ಬೆಂಗಳೂರು: ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು, ಒಬ್ಬ ರೌಡಿ ಶೀಟರ್ ಮತ್ತೊಬ್ಬ ರೌಡಿಯನ್ನು ಹೊಡೆದು ಕೊಂದು (murder case) ಹಾಕಿದ್ದಾನೆ.
ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಹದೇಶ್ವರ ದೇವಾಲಯದ ಬಳಿ ಘಟನೆ ನಡೆದಿದೆ. ಕೆ.ಪಿ ಅಗ್ರಹಾರದ ರೌಡಿ ಶೀಟರ್ ಸಾಗರ್ ಕೊಲೆಯಾದವನು. ವಿಜಯನಗರದ ರೌಡಿ ಶೀಟರ್ ನವೀನ್ ಅಲಿಯಾಸ್ ಕೆ. ಕೊಲೆ ಮಾಡಿದ ಅರೋಪಿ.
ನಿನ್ನೆ ರಾತ್ರಿ ಇಬ್ಬರೂ ಒಟ್ಟಿಗೆ ಕುಳಿತು ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಮತ್ತೆ ಲಿಕ್ಕರ್ ಬೇಕು ಎಂದು ಒಬ್ಬನನ್ನು ಬಾರ್ಗೆ ಕಳಿಸಿದ್ದಾರೆ. ಈ ವೇಳೆ ಸಾಗರ್ ಮತ್ತು ನವೀನ್ ನಡುವೆ ಮಾತು ಮಾತಿಗೆ ಬೆಳೆದು ಜಗಳ ಶುರುವಾಗಿದೆ. ಈ ವೇಳೆ ನವೀನ್ ಲಾಂಗ್ನಿಂದ ಸಾಗರ್ಗೆ ಹಲ್ಲೆ ಮಾಡಿದ್ದಾನೆ. ಮನಸೋ ಇಚ್ಛೆ ಹಲ್ಲೆ ಮಾಡಿ ಸಾಗರ್ನನ್ನು ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸದ್ಯ ಪರಾರಿಯಾಗಿರುವ ರೌಡಿ ಶೀಟರ್ ನವೀನ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.