Site icon Vistara News

Murder Case: ʼಗಣೇಶ ಬಲಿ ಕೇಳುತ್ತೆ..ʼʼ ಎಂದರು, ಇರಿದರು! ಮೂರ್ತಿ ವಿಸರ್ಜನೆ ವೇಳೆ ಗಲಾಟೆ, ಕೊಲೆಯಲ್ಲಿ ಅಂತ್ಯ

crime Scene Occasional photo

ಬೆಂಗಳೂರು: ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಹುಟ್ಟಿಕೊಂಡ ಎರಡು ಗುಂಪುಗಳ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ (Murder Case) ಕೊನೆಗೊಂಡಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (crime news) ದಾಖಲಾಗಿದೆ.

ಶ್ರೀನಿವಾಸ್ ಎನ್ನುವ ವ್ಯಕ್ತಿ ಕೊಲೆಯಾಗಿದ್ದಾನೆ. ಲಾಂಗ್ ಮಚ್ಚುಗಳಿಂದ ಎರಡೂ ಗುಂಪುಗಳು ಹೊಡೆದಾಟ (Gang war) ಮಾಡಿಕೊಂಡಿವೆ. ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ ಸಮಯದಲ್ಲಿಯೂ ಡ್ಯಾನ್ಸ್ ವಿಚಾರವಾಗಿ ಗಲಾಟೆಯಾಗಿತ್ತು. ಅಂದು ಶ್ರೀನಿವಾಸ್ ಕಡೆಯವರಿಗೆ ವಿರೋಧಿಗಳ ಗುಂಪು ನೀವು ಇಲ್ಲಿ ಡ್ಯಾನ್ಸ್ ಮಾಡಬೇಡಿ ಎಂದು ವಾರ್ನ್ ಮಾಡಿದ್ದರು. ನಿನ್ನೆ ಶ್ರೀನಿವಾಸ್ ವಿರೋಧಿಗಳ ಗುಂಪಿನ ಏರಿಯಾದಲ್ಲಿ ಗಣಪತಿ ಬಿಡುವಾಗ ಶ್ರೀನಿವಾಸ್‌ ಗುಂಪಿನವರು ಡ್ಯಾನ್ಸ್ ಮಾಡಿದ್ದರು.

ಈ ವೇಳೆ ಗಲಾಟೆ ಶುರುವಾಗಿದೆ. ಗಣಪತಿ ಮೆರವಣಿಗೆ ವೇಳೆ ಈ ಗಣೇಶ ಬಲಿ ಕೇಳುತ್ತೆ ಎಂದು ವಿರೋಧಿಗಳು ಕೂಗಿದ್ದು, ಆ ವೇಳೆ ಮೃತ ಶ್ರೀನಿವಾಸ್ ಮತ್ತು ಆರೋಪಿಗಳ ನಡುವೆ ಗಲಾಟೆ ಶುರುವಾಗಿದೆ. ಸಿದ್ಧತೆ ಮಾಡಿಕೊಂಡು ಬಂದಿದ್ದ ಗುಂಪುಗಳು ಲಾಂಗು ಮಚ್ಚುಗಳಿಂದ ಹೊಡೆದಾಡಿವೆ. ಶ್ರೀನಿವಾಸ್‌ಗೆ ಚಾಕುವಿನಿಂದ ಇರಿಯಲಾಗಿದೆ. ಗಲಾಟೆಯಲ್ಲಿ ರಂಜಿತ್ ಎನ್ನುವವನಿಗೂ ಗಂಭೀರ ಗಾಯವಾಗಿದೆ. ಗಲಾಟೆ ಬಿಡಿಸಲು ಬಂದ ಮೃತ ಶ್ರೀನಿವಾಸ್ ತಾಯಿಗೂ ಗ್ಯಾಂಗ್‌ ಇರಿದಿದೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಲಾಟೆ ಸಂದರ್ಭದಲ್ಲಿ ಒಬ್ಬ ರೌಡಿಶೀಟರ್ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ ಎಂದು ಆಗ್ನೇಯ ಡಿಸಿಪಿ‌ ಸಿಕೆ‌ ಬಾಬಾ ಹೇಳಿದ್ದಾರೆ.Murder Case

ಇದನ್ನೂ ಓದಿ: Murder Case : ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಸುಲಿಗೆ ಮಾಡಿ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ

Exit mobile version