಎಲ್ ತಂಡ ಹಾಗೂ ಎಸಿಪಿ ಮನೋಜ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ದಿವೇಶ್ ವರುಣ್‌ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಯುವತಿ ಮೊದಲು ದಿವೇಶ್‌ನನ್ನ ಪ್ರೀತಿ ಮಾಡುತ್ತಿದ್ದಳು. ಬಳಿಕ ಅದೇ ಯುವತಿ ವರುಣ್‌ನ ಪ್ರೀತಿಸಲು ಶುರು ಮಾಡಿದ್ದಳು. ಈ ವಿಚಾರಕ್ಕೆ ನಿನ್ನೆ ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇಂದು ಶನಿವಾರ ಬೆಳಗ್ಗೆಯೂ ಜಗಳವಾಡಿಕೊಂಡು ಇಬ್ಬರು ಹೊರ ಬಂದಿದ್ದಾರೆ. ಬಳಿಕ ಕಲ್ಲು ಎತ್ತಿ ಹಾಕಿ ಆರೋಪಿ ದಿವೇಶ್‌ ಕೊಲೆ ಮಾಡಿದ್ದಾನೆ. ಆರೋಪಿ ದಿವೇಶ್ ವಶಕ್ಕೆ ಪಡೆದು ಸಂಜಯನಗರ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ. ವರುಣ್ ಹಾಗೂ ದಿವೇಶ್ ಇಬ್ಬರು ಸ್ನೇಹಿತರು ಮೂಲತಃ ಉಡುಪಿಯವರು ಎಂದು ತಿಳಿದು ಬಂದಿದೆ. ಸಂಜಯ್ ನಗರದ ಗೆದ್ದಲಹಳ್ಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ವರ್ಷದಿಂದ ವಾಸವಿದ್ದರು. ಒಟ್ಟಾರೆ ನಾಲ್ವರು ಗೆಳೆಯರು ಒಂದೇ ಮನೆಯಲ್ಲಿ ವಾಸವಿದ್ದರು. ಮೂವರು ಉಡುಪಿ ಮೂಲದವರು, ಇನ್ನೋರ್ವ ಬೆಂಗಳೂರಿನವನು. ವರುಣ್‌ ಹಾಗೂ ದಿವೇಶ್‌ ಇಬ್ಬರು ಸಹ ಒಂದೆ ಹುಡುಗಿಯ ಜತೆ ಡೇಟ್ ಮಾಡುತ್ತಿದ್ದರು. ಹುಡುಗಿ ವಿಚಾರಕ್ಕೆ ಜಗಳವಾಡಿ ಇಂದು ಬೆಳಗ್ಗೆ ಸುಮಾರು 8 ಗಂಟೆಗೆ ಕೊಲೆ ಮಾಡಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version