ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ (Murder Case) ಮಾಡಲಾಗಿದೆ. ಬೆಂಗಳೂರಿನ ಕೋಣನ ಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Bengaluru News) ಘಟನೆ ನಡೆದಿದೆ. ವೀರೇಶ್ (25) ಮೃತ ದುರ್ದೈವಿ.
ನಿರ್ಮಾಣ ಹಂತದ ಕಟ್ಟಡದಲ್ಲಿ ವೀರೇಶ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ನಿನ್ನೆ ಶನಿವಾರ ಮಧ್ಯರಾತ್ರಿ ನಿದ್ದೆಗೆ ಜಾರಿದ್ದ ವೀರೇಶ್ ಮೇಲೆ ಯಾರೋ ಹಂತಕರು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾರೆ.
ಘಟನೆ ಸಂಬಂಧ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೋಣನಕುಂಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಭರಮಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀರೇಶ್ ಎಂಬಾತ ಶವ ಪತ್ತೆಯಾಗಿದೆ. ರಾಯಚೂರಿನ ವೀರೇಶ್ ಕಟ್ಟಡ ಕಾರ್ಮಿಕನಾಗಿದ್ದ. ಸದ್ಯ ವೀರೇಶ್ ಅವರ ಸಂಬಂಧಿಕರು, ಸಹೋದ್ಯೋಗಿಗಳ ವಿಚಾರಣೆ ನಡೆಯುತ್ತಿದೆ. ಮೃತನ ಸಂಬಂಧಿಕರು ದೂರು ನೀಡಿದ್ದಾರೆ. ಅನುಮಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: Monkey attack: ಏಕಾಏಕಿ ದಾಳಿ ನಡೆಸಿದ ಮಂಗಗಳು; ಈ ಬಾಲಕಿ ಏನು ಮಾಡಿದಳು ಗೊತ್ತೇ
ಪತ್ನಿಯನ್ನು ಕೊಂದು 200 ತುಂಡು ಮಾಡಿ ನದಿಗೆ ಎಸೆದ ಪಾಪಿ
ಲಿಂಕನ್‌ಶೈರ್: ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಪತ್ನಿಯನ್ನು ಭೀಕರವಾಗಿ ಹತ್ಯೆ (murder case) ಮಾಡಿ ಆಕೆಯ ದೇಹವನ್ನು 200ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಸುಮಾರು ಒಂದು ವಾರ ಕಾಲ ಅಡುಗೆ ಮನೆಯಲ್ಲಿ ಇಟ್ಟು ನದಿಗೆ ಎಸೆದಿರುವ ಭೀಕರ ಘಟನೆ ಇಂಗ್ಲೆಂಡ್‌ನ (england) ಲಿಂಕನ್‌ಶೈರ್ ನಲ್ಲಿ (Lincolnshire ) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರಾರಂಭದಲ್ಲಿ ಪತ್ನಿ ನನ್ನಿಂದ ಅವಿತುಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ತಮಾಷೆ ಮಾಡಿ ನಗುತ್ತಿದ್ದ ಆರೋಪಿ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ನಿಕೋಲಸ್ ಮೆಟ್ಸನ್ (28) (Nicholas Metson) ತನ್ನ ಪತ್ನಿ ಹಾಲಿ ಬ್ರಾಮ್ಲಿ (26) (Holly Bramley) ಯನ್ನು ಮಾರ್ಚ್‌ನಲ್ಲಿ ತನ್ನ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಹಾಲಿ ಬ್ರಾಮ್ಲಿಯನ್ನು ಬೆಡ್ ರೂಮ್‌ನಲ್ಲೇ ಚಾಕುವಿನಿಂದ ಇರಿದು ಕೊಂದಿದ್ದ ನಿಕೋಲಸ್ ಮೆಟ್ಸನ್ ಬಳಿಕ ಆಕೆಯ ಶವವನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗಿ 200ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ದೇಹದ ಚೂರುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ. ಬಳಿಕ ಅದನ್ನು ಅಡುಗೆಮನೆಯ ಲ್ಯಾಡರ್ ನಲ್ಲಿ ಆಹಾರ ಸಂಗ್ರಹಣೆ ರೀತಿಯಂತೆ ತಂಪಾದ ಪ್ರದೇಶದಲ್ಲಿ ವಾರಗಳ ಕಾಲ ಇರಿಸಿದ್ದಾನೆ.
ಇದನ್ನೂ ಓದಿ: Cole Brings Plenty: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ನಟ ಅರಣ್ಯದಲ್ಲಿ ಶವವಾಗಿ ಪತ್ತೆ
ಸ್ನೇಹಿತನಿಗೆ 50 ಡಾಲರ್ ಪಾವತಿ
ಪತ್ನಿಯ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಸ್ನೇಹಿತನ ಸಹಾಯ ಕೇಳಿದ್ದ ನಿಕೋಲಸ್ ಮೆಟ್ಸನ್ ಅದಕ್ಕಾಗಿ ಆತನಿಗೆ 50 ಡಾಲರ್ ಹಣ ಪಾವತಿಸಿದನು.
ನದಿಯಲ್ಲಿ ಶವದ ತುಂಡುಗಳು
ಒಂದು ದಿನ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರಿಗೆ ವಿಥಮ್ ನದಿಯಲ್ಲಿ ಪ್ಲಾಸ್ಟಿಕ್ ಚೀಲಗಳು ತೇಲುತ್ತಿರುವುದು ಕಂಡು ಬಂದಿತ್ತು. ಒಂದು ಚೀಲದಲ್ಲಿ ಕೈ, ಇನ್ನೊಂದರಲ್ಲಿ ಬ್ರಾಮ್ಲಿ ತಲೆ ಹೀಗೆ 224 ದೇಹದ ಭಾಗಗಳು ಕಂಡು ಬಂದಿತ್ತು.. ಸಾವಿಗೆ ಕಾರಣವನ್ನು ಕಂಡುಹಿಡಿಯುವುದು ಅಸಾಧ್ಯ ಎನ್ನುವ ರೀತಿಯಲ್ಲಿ ಆಕೆಯ ದೇಹವನ್ನು ಕತ್ತರಿಸಲಾಗಿತ್ತು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವರ್ಷದ ಹಿಂದೆಯಷ್ಟೇ ಮದುವೆ
ಮಗಳು ಮದುವೆಯಾಗಿ ಕೇವಲ 16 ತಿಂಗಳಾಗಿದೆ. ಮದುವೆಯಾದ ಮೇಲೆ ಅವಳಿಗೆ ತನ್ನ ಕುಟುಂಬವನ್ನು ಭೇಟಿ ಮಾಡಲು ಆತ ಅವಕಾಶ ನೀಡಲಿಲ್ಲ ಎಂದು ಬ್ರಾಮ್ಲಿ ತಾಯಿ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಮೊಲ, ನಾಯಿ ಮರಿಯನ್ನೂ ಕೊಂದಿದ್ದ
ಬ್ರಾಮ್ಲಿ ಒಮ್ಮೆ ತನ್ನ ಮುದ್ದಿನ ಮೊಲಗಳೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಳು. ಇದರಿಂದ ಸಿಟ್ಟುಗೊಂಡಿದ್ದ ನಿಕೋಲಸ್ ಮೆಟ್ಸನ್ ಆಹಾರ ಬ್ಲೆಂಡರ್ ಮತ್ತು ಮೈಕ್ರೋವೇವ್ ಓವನ್‌ನಲ್ಲಿ ಅವುಗಳನ್ನು ಹಾಕಿ ಕೊಂದಿದ್ದ. ಆಗ ಬ್ರಾಮ್ಲಿ ಪೊಲೀಸರಿಗೆ ದೂರು ನೀಡಿದ್ದಳು. ಮತ್ತೊಂದು ಬಾರಿ ಆತ ಹೊಸ ನಾಯಿಮರಿಯನ್ನು ವಾಷಿಂಗ್ ಮೆಷಿನ್‌ನಲ್ಲಿ ಹಾಕಿದನು ಎಂದು ಬ್ರಾಮ್ಲಿ ದೂರು ನೀಡಿದ್ದಳು.
ಮಾರ್ಚ್ 24 ರಂದು ಲಿಂಕನ್‌ಶೈರ್ ಪೊಲೀಸರು ಬ್ರಾಮ್ಲಿಯನ್ನು ಹುಡುಕಿಕೊಂಡು ಮನೆಗೆ ಬಂದಾಗ ಮೆಟ್ಸನ್ ಬಾಗಿಲು ತೆರೆದು ಹೆಂಡತಿಯಿಂದ ತಾನು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಹೇಳಿದ್ದ. ಪೊಲೀಸರು ಮನೆಯ ಬಾತ್ ಟಬ್ ಮತ್ತು ನೆಲದ ಮೇಲೆ ಹಲವಾರು ಕಲೆಗಳನ್ನು ನೋಡಿದರು. ಅಮೋನಿಯಾ ಮತ್ತು ಬ್ಲೀಚ್‌ನ ತೀವ್ರ ವಾಸನೆ ಕಂಡು ಬಂದು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪತ್ನಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯವು ಸೋಮವಾರ ಈ ಕುರಿತು ಆರೋಪಿಗೆ ಶಿಕ್ಷೆ ಪ್ರಕಟಿಸಲಿದೆ. ಆದರೆ ಇದುವರೆಗೆ ಆತ ಪತ್ನಿಯನ್ನು ಯಾಕೆ ಕೊಂಡ ಎಂದು ಹೇಳಿಲ್ಲ. ಆದರೆ ವಿಚಾರಣೆ ವೇಳೆ ಆತ ಮಾನಸಿಕ ಅಸ್ವಸ್ವತೆ ಹೊಂದಿರುವುದಾಗಿ ವಕೀಲರು ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ