Site icon Vistara News

Murder Case : ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ರಕ್ತಕಾರಿದ ರೌಡಿಶೀಟರ್‌

murder case

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ (Murder case) ಬರ್ಬರ ಹತ್ಯೆಯಾಗಿದೆ. ಅಂಚೇಪಾಳ್ಯ ನಾಗ ಕೊಲೆಯಾದ ರೌಡಿಶೀಟರ್ ಆಗಿದ್ದಾನೆ. ರಾತ್ರೋರಾತ್ರಿ ಮುತ್ತುರಾಯನಗರ ಸಮೀಪದ ರೈಲ್ವೇ ಟ್ರಾಕ್ ಸಮೀಪ ಎದುರಾಳಿ ಗ್ಯಾಂಗ್‌ವೊಂದು ಅಟ್ಯಾಕ್‌ ಮಾಡಿ ಕೊಂದು ಹಾಕಿದೆ.

ಮುಖಮೂತಿ ನೋಡದೆ ಮಾರಕಾಸ್ತ್ರಗಳಿಂದ ರೌಡಿ ನಾಗನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಮಾರಣಾಂತಿಕ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವವಾಗಿ ನಾಗ ಬೀದಿ ಹೆಣವಾಗಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಜ್ಞಾನಭಾರತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆಗಾರರಿಗಾಗಿ ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Actor Darshan: ದರ್ಶನ್‌ಗೆ ನೆರವು ಕೊಟ್ಟ ಮತ್ತೊಬ್ಬ ಸ್ಯಾಂಡಲ್‌ವುಡ್‌ ನಟ ಅರೆಸ್ಟ್‌!

ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650 ಮಾತ್ರೆ!

ಬೆಂಗಳೂರು : ತನ್ನ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರುವ ನಟ ದರ್ಶನ್ (Actor Darshan Arrested) ಹಾಗೂ ಆತನ ಸಹಚರರಿಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಮಂಗಳವಾರ ರಾತ್ರಿಯ ಊಟಕ್ಕೆ ಚಿಕ್ಕಪೇಟೆ ಬಿರಿಯಾನಿ ತಂದುಕೊಟ್ಟಿದ್ದಾರೆ. ಪ್ರಕರಣದಲ್ಲಿ ದರ್ಶನ್​ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳಿದ್ದಾರೆ. ಅವರೆಲ್ಲರನ್ನೂ ನ್ಯಾಯಾಲಯ ಪೊಲೀಸರ ಕಸ್ಟಡಿಗೆ ನೀಡಿದೆ. ಪವಿತ್ರಾ ಸಾಂತ್ವನ ಕೇಂದ್ರದಲ್ಲಿ ಇದ್ದರೆ ಉಳಿದವರು ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ರಾತ್ರಿಯ ಊಟಕ್ಕೆ ಪೊಲೀಸರು ಅವರೆಲ್ಲರಿಗೂ ಚಿಕ್ಕಪೇಟೆ ಬಿರಿಯಾನಿ ಪ್ಯಾಕೇಟ್​ಗಳನ್ನು ತೆಗೆದುಕೊಂಡು ಹೋಗಿರುವ ದೃಶ್ಯಗಳು ಸೆರೆಯಾಗಿವೆ.

ದೊಡ್ಡ ಪ್ರಮಾಣದಲ್ಲಿ ಬಿರಿಯಾನಿ ಪ್ಯಾಕೆಟ್​ಗಳನ್ನು ಕ್ಯಾರಿ ಬ್ಯಾಗ್​ನಲ್ಲಿ ತುಂಬಿಸಿಕೊಂಡು ಹೋಗಿದ್ದು, ಜತೆಗೆ ಎಲ್ಲರಿಗೂ ಮಿನರಲ್ ವಾಟರ್​ ನೀಡಲಾಗಿದೆ. ಆರೋಪಿಗಳು ಕೆಲವರು ಬೆಳಗ್ಗಿನಿಂದ ಬಂಧನ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಮೈಕೈ ನೋವು, ತಲೆ ನೋವು ಎಂದಿದ್ದು ಅವರೆಲ್ಲರಿಗೂ ಡೋಲೋ 650 ಮಾತ್ರೆಯನ್ನೂ ತಂದಕೊಟ್ಟಿದ್ದಾರೆ.

ಆರೋಪಿ ಚಿತ್ರನಟ ಹಾಗೂ ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಪ್ರಕರಣವಾಗಿರುವ ಕಾರಣ ತಮ್ಮ ವಶದಲ್ಲಿರುವ ಆರೋಪಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಪೊಲೀಸರಿಗೆ ಅನಿವಾರ್ಯ. ಹೀಗಾಗಿ ಅವರ ಊಟ, ತಿಂಡಿ ಹಾಗೂ ಇನ್ನಿತರ ಉಪಚಾರಗಳನ್ನು ಮಾಡಲು ಪೊಲೀಸರ ತಂಡ ನಾನಾ ರೀತಿಯ ಶ್ರಮಗಳನ್ನು ಹಾಕುತ್ತಿದೆ.

ಹಾಸಿಗೆ, ತಲೆದಿಂಬು

ಆರೋಪಿ ನಂಬರ್ 1 ದರ್ಶನ್ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ರಾತ್ರಿ ವೇಳೆ ಮಲಗಲು ಹಾಸಿಗೆ ಹಾಗೂ ತಲೆ ದಿಂಬು ವ್ಯವಸ್ಥೆಯನ್ನೂ ಮಾಡಿದ್ದಾರೆ. 9 ಗಂಟೆ ವೇಳೆಗೆ ಪೊಲೀಸರು ನಾನಾ ಕಡೆಯಿಂದ ಆರೋಪಿಗಳೆಲ್ಲರಿಗೂ ಮಲಗಲು ಕಾರ್ಪೆಟ್​, ಬೆಡ್​ಶೀಟ್​ ಹಾಗೂ ತಲೆ ದಿಂಬಿನ ವ್ಯವಸ್ಥೆ ಮಾಡಿದ್ದಾರೆ. ಆರು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿರುವ ಪೊಲೀಸರಿಗೆ ಮುಂದಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡುವೆ ಇಷ್ಟೊಂದು ವ್ಯವಸ್ಥೆಗಳನ್ನು ಮಾಡಲೇಬೇಕಾಗುತ್ತದೆ.

ಇದನ್ನೂ ಓದಿ: Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

ಏತನ್ಮಧ್ಯೆ, ಆರೋಪಿ ನಂಬರ್​ 2 ಪವಿತ್ರಾಗೌಡ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಪೊಲೀಸರು ಅವರನ್ನು ಅಲ್ಲಿಗೆ ಜೀಪ್​ನಲ್ಲಿ ಕರೆದುಕೊಂಡು ಹೋಗಿ ಬಿಡುತ್ತಿದ್ದಂತೆ ನಗುನಗುತ್ತಾ ಅವರು ಸಾಂತ್ವನ ಕೇಂದ್ರ ಸೇರಿಕೊಂಡಿದ್ದಾರೆ. ನಡೆದ ಘಟನೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಅವರು ಕೇಂದ್ರ ಸೇರಿಕೊಂಡಿದ್ದಾರೆ.

ಕೊಲೆಗೆ ಕಾರಣ

ರೇಣುಕಾಸ್ವಾಮಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ. ಈ ವಿಷಯ ತಿಳಿದು ದರ್ಶನ್ ಆಪ್ತರು ನಕಲಿ ಅಕೌಂಟ್ ತೆರೆದಿದ್ದರು. ಬಳಿಕ ರೇಣುಕಾಸ್ವಾಮಿ ಜತೆ ಚಾಟಿಂಗ್ ನಡೆಸಲಾಗಿತ್ತು. ಬಳಿಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ನಡೆಸಲಾಗಿತ್ತು. ಈ ವೇಳೆ ಆತ ಸಾವನ್ನಪ್ಪಿದ್ದ. ಆತ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ದರ್ಶನ್‌ ಆಪ್ತರು ಸ್ಕಾರ್ಪಿಯೋ ಕಾರಿನಲ್ಲಿ ಶವವನ್ನು ತಂದು ಬಿಸಾಡಿ ಹೋಗಿದ್ದರು. ಬಳಿಕ ಪೊಲೀಸರಿಗೆ ಕಾಲ್‌ ಮಾಡಿ ತಪ್ಪಾಗಿದೆ ಸರ್ ಅಂದಿದ್ದರು. ಬಳಿಕ ಬಂದು ಮೂವರು ಪೊಲೀಸರ ಮುಂದೆ ಶರಣಾಗಿದ್ದರು ಎನ್ನಲಾಗಿದೆ.

ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಅವರ ಗೆಳತಿಯೂ ಆದ ನಟಿ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಯಾರು?

ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 28 ವರ್ಷದ ಯುವಕನು ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್‌ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್‌ ಅಭಿಮಾನಿಯಾಗಿದ್ದ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version