ಬೆಂಗಳೂರು: ಉದ್ಯಮಿ ಕೃಷ್ಣಯಾದವ್ ಕೊಲೆ ಪ್ರಕರಣಕ್ಕೆ (Murder Case) ಸಂಬಂಧಿಸಿದಂತೆ ಯಲಹಂಕ ಪೊಲೀಸರು ಪ್ರಮುಖ ಆರೋಪಿ ಸಂತೋಷ್ ಎಂಬಾತನನ್ನು ಬಂಧಿಸಿದ್ದಾರೆ.
ಹತ್ಯೆ ದಿನದಂದು ಸಂತೋಷ್ ಹಾಗೂ ಕೃಷ್ಣಯಾದವ್ ಇಬ್ಬರು ಜತೆಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಂತೋಷ್‌ನ ಪತ್ನಿ ಹಾಗೂ ಪುತ್ರನ ಬಗ್ಗೆ ಕೃಷ್ಣಯಾದವ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಹೆಂಡ್ತಿ ಮಗನಿಗೆ ಬೈದಿದ್ದಕ್ಕೆ ಸಂತೋಷ್ ಸಿಟ್ಟಾಗಿದ್ದ.
ಕೃಷ್ಣ ಯಾದವ್ ಹಾಗೂ ಸಂತೋಷ್ ನಡುವೆ ಶುರುವಾದ ಜಗಳವು ವಿಕೋಪಕ್ಕೆ ತಿರುಗಿತ್ತು. ಇದೇ ವೇಳೆ ಕಾರಿನಲ್ಲಿದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡ ಸಂತೋಷ್ ಮನಬಂದಂತೆ ಕೃಷ್ಣಯಾದವ್‌ಗೆ ಇರಿದಿದ್ದ. ಸಂತೋಷ್ ದಿಢೀರ್ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದ ಕೃಷ್ಣ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದ.
ಹತ್ಯೆ ಬಳಿಕ ಸಂತೋಷ್ ಕಾರನ್ನು ಬಾಗಲೂರು ಕ್ರಾಸ್ ಬಳಿ ಬಿಟ್ಟು ಎಸ್ಕೇಪ್ ಆಗಿದ್ದ. ಸದ್ಯ ಯಲಹಂಕ ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.
ಸಂತೋಷ್ ಪತ್ನಿ ಮೇಲೆ ಕೃಷ್ಣನ ಕೆಟ್ಟ ಕಣ್ಣು
ಕೃಷ್ಣ ಯಾದವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ. ಈ ವೇಳೆ ಸಂತೋಷ್ ಕುಮಾರ್ ಪರಿಚಯವಾಗಿತ್ತು. ನಾನು ಏನಾದರೂ ಬ್ಯುಸಿನೆಸ್ ಮಾಡಬೇಕು ಸಹಾಯ ಮಾಡಿ ಎಂದು ಸಂತೋಷ್, ಕೃಷ್ಣ ಯಾದವ್ ಬಳಿ ಹೇಳಿಕೊಂಡಿದ್ದ. ಹತ್ಯೆ ದಿನ ಮಂಗಳವಾರ ರಾತ್ರಿ ಮದ್ಯ ಸೇವನೆಗಾಗಿ ಕೃಷ್ಣ ಯಾದವ್ ಸಂತೋಷ್‌ನನ್ನು ಕರೆದಿದ್ದ. ನಾನು ನಿನ್ನ ಬ್ಯುಸಿನೆಸ್‌ಗೆ ಇನ್ವೆಸ್ಟ್ ಮಾಡುತ್ತಿನಿ. ಇದಕ್ಕೆ ಪ್ರತಿಫಲವಾಗಿ ನಿನ್ನ ಹೆಂಡತಿನ ನನ್ನೊಂದಿಗೆ ಸಹಕರಿಸುವಂತೆ ಹೇಳು ಎಂದಿದ್ದ. ಪತ್ನಿ ಮೇಲೆ ಕೆಟ್ಟ ಕಣ್ಣು ಹಾಕಿದ್ದ ಕೃಷ್ಣ ಯಾದವ್ ಮೇಲೆ ಕೋಪಗೊಂಡ ಸಂತೋಷ್, ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.
ಕಾರಲ್ಲಿ ಪತ್ತೆಯಾಗಿತ್ತು ಶವ!
ಕಳೆದ ಮಾ.12ರಂದು ಬಳ್ಳಾರಿ ರಸ್ತೆಯ ಬಾಗಲೂರು ಕ್ರಾಸ್ ಸಮೀಪ ಕೊಲೆಯಾದ ಸ್ಥಿತಿಯಲ್ಲಿ ಕಾರಿನಲ್ಲಿ ಶವ (Dead body Found) ಪತ್ತೆಯಾಗಿತ್ತು. ಹಂತಕರು ವ್ಯಕ್ತಿಯನ್ನು ಕೊಲೆಗೈದು (Murder Case) ಕಾರಿನಲ್ಲಿ ಶವ ಬಿಟ್ಟು ಪರಾರಿ ಆಗಿದ್ದರು. ರಸ್ತೆ ಬದಿ ನಿಂತಿದ್ದ ಬಿಳಿ ಬಣ್ಣದ ಸ್ವಿಟ್ಪ್ ಕಾರಿನಲ್ಲಿ ಶವ ಕಂಡು ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಯಲಹಂಕ ಠಾಣೆ ಪೊಲೀಸರು ಪರಿಶೀಲಿಸಿದಾಗ, ಕೊಲೆಯಾದವರು ಕೃಷ್ಣ ಯಾದವ್ ಎಂದು ತಿಳಿದು ಬಂದಿತ್ತು.
ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದ ಕೃಷ್ಣ ಯಾದವ್, ಮನೆಯಿಂದ ಕೆಲಸಕ್ಕೆಂದು ಹೊರ ಹೋಗಿದ್ದರು. ಆದರೆ ಮನೆಗೆ ವಾಪಸ್ ಆಗಿರಲಿಲ್ಲ . ಮಾ.11ರ ರಾತ್ರಿಯಿಂದ ಕಾಣೆಯಾಗಿದ್ದ ಕೃಷ್ಣ ಮರುದಿನ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೃಷ್ಣ ಯಾದವ್ ಕೋಗಿಲುವಿನ ವೆಂಕಟಾಲ ಬಳಿ ಕಛೇರಿವೊಂದನ್ನು ತೆರೆದಿದ್ದರು. ಹಲವು ವರ್ಷಗಳಿಂದ ಯಲಹಂಕದಲ್ಲೇ ಕೃಷ್ಣ ಯಾದವ್ ಕುಟುಂಬಸ್ಥರು ನೆಲೆಸಿದ್ದರು. ಆಫೀಸ್ ಮಿಟಿಂಗ್ ಎಂದು ಮನೆ ಬಿಟ್ಟಿದ್ದ ಕೃಷ್ಣ ಯಾದವ್ ಬರ್ಬರವಾಗಿ ಹತ್ಯೆಯಾಗಿದ್ದರು.
ಇದನ್ನೂ ಓದಿ: Mandya Accident : ವಿಸಿ ನಾಲೆಗೆ ಉರುಳಿದ ಕಾರು, ಇಬ್ಬರು ಸ್ಥಳದಲ್ಲೇ ದುರ್ಮರಣ
ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿ ಸಂತೋಷ್‌ನನ್ನು ಬಂಧಿಸಿದ್ದಾರೆ.
ಮುಗಿಲು ಮುಟ್ಟಿದ್ದ ಮೃತ ಕುಟುಂಬಸ್ಥರ ಆಕ್ರಂದನ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ