ಬೆಂಗಳೂರು: ಕುಡಿಯಲು ಹಣ ಕೊಡದ ತಂದೆಯನ್ನು ಮಗ ಕೊಂದುಹಾಕಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರು ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರೇನಹಳ್ಳಿ ಪಿಎಸ್ ಲೇಔಟ್‌ನಲ್ಲಿ ಕೃತ್ಯ ನಡೆದಿದೆ.
ಬಸವರಾಜು (60) ಕೊಲೆಯಾದ ತಂದೆ. ನೀಲಾಧರ ತಂದೆಯನ್ನು ಕೊಂದ ಆರೋಪಿ. ಮೃತ ಬಸವರಾಜು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮಗ ನೀಲಾಧರ ಆಟೋ ರಿಕ್ಷಾ ಚಾಲಕನಾಗಿದ್ದ. ಇವರು ವಾಸವಾಗಿದ್ದ ಶೆಡ್‌ನಲ್ಲೇ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಯಾಗಿ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಮಗನಿಂದಲೇ ಕೊಲೆಯಾಗಿರುವುದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದ ಆರೋಪಿಯ ಬಂಧನ
ಬೆಂಗಳೂರು: ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಹೋಗಲು ಸಂಚು ರೂಪಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಪಂಜಾಬ್ ಮೂಲದ ಕುಲ್ವಂತ್ ಸಿಂಗ್ ಬಂಧಿತ ಆರೋಪಿ.
ಆಸ್ಟ್ರೇಲಿಯಾಗೆ ಹೋಗಲು ಕುಲ್ವಂತ್ ನಕಲಿ ಪಾಸ್‌ಪೋರ್ಟ್ ಮಾಡಿಸಿದ್ದ. ಹಳೆಯ ಪಾಸ್‌ಪೋರ್ಟ್‌ನಲ್ಲಿ ಈತನಿಗೆ ವೀಸಾ ರಿಜೆಕ್ಟ್ ಆಗಿತ್ತು. ಈತನ ಸಹೋದರ ಕೂಡ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ತಾನೂ ಕೂಡ ಲೇಬರ್ ವೀಸಾದಲ್ಲಿ ಆಸ್ಟ್ರೇಲಿಯಾಗೆ ತೆರಳಿ ದುಡಿಯಲು ಬಯಸಿದ್ದ ಇವನು ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ನಕಲಿ ಪಾಸ್‌ಪೋರ್ಟ್ ಮಾಡಿಸಿದ್ದ. ಅನುಮಾನಗೊಂಡ ಏರ್‌ಪೋರ್ಟ್ ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ಎರಡು ಪಾಸ್‌ಪೋರ್ಟ್ ಇರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Murder Case: ಮೈದುನ ಜತೆಗೆ ತನ್ನ ಸಹೋದರಿ ಮದುವೆಗೆ ಒಪ್ಪದ ಹೆಂಡತಿ, ಆಕೆಯನ್ನೇ ಕೊಲೆ ಮಾಡಿದ ಪತಿ