ಬೆಂಗಳೂರು: ಕೆಂಗೇರಿಯಲ್ಲಿ ಮನೆ ಓನರ್ ದಿವ್ಯಾಳನ್ನು ಕೊಂದ ಪ್ರಕರಣಕ್ಕೆ (Murder case) ಸಂಬಂಧಿಸಿದಂತೆ ಆರೋಪಿ ಮೋನಿಕಾಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರೀಲ್ಸ್ ಸ್ಟಾರ್ ಮೋನಿಕಾ ಬಿಕ್ಕಿ ಬಿಕ್ಕಿ ಅತ್ತಿದ್ದು, ಬೇಕಂತ ಕೊಲೆ ಮಾಡಿಲ್ಲ ಸರ್ ಎಂದಿದ್ದಾಳೆ.
ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ (Woman murder case) ಮಾಡಿದ್ದಳು. ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ (kengeri murder, bangalore crime) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಎಂಬುವವರನ್ನು ಮೋನಿಕಾ (24) ಎಂಬಾಕೆ ಹತ್ಯೆ ಮಾಡಿದ್ದಳು.
ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ಮೋನಿಕಾ, ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಬದಲಿಗೆ ದಿವ್ಯಾ ಹಾಕಿದ್ದ ಚಿನ್ನದ ಸರವನ್ನು ಮಾತ್ರ ಕಸಿದುಕೊಳ್ಳಲು ಹೋಗಿದ್ದೆ ಎಂದಿದ್ದಾಳೆ.
ಕೊಲೆ ಮಾಡುವ ಮೊದಲು ಎರಡ್ಮೂರು ಬಾರಿ ದಿವ್ಯಾ ಮನೇಲಿ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದಳು. ಆದರೆ ಮೋನಿಕಾ ಪ್ರಯತ್ನ ವಿಫಲವಾಗಿತ್ತು. ಮೋನಿಕಾ ಗ್ರೌಂಡ್ ಪ್ಲೋರ್‌ನಲ್ಲಿ ವಾಸವಿದ್ದಳು. ದಿವ್ಯಾಳ ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಯೊಳಗೆ ಗಮನಿಸುತ್ತಿದ್ದಳು.
ದಿವ್ಯಾಳ ಪತಿ ಹಾಗೂ ಅತ್ತೆ-ಮಾವ ಎಲ್ಲರೂ ಕೆಲಸಕ್ಕೆ ಹೋದ ನಂತರ ಮೋನಿಕಾ ಮನೆಗೆ ಬರುತ್ತಿದ್ದಳು. ದಿವ್ಯಾಳನ್ನು ಅಕ್ಕ ಅಕ್ಕ ಅಂತಿದ್ದವಳು, ಮಗು ನಿದ್ರೆಗೆ ಜಾರಿದಾಗ ದಿವ್ಯಾಳ ಕತ್ತು ಹಿಸುಕಿ ಕೊಂದಿದ್ದಳು.
ಇದನ್ನೂ ಓದಿ: Suspicious Case : ಬಾತ್ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?
ಪ್ರಿಯತಮನಿಗಾಗಿ ಮಾಡಿದ್ದಳು ಸಾಲ
ಮೋನಿಕಾ ವಿಚಾರಣೆ ವೇಳೆ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಪ್ರಿಯತಮನಿಗಾಗಿ ಮಾಡಿದ್ದ ಸಾಲ ತೀರಿಸಲು ಕಳ್ಳತನಕ್ಕೆ ಇಳಿದಿದ್ದಳು ಆದರೆ ಅದು ವಿಫಲವಾಗಿತ್ತು. ಇತ್ತೀಚೆಗೆ ಕೆಲಸ ಬಿಟ್ಟಿದ್ದ ಮೋನಿಕಾ ಎರಡು ತಿಂಗಳು ಮನೆ ಬಾಡಿಗೆ ಕಟ್ಟಿರಲಿಲ್ಲ. ದಿವ್ಯಾ ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಮನೆ ಗೃಹಪ್ರವೇಶ ಮಾಡಿದ್ದರು. ಆ ಹೊಸ ಮನೆಗೆ ಬಾಡಿಗೆಗೆ ಮೋನಿಕಾ ಪಡೆದಿದ್ದಳು.
ಕೆಲಸ ಬಿಟ್ಟಿದ್ದರೂ ಪ್ರಿಯತಮ ಟಾಟಾ ಏಸ್ ವಾಹನ ಖರೀದಿಗೆ ಸಾಲ ಮಾಡಿ ಹಣ ಕೊಟ್ಟಿದ್ದಳು. ಆದರೆ ಸಾಲ ಕೊಟ್ಟವರು ಮೋನಿಕಾ ಹಿಂದೆ ಬಿದ್ದಿದ್ದರು. ಇತ್ತ ಸಾಲ ಪಡೆದ ಪ್ರಿಯತಮ ಕೂಡ ಹಣ ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ದಿವ್ಯಾ ಸ್ನಾನಕ್ಕೆ ಹೋದಾಗ ಮಾಂಗಲ್ಯ ಸರ ಎಗರಿಸೋಣ ಎಂದು ಸ್ಕೆಚ್ ಹಾಕಿದ್ದಳು. ಮಗುವನ್ನು ನೋಡಿಕೊಳ್ಳುವ ನೆಪದಲ್ಲಿ ಹೋಗಿ ಮಾಂಗಲ್ಯ ಸರವನ್ನು ಕಳವು ಮಾಡಲು ಯೋಜಿಸಿದ್ದಳು. ಆದರೆ ದಿವ್ಯಾ ಮೋನಿಕಾ ಮುಂದೆ ಮಾಂಗಲ್ಯ ಸರವನ್ನು ತೆಗೆದಿಡಲಿಲ್ಲ.
ಹೀಗಾಗಿ ಬೇರೆ ದಾರಿ ಕಾಣದೇ ದಿವ್ಯಾಳ ಕತ್ತು ಹಿಸುಕಿ 36 ಗ್ರಾಂ ಚಿನ್ನಾಭರಣದ ಜತೆ ಮೋನಿಕಾ ಎಸ್ಕೇಪ್ ಹಾಕಿದ್ದಳು. ಕದ್ದ ಸರವನ್ನು ಅಡವಿಟ್ಟು ಆರಾಮಾಗಿ ತನಗೇನು ಗೊತ್ತಿಲ್ಲದಂತೆ ವಾಪಸ್ ಬಂದಿದ್ದಳು. ಆದರೆ ಪೊಲೀಸರ ವಿಚಾರಣೆ ವೇಳೆ ನನ್ನ ಮನೆಯಲ್ಲೂ 60 ಸಾವಿರ ಕಳುವಾಗಿದೆ ಎಂದಿದ್ದಳು. ಇತ್ತ ದಿವ್ಯಾ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕೊಲೆ ಎನ್ನುವುದು ಸ್ಪಷ್ಟವಾಗಿತ್ತು.
ಘಟನೆ ದಿನ ಇಡೀ ಕಟ್ಟಡದಲ್ಲಿ ದಿವ್ಯಾ ಮತ್ತು ಅವರ ಮಗು ಹಾಗೂ ಮೋನಿಕಾ ಹೊರತಾಗಿ ಯಾರು ಇರಲಿಲ್ಲ. ಅಲ್ಲದೇ ಮೋನಿಕಾ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ ಎನ್ನುವ ವಿಚಾರ ಗೊತ್ತಾಗಿತ್ತು. 60 ಸಾವಿರ ಹಣ ಮನೆಯಲ್ಲಿದರೆ ಎರಡು ತಿಂಗಳ ಬಾಡಿಗೆ ಯಾಕೆ ಕಟ್ಟಿಲ್ಲ ಎಂಬ ಸಂಶಯ ಪೊಲೀಸರಿಗೆ ಕಾಡಿತ್ತು.
ಮೃತಳ ಕತ್ತಿನಲ್ಲಿದ್ದ ಚಿನ್ನ ಕಳುವಾಗಿದ್ದರಿಂದ ಪೊಲೀಸರು ಹತ್ತಿರದ ಜ್ಯುವೆಲ್ಲರಿ ಶಾಪ್‌ನಲ್ಲಿ ವಿಚಾರಿಸಿದ್ದಳು. ಈ ವೇಳೆ ಮೋನಿಕಾ ದಿವ್ಯಾಳ ಮಾಂಗಲ್ಯಸರ ಅಡವಿಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಮೋನಿಕಾಳನ್ನು ವಶಕ್ಕೆ ಪಡೆದಾಗ ಕೊಲೆ ರಹಸ್ಯ ಹೊರಗೆ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ