ಬೆಂಗಳೂರು: ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ ಪತಿ, ಆಕೆಗೆ ಭೀಕರವಾಗಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ (Murder Case) ಬೆಂಗಳೂರಿನ ಕೆಂಗೇರಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ನವ್ಯಾ (25) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈಕೆಯ ಪತಿ ಕಿರಣ್ ಕೊಲೆಗೈದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Stray Dogs Attack: ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಬಲಿಯಾದ ನಿವೃತ್ತ ಶಿಕ್ಷಕಿ
ಕಿರಣ್ ಮತ್ತು ನವ್ಯಾ ಕಳೆದ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಇನ್ನು ನವ್ಯಾ ಸಿನಿಮಾರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಳು. ಪತ್ನಿಯ ಶೀಲ ಶಂಕಿಸಿ, ಆಕೆಯನ್ನು ಕುರ್ಚಿಗೆ ಕಟ್ಟಿಹಾಕಿ ಚಿತ್ರಹಿಂಸೆ ನೀಡಿ, ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಕೆಂಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಲೆಗೈದ ಆರೋಪಿ ಕಿರಣ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಬರ್ಬರ ಹತ್ಯೆ; ಹೆಂಡ್ತಿ ಜತೆಗೆ ಅನೈತಿಕ ಸಂಬಂಧವೇ ಕಾರಣ
ಪತ್ನಿಯ ಜತೆ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತಿಯು, ಯುವಕನೋರ್ವನನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಜರುಗಿದೆ.
ರಾಮಕೃಷ್ಣ(45) ಮೃತ ದುರ್ದೈವಿ. ರಮೇಶ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಧುಗಿರಿಯ ತಿಮ್ಮನಹಳ್ಳಿ ಮೂಲದ ಆರೋಪಿ ರಮೇಶ್ ತನ್ನ ಪತ್ನಿಯ ಜತೆ ರಾಮಕೃಷ್ಣ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ, ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯು ಪರಾರಿಯಾಗುವ ವೇಳೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Karnataka Weather : ನಿರಂತರ ಮಳೆಗೆ ಮನೆ ಗೋಡೆ ಕುಸಿತ; ಮಹಿಳೆ ಆಸ್ಪತ್ರೆ ಪಾಲು
ಬುದ್ಧಿ ಹೇಳಿದಕ್ಕೆ ಹೆತ್ತ ತಾಯಿಯನ್ನೆ ಕೊಂದ ಪಾಪಿ ಪುತ್ರ!
ಪಾಪಿ ಪುತ್ರನೊಬ್ಬ ಬುದ್ದಿ ಹೇಳಿದ್ದಕ್ಕೆ ಮಲಗಿದಲ್ಲೇ ಹೆತ್ತ ತಾಯಿಯನ್ನು ಕೊಂದಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಜರುಗಿದೆ. ಶಾರದಮ್ಮ ಅಗಡಿ (85) ಕೊಲೆಯಾದ ತಾಯಿಯಾಗಿದ್ದು, ಸಿದ್ಧಲಿಂಗ ಅಗಡಿ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ.
ನಿನ್ನೆ ಪಕ್ಕದ ಮನೆಯವರ ಜತೆ ಸಿದ್ಧಲಿಂಗ ಅಗಡಿ ಜಗಳ ಮಾಡಿಕೊಂಡಿದ್ದ. ಈ ವೇಳೆ ನನ್ನ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಎಂದು ತಾಯಿ ಬೇಡಿಕೊಂಡಿದ್ದರು. ಇನ್ನು ತಾಯಿಯನ್ನು ಕೊಂದು ಸಹೋದರಿಯರಿಗೆ ಫೋನ್ ಮಾಡಿದ ಪಾಪಿ ಪುತ್ರ, ತಾಯಿ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Actor Darshan: ಪವಿತ್ರಾಗೌಡ ಜಾಮೀನು ಅರ್ಜಿಯ ಭವಿಷ್ಯ ಆ.31ಕ್ಕೆ ನಿರ್ಧಾರ
ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು, ಬಳಿಕ ಪೊಲೀಸರು ಮಾಹಿತಿ ನೀಡಿದ ಬಳಿಕ ಓಡೋಡಿ ಬಂದಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಘಟನೆಯು ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.