Site icon Vistara News

Murder Case : ಪ್ರಬುದ್ಧಳ ಕೊಲೆ ಮಾಡಿದ್ದು ತಮ್ಮನ ಸ್ನೇಹಿತನೇ; ಕನ್ನಡಕದ ಹಿಂದಿನ ರಹಸ್ಯ ರಿವೀಲ್‌

Murder Case in Bengaluru

ಬೆಂಗಳೂರು: ಬೆಂಗಳೂರಿನ (Bengaluru News) ಸುಬ್ರಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ (Suspicious Case) ಪ್ರಬುದ್ಧ (21) ಎಂಬಾಕೆ (prabuddha murder case) ಮೃತಪಟ್ಟಿದ್ದಳು. ತನಿಖೆಗಿಳಿದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು (Murder Case) ಸಾಬೀತಾಗಿತ್ತು. ಆದರೆ ಕೊಲೆಗಾರರು ಯಾರು? ಯಾಕಾಗಿ ಕೊಲೆ ನಡೆಯಿತು ಎಂಬುದು ತಿಳಿದಿರಲಿಲ್ಲ. ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಅಪ್ರಾಪ್ತನೊಬ್ಬ ಸ್ನೇಹಿತನ ಕನ್ನಡಕ ರಿಪೇರಿ ವಿಚಾರಕ್ಕೆ ಪ್ರಬುದ್ಧಳ ಕೊಲೆ ನಡೆದು ಹೋಗಿದೆ.

ಪ್ರಬುದ್ಧಳ ತಮ್ಮ ಹಾಗೂ ಹತ್ಯೆ ಮಾಡಿದ ಆರೋಪಿ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ತನ್ನ ಸ್ನೇಹಿತನ ಕನ್ನಡಕವನ್ನು ಡ್ಯಾಮೇಜ್ ಮಾಡಿದ್ದ. ಇದನ್ನು ರಿಪೇರಿ‌ ಮಾಡಿಸಿ ಕೊಡು ಎಂದು ಸ್ನೇಹಿತ ಪಟ್ಟು ಹಿಡಿದಿದ್ದ. ಆದರೆ ರಿಪೇರಿಗೆ ಕಾಸಿಲ್ಲದೇ ಅಪ್ರಾಪ್ತ ಆರೋಪಿ ಸುಮ್ಮನಾಗಿದ್ದ.

ಕೊಲೆಯಾದ ದಿನ ಪ್ರಬುದ್ಧ ಮನೆಗೆ ಬಂದಿದ್ದ ಆರೋಪಿ, ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದ. ಆರೋಪಿ ಕದಿಯುವುದನ್ನು ಕಂಡ ಪ್ರಬುದ್ಧ ಪ್ರಶ್ನೆ ಮಾಡಿದ್ದಳು. ಇದರಿಂದ ಗಾಬರಿಗೊಂಡ ಆರೋಪಿ ಕ್ಷಮಿಸಿಬಿಡು ಎಂದು ಕಾಲು ಹಿಡಿದುಕೊಂಡಿದ್ದ.

ಈ ಗಲಿಬಿಲಿಯಲ್ಲಿ ಆರೋಪಿ ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಳು. ಈ ವೇಳೆ ತಲೆಗೆ ಪೆಟ್ಟು ಬಿದ್ದಾಗ, ಪ್ರಜ್ಞೆ ತಪ್ಪಿದ್ದಳು. ಇದರಿಂದ ಆತಂಕಗೊಂಡ ಆರೋಪಿ ಆತ್ಮಹತ್ಯೆ ಎಂಬಂತೆ ಬಿಂಬಿಸಲು ಕೈ ಹಾಗೂ ಕುತ್ತಿಗೆಯನ್ನು ಕೊಯ್ದು ಅಲ್ಲಿಂದ ಪರಾರಿ ಆಗಿದ್ದ. ಪ್ರಜ್ಞೆ ತಪ್ಪಿದ್ದ ಪ್ರಬುದ್ಧ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇದನ್ನೂ ಓದಿ: Karnataka Rain : ಸಿಡಿಲಾಘಾತಕ್ಕೆ ವಿದ್ಯಾರ್ಥಿ ಬಲಿ; ಗಾಳಿ-ಮಳೆಗೆ ಮರ ಮುರಿದು ಬಿದ್ದು ಜಾನುವಾರು ಸಾವು

ಏನಿದು ಘಟನೆ?

ಮೇ 15ರ ಮಧ್ಯಾಹ್ನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರಬುದ್ಧ ಎಂಬಾಕೆ ಮನೆಯ ಬಾತ್‌ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಕುತ್ತಿಗೆ ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಆ ದಿನ ಪ್ರಬುದ್ಧ ತಾಯಿ ಸೌಮ್ಯಗೆ ಕರೆ ಮಾಡಿ ಫ್ರೆಂಡ್ಸ್‌ ಜತೆಗೆ ಇದ್ದೀನಿ ಪಾನಿಪುರಿ ತಿಂದು ಮನೆಗೆ ಹೋಗುತ್ತಿನಿ ಅಂದಿದ್ದಳು. ನಂತರ ಆಫೀಸ್‌ ಮುಗಿಸಿ ಮನೆಗೆ ಬಂದು ನೋಡಿದಾಗ ಮಗಳು ಬಾತ್‌ ರೂಮಿನಲ್ಲಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮನೆಯ ಮುಂದಿನ ಡೋರ್‌ ಲಾಕ್‌ ಆಗಿತ್ತು. ಆದರೆ ಹಿಂದಿನ ಡೋರ್‌ ಓಪನ್‌ ಆಗಿತ್ತು ಎಂದು ಸೌಮ್ಯ ಘಟನೆ ವಿವರ ನೀಡಿದ್ದರು. ಮಗಳ ಫೋನ್‌ ಸೋಫ್‌ ಮೇಲೆ ಇತ್ತು. ಆಕೆಯನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಬರುವಷ್ಟರಲ್ಲಿ ಫೋನ್‌ ಕೂಡ ಕಳ್ಳತನ ಆಗಿತ್ತು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳು ಅಲ್ಲ.. ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಕಾರಣವನ್ನು ಭೇದಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version