ಬೆಂಗಳೂರು : ತಾನು ಪ್ರೀತಿಸಿದ ಯುವತಿ ತನ್ನ ಗೆಳೆಯನನ್ನೇ ಮದುವೆ ಅಗಿದ್ದಾಳೆ ಎಂದು ಗೆಳೆಯನನ್ನೆ ಚುಚ್ಚಿ ಕೊಲೆ (Murder Case) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಹಳೆ ಬೈಯಪ್ಪನಹಳ್ಳಿಯಲ್ಲಿ ರಾಕೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸತೀಶ್ ಎಂಬಾತನು ಕೊಲೆಯಾದ ದುರ್ದೈವಿಯಾಗಿದ್ದಾನೆ. ರಾಕೇಶ್ ಹಾಗೂ ಸತೀಶ್ ಇಬ್ಬರು ಗೆಳೆಯರಾಗಿದ್ದರು. ಹಾಗೂ ಇಬ್ಬರೂ ಒಂದೇ ಕಡೆ ಫ್ಲವರ್ ಡೆಕೋರೆಶನ್ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ರಾಕೇಶ್‌ಗೆ ಒಂದು ಹುಡುಗಿಯ ಮೇಲೆ ಪ್ರೀತಿ ಆಗುತ್ತದೆ. ಆದರೆ ಅದೇ ಹುಡುಗಿಯನ್ನು ಸತೀಶ್ ಸಹ ಪ್ರೀತಿ ಮಾಡುತ್ತಿದ್ದ.
ಒಂದು ದಿನ ರಾಕೇಶ್‌ಗೆ ತನ್ನ ಹುಡುಗಿಯನ್ನು ಸತೀಶ್ ಪ್ರೀತಿ ಮಾಡುತ್ತಿರುವ ವಿಷಯ ಗೊತ್ತಾಗುತ್ತದೆ. ಬಳಿಕ ಈ ವಿಚಾರವಾಗಿ ರಾಕೇಶ್ ಹಾಗೂ ಸತೀಶ್ ನಡುವೆ ಜಗಳ ಕೂಡ ಆಗಿರುತ್ತದೆ. ಜಗಳದ ಬಳಿಕ ಸತೀಶ್ ಯುವತಿಯನ್ನು ಮದುವೆ ಆಗುತ್ತಾನೆ.
ಇದನ್ನೂ ಓದಿ | Murder Case | ಖಾಸಗಿ ಹೋಟೆಲ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು; ಪ್ರಿಯಕರನಿಂದಲೇ ಕೊಲೆ!
ಮದುವೆಯಾದ ನಂತರ ಚೆನ್ನಾಗಿ ಬದುಕಿ ಎಂದು ದಂಪತಿಗೆ ಆರೋಪಿ ರಾಕೇಶ್ ಶುಭ ಹಾರೈಸಿರುತ್ತಾನೆ. ಆದರೆ ಇದೀಗ ಸತೀಶ್ ಮನೆ ಬಳಿ ಹೋಗಿ ಆರೋಪಿ ರಾಕೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದೀಗ ಬೈಯಪ್ಪನಹಳ್ಳಿ ಪೊಲೀಸರು ಆರೋಪಿ ರಾಕೇಶ್‌ನನ್ನು ವಶ ಪಡೆದುಕೊಂಡಿದ್ದಾರೆ.