ಬೆಂಗಳೂರು: ಕಳೆದ ಮೇ 9 ರಂದು ಬೆಂಗಳೂರಿನ ಎಸ್‌ಆರ್ ನಗರ ಠಾಣಾ ವ್ಯಾಪ್ತಿಯಲ್ಲಿರುವ ಮಿಷನ್ ರೋಡ್‌ನ ಪಿ.ಸಿ.ಮೋಹನ್ ಆ್ಯಂಡ್ ಕೊ ಕಾಂಪ್ಲೆಕ್ಸ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಯುವಕನೊಬ್ಬನ ಶವ (Dead Body Found) ಪತ್ತೆಯಾಗಿತ್ತು. ಕೆ.ಎಸ್. ಗಾರ್ಡನ್ ನಿವಾಸಿ ಸತ್ಯ (22) ಎಂಬಾತ ಸ್ನೇಹಿತರ ಜತೆ ಹೊರಹೋದವನು (Murder Case) ಬೀದಿ ಹೆಣವಾಗಿದ್ದ. ಮೊದಮೊದಲು ಇದು ಪ್ರೀತಿ ವಿಚಾರಕ್ಕೆ ಕೊಲೆ ಆಗಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಯುವಕನ ಸಾವಿನ ಸಿಕ್ರೇಟ್ (Secret revealed) ಅನ್ನು ಎಸ್.ಆರ್ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳೆದ ಮೇ 9ರಂದು ರಾತ್ರಿ ಕಾಂಪ್ಲೆಕ್ಸ್‌ನ ಪಕ್ಕದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲೆ ಸತ್ಯ ತೆರಳಿದ್ದ. ಈ ವೇಳೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್‌ಗಳು ಸತ್ಯನನ್ನು ಕಳ್ಳ ಎಂದು ಭಾವಿಸಿ ಹಿಡಿಯಲು ಹೋಗಿದ್ದಾರೆ. ಈ ತಳ್ಳಾಟ ನೂಕಾಟದಲ್ಲಿ ಸತ್ಯ ಕಾಲು ಜಾರಿ ಕಟ್ಟಡದಿಂದ ಕೆಳಗೆ ಬಿದಿದ್ದ. ಆಗ ವಿದ್ಯುತ್ ತಂತಿ ಸ್ಪರ್ಶದಿಂದ ಮೃತ ಪಟ್ಟಿದ್ದ.
ಅನಂತರ ಸತ್ಯ ಸಾವಿನ ವಿಚಾರ ತಿಳಿದ ಸೆಕ್ಯೂರಿಟಿ ಗಾರ್ಡ್ ರಂಜಿತ್ ಪ್ರದಾನ್, ರಮೇಶ್ ರಾತ್ರೋರಾತ್ರಿ ಸತ್ಯನ ಮೃತದೇಹವನ್ನು ಪಕ್ಕದ ಕಟ್ಟಡಕ್ಕೆ ರವಾನಿಸಿದರು. ಮರುದಿನ ಮೇ 10ರಂದು ನೆಲಮಹಡಿಯಲ್ಲಿ ಶವ ಪತ್ತೆಯಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಸತ್ಯನ ಸಾವಿನ ಸಿಕ್ರೇಟ್ ಬಯಲಾಗಿದೆ. ಸದ್ಯ ಎಸ್‌ಆರ್ ನಗರ ಪೊಲೀಸರು ಐಪಿಸಿ 304ರ ಅಡಿ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಕೆಎಸ್ ಗಾರ್ಡನ್ ನಿವಾಸಿಯಾದ ಸತ್ಯ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ. ಈ ಹಿಂದೆ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಅದೇ ವಿಚಾರವಾಗಿ ಸತ್ಯನ ಕೊಲೆಯಾಗಿದೆ ಎಂದು ಆರೋಪಿಸಿಸಲಾಗಿತ್ತು.ಆದರೆ ತನಿಖೆ ಕೈಗೊಂಡಾಗ ಅಸಲಿ ಸತ್ಯ ತಿಳಿದುಬಂದಿದೆ.
ಇದನ್ನೂ ಓದಿ: Illegal hunting: ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?
ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ
ದೊಡ್ಡಬಳ್ಳಾಪುರ: ಕೊಲೆ ಆರೋಪಿಯೊಬ್ಬನ (Murder Suspect) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Encounter) ಬಂಧಿಸಿದ್ದಾರೆ. ಹೇಮಂತ್ ಕುಮಾರ್ ಗೌಡ ಎಂಬ ಯುವಕನ ಕೊಲೆ (Murder Case) ಆರೋಪಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಮಿಟ್ಟೆ ಕಾಲಿಗೆ ಗುಂಡು ಹಾರಿಸಿ (Shoot out) ಬಂಧಿಸಲಾಗಿದೆ.
ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಬಳಿ ಘಟನೆ ನಡೆದಿದೆ. ರೌಡಿ ಶೀಟರ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಮೇಲೆ ಈತ ಹಲ್ಲೆ ನಡೆಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ಅವರಿಂದ ಫೈರಿಂಗ್ ನಡೆದಿದೆ.
ಈತ ಕೊಲೆ ಕೇಸ್‌ನ 2ನೇ ಆರೋಪಿಯಾಗಿದ್ದಾನೆ. ಮೇ 11ರಂದು ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗ ಹೇಮಂತ್ ಕುಮಾರ್ ಗೌಡ (27) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೇಮಂತ್ ಅವರನ್ನು ಅಟ್ಟಾಡಿಸಿ ಕೊಲೆ ಮಾಡಿ ಆರೋಪಿಗಳು ಕಾರಿನಲ್ಲಿ ಶವದ ಜೊತೆ ರೌಂಡ್ಸ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ