Site icon Vistara News

Murder Case: ಹೋಟೆಲ್‌ ಮಾಲಿಕ ಪತ್ನಿಯಿಂದಲೇ ಕೊಲೆ, ಪತ್ತೆಯಾಗದಿರಲಿ ಎಂದು ಖಾರದ ಪುಡಿ ಬಳಕೆ!

murder scene

ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆ (Murder Case) ಪ್ರಕರಣವನ್ನು ಪೊಲೀಸರು 40 ಗಂಟೆಗಳಲ್ಲಿ ಭೇದಿಸಿದ್ದಾರೆ. ಮೃತ ವ್ಯಕ್ತಿಯ ಪತ್ನಿ ಹಾಗೂ ನಾಲ್ವರು ಸಹಚರರು ಸೇರಿ ಕೊಲೆ ಮಾಡಿರುವುದು ಗೊತ್ತಾಗಿದೆ.

ಕೊಲೆಯಾದ ವ್ಯಕ್ತಿ ಅರುಣ್ ಕುಮಾರ್ (27). ಜೂನ್ 28ರ ಬೆಳಗ್ಗೆ 7 ಗಂಟೆಗೆ ಹತ್ಯೆ ಬಗ್ಗೆ ಮಾಹಿತಿ ಬಂದಿತ್ತು. ಮಾಹಿತಿ ಬಂದ 40 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಲಾಗಿದೆ. ಅರುಣ್ ಕುಮಾರ್, ರಾಜರಾಜೇಶ್ವರಿ ನಗರದ ಜೆಎಸ್‌ಎಸ್ ಕಾಲೇಜು ಬಳಿ ಗೌಡರ ಮನೆ ಬೀಗರ ಊಟ ಎಂಬ ಹೋಟೆಲ್ ನಡೆಸುತ್ತಿದ್ದ.

ಅರುಣ್‌ ಕುಮಾರ್‌ನ ಪತ್ನಿ ಹಾಗೂ ಸಹಚರರಿಂದ ಕೊಲೆ ನಡೆದಿದೆ. ಆರೋಪಿಗಳ ಪೈಕಿ ಒಬ್ಬ ಫೈನಾನ್ಸಿಯರ್ ಇದ್ದಾನೆ. ಆತನಿಗೂ ಕೊಲೆಯಾದ ಅರುಣ್ ಪತ್ನಿಗೂ ನಿಕಟ ಸ್ನೇಹವಿತ್ತು. ಇದೇ ಕಾರಣದಿಂದ ಕೊಲೆಯಾಗಿರಬಹುದು ಎಂದು ತರ್ಕಿಸಲಾಗಿದೆ. ಅರುಣ್ ಕುಮಾರ್ ಹೆಂಡತಿ ಹಾಗೂ ಆಕೆಯ ಜೊತೆ ಇನ್ನೂ ನಾಲ್ಕು ಜನ ಪುರುಷರು ಸೇರಿ ಕೊಲೆ ಮಾಡಿದ್ದಾರೆ. ಖಾರದ ಪುಡಿ ಎರಚಿ, ಬಿಯರ್ ಬಾಟಲ್‌ನಿಂದ ಹೊಡೆದು, ಲಾಂಗ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಮೊದಲೇ ಪ್ಲಾನ್ ಕೊಲೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್‌ ಶ್ವಾನಗಳಿಗೆ ವಾಸನೆ ಸಿಗದಿರಲಿ ಎಂದು ಖಾರದಪುಡಿ ಹಾಕಿ ಹೋಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Murder Case : ಪತಿಯಿಂದ ಪತ್ನಿಯ ಕೊಲೆ; ನೇಣಿಗೆ ಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ ಭೂಪ

Exit mobile version