ಬೆಂಗಳೂರು: ವೃದ್ಧೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಗುರುತು ಸಿಗಬಾರದೆಂದು ಹಂತಕರು ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ. ಕೆ.ಆರ್.ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ (Murder Case) ಘಟನೆ ನಡೆದಿದೆ.
ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ದೇಹವನ್ನು ತುಂಡಾಗಿ ಕತ್ತರಿಸಿ ಡ್ರಮ್‌ಗೆ ಹಾಕಿ ಪರಾರಿ ಆಗಿದ್ದಾರೆ. ಕಳೆದ ಎರಡು ಮೂರು ದಿನಗಳ ಹಿಂದೆ ಘಟನೆ ನಡೆದಿರುವ ಶಂಕೆ ಇದೆ. ದುರ್ವಾಸನೆ ಬಂದಾಗ ಸ್ಥಳೀಯರು ಡ್ರಮ್ ತೆರೆದು ನೋಡಿದ್ದಾರೆ. ಆಗ ತುಂಡಾದ ಮೃತದೇಹವು ಕಂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುಮಾರು 70 ವರ್ಷದ ವೃದ್ಧೆಯ ಮೃತದೇಹವನ್ನು ಐದಾರು ಭಾಗಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ತುಂಬಿದ್ದಾರೆ. ನಂತರ
ಪಾಳು ಮನೆಯ ಪಕ್ಕದ ಖಾಲಿ ಜಾಗದಲ್ಲಿ ಮೃತದೇಹವನ್ನು ಡ್ರಮ್‌ನಲ್ಲಿ ಇಟ್ಟು ಪರಾರಿ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೆ.ಆರ್.ಪುರಂ ಪೊಲೀಸರು, ಎಫ್.ಎಸ್.ಎಲ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಭೇಟಿ ನೀಡಿ, ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ರಿಂದ ಮಾಹಿತಿ ಪಡೆದರು. ನಿಸರ್ಗ ಲೇಔಟ್‌ನ ಅಪಾರ್ಟ್ಮೆಂಟ್‌ನಲ್ಲಿ ಭೋಗ್ಯದ ಮನೆಯಲ್ಲಿದ್ದ ಸುಶೀಲಮ್ಮ (70) ಎಂಬುವರ ಕೊಲೆಯಾಗಿದ್ದು, ಅವರು ಮಗಳೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ. ವೃದ್ಧೆಯ ಮಗ ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸವಾಗಿದ್ದರು ಎನ್ನಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾತನಾಡಿ, ಈ ಘಟನೆ ಬಹುಶಃ ನೆನ್ನೆ ಆಗಿದೆ. 65 ವರ್ಷದ ವೃದ್ಧೆಯ ಕೊಲೆಯಾಗಿದೆ. ಕೊಲೆ ಮಾಡಿ ಮೃತ ದೇಹ ಬಿಸಾಡಿ ಹೋಗಿದ್ದಾರೆ. ಮೃತರು ಮೂವರ ಕುಟುಂಬಸ್ಥರ ಜೊತೆ ವಾಸವಾಗಿದ್ದರು. ಘಟನೆ ಸಂಬಂಧ ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.
ರೈಲ್ವೆ ಟ್ರಾಕ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ
ಬೆಂಗಳೂರಿನ ಯಲಹಂಹ ರೈಲ್ವೆ ಟ್ರಾಕ್ ಬಳಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಸುಮಾರು 35 ವರ್ಷದ ಆಸುಪಾಸಿನ ವ್ಯಕ್ತಿ ಎನ್ನಲಾಗಿದೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case: ಹಳೇ ವೈಷಮ್ಯ; ಯುವಕನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ಹಂತಕರು
Murder Case : ಮಿಸ್ಸಿಂಗ್ ಆದ ವಿದ್ಯಾರ್ಥಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ
ಆನೇಕಲ್: ಕಾಣೆಯಾಗಿದ್ದ ಬಿ.ಟೆಕ್ ವಿದ್ಯಾರ್ಥಿ ಶವವಾಗಿ (Dead body found) ಪತ್ತೆಯಾಗಿದ್ದಾನೆ. ಗುಮ್ಮಳಾಪುರದ ಅಲಯನ್ಸ್ ಯೂನಿವರ್ಸಿಟಿಯ ವಿದ್ಯಾರ್ಥಿ ಹರ್ಷಿತ್ ಕೊಟ್ನಾಲಾ (22) ಮೃತ ದುರ್ದೈವಿ. ಯಾರೋ ಹಂತಕರು ಹರ್ಷಿತ್‌ನನ್ನು ಕೊಲೆಗೈದು (Murder Case) ನಂತರ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಆನೇಕಲ್ ಸಮೀಪದ ತೆಲಗರಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವ (Student Missing) ಸಿಕ್ಕಿದೆ.
ಇದೇ ಫೆ. 21ರಂದು ತಮಿಳುನಾಡಿನ ಗುಮ್ಮಳಾಪುರದ ಅಲಯನ್ಸ್ ಯೂನಿವರ್ಸಿಟಿ ಹಾಸ್ಟೆಲ್‌ನಿಂದ ಹೊರ ಹೋದ ಹರ್ಷಿತ್ ನಂತರ ನಾಪತ್ತೆಯಾಗಿದ್ದ. ಎಷ್ಟೇ ಹುಡುಕಾಟ ನಡೆಸಿದರೂ ಕಾಣದಿದ್ದಾಗ ತಮಿಳುನಾಡಿನ ತಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ನೀಡಿದ್ದರು.
ಇದನ್ನೂ ಓದಿ: ಮಗು ಸತ್ತಿದೆ ಎಂದು ಸುಳ್ಳು ಹೇಳಿ ಮಾರಾಟ; ಕಟುಕರ ತಾಣವಾದ ಕೊಪ್ಪಳ ಜಿಲ್ಲಾಸ್ಪತ್ರೆ!
ಈ ಮಧ್ಯೆ ತೆಲಗರಹಳ್ಳಿಯ ನೀಲಗಿರಿ ತೋಪಿನ ಬಳಿ ಸ್ಥಳೀಯರಿಗೆ ಶವವೊಂದು ಕಂಡಿತ್ತು. ಕೂಡಲೇ ಆನೇಕಲ್ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಸ್ಥಳದಲ್ಲಿ ದೊರೆತ ದಾಖಲೆಗಳ ಆಧಾರದ ಮೇಲೆ ಹರ್ಷಿತ್ ಎಂದು ಗುರುತಿಸಿದ್ದಾರೆ.
ಸ್ನೇಹಿತರೇ ಹಂತಕರಾ?
ಫೆ. 21ರಂದು ಹರ್ಷಿತ್ ಕಾಲೇಜ್ ಬಸ್‌ನಲ್ಲಿ ತೆರಳದೆ ಹಾಸ್ಟೆಲ್‌ನಿಂದ ತಡವಾಗಿ ಹೊರಟ್ಟಿದ್ದ. ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಲೇಜಿಗೆ ಹೋಗದೆ ಸ್ನೇಹಿತರ ಜತೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ತೆಲಗರಹಳ್ಳಿಯ ನಿರ್ಜನ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮದ್ಯದ ಬಾಟೆಲ್, ತಿಂಡಿ-ತಿನಿಸು ಬಿದ್ದಿದೆ.
ಈ ನಡುವೆ ಹರ್ಷಿತ್ ಹಾಗೂ ಸ್ನೇಹಿತರ ನಡುವೆ ಏನು ನಡೆದಿದ್ದಯೋ ತಿಳಿದಿಲ್ಲ. ದುಷ್ಟರು ಹರ್ಷಿತ್‌ನನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಯಾಕಾಗಿ ಹತ್ಯೆ ನಡೆದಿದೆ? ಯಾರು ಹಂತಕರು ಎಂಬುದರ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ