ಬೆಂಗಳೂರು: ಪಾಳು ಬಿದ್ದ ಕಟ್ಟಡದಲ್ಲಿ ಮಹಿಳೆಯೊಬ್ಬರ ಶವ (Dead body Found) ಪತ್ತೆಯಾಗಿದೆ. ಬೆಂಗಳೂರಿನ ಶಾಂತಿನಗರ ಡಬ್ಬಲ್ ರೋಡ್‌ನ ಜನತಾ ಕೋ-ಆಪರೇಟಿವ್ ಬ್ಯಾಂಕ್ ಕಟ್ಟಡ ಸಮೀಪದಲ್ಲಿ (Murder Case) ಘಟನೆ ನಡೆದಿದೆ.
ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಹಂತಕರು ಪಾಳು ಬಿದ್ದ ಕಟ್ಟಡದಲ್ಲಿ ಬೀಸಾಕಿದ್ದಾರೆ. ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ ಸ್ಥಳೀಯರು ಒಳಹೊಕ್ಕು ನೋಡಿದಾಗ ಮೃತದೇಹವು ಕಂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತಳು ಯಾರು, ಯಾಕಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಡಬಲ್ ರೋಡ್ ಸುತ್ತಮುತ್ತ ಇರುವ ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Assault Case : ನಡುರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಗೆ ಮಚ್ಚು ಬೀಸಿದ ಪತಿ
ಮೊನ್ನೆ ಮುಂಡವಿಲ್ಲದ ರುಂಡ ಇಂದು ಕೊಳೆತ ಸ್ಥಿತಿಯಲ್ಲಿ ಕೈ ಪತ್ತೆ!
ಆನೇಕಲ್: ಮೊನ್ನೆ ತಲೆ ಬುರುಡೆ ಇಂದು ಅಪರಿಚಿತ ಮಹಿಳೆಯ ಕೈ (Dead Body Found) ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಕಾಡಂಚಿನ ಗ್ರಾಮ ಬ್ಯಾಟರಾಯನದೊಡ್ಡಿ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೈ ಪತ್ತೆಯಾಗಿದೆ.
ಕೈಯಲ್ಲಿ ಬಳೆಗಳು ಇದ್ದ ಕಾರಣಕ್ಕೆ ಆ ಆಧಾರದ ಮೇಲೆ ಮಹಿಳೆ ಕೈ ಇದು ಎಂದು ತಿಳಿದು ಬಂದಿದೆ. ಪೊದೆಯಲ್ಲಿದ್ದ ಕೈಯನ್ನು ನಾಯಿಗಳು ಎಳೆದಾಡಿ ತಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಶನಿವಾರ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ತಲೆಬರುಡೆಯೊಂದು ಪತ್ತೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ತಲೆಬುರುಡೆ ಸಿಕ್ಕಿತ್ತು. ಮಹಿಳೆಯನ್ನು ಕೊಂದು ಅಂಗಾಂಗಳನ್ನು ಕತ್ತರಿಸಿ ಅನುಮಾನ ಬಾರದಿರಲಿ ಎಂದು ಬೇರೆ ಬೇರೆ ಕಡೆ ಎಸೆದಿರುವ ಶಂಕೆ ಇದೆ.
ಇದನ್ನೂ ಓದಿ: Mallinath Mutya: ಅಟ್ರಾಸಿಟಿ, ಅತ್ಯಾಚಾರ ಪ್ರಕರಣದಲ್ಲಿ ಹವಾ ಮಲ್ಲಿನಾಥ ಮುತ್ಯಾ ಜೈಲುಪಾಲು
ಉಳಿದ ಅಂಗಾಂಗಗಳಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸಿದ್ದು, ತಲೆಬುರುಡೆ ಹಾಗೂ ಸಿಕ್ಕಿರುವ ಕೈ ಜಾಡು ಹಿಡಿದು ತನಿಖೆಯನ್ನು ಮುಂದುವರಿಸಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡವಿಲ್ಲದ ರುಂಡ ಪತ್ತೆ
ಫೆ.17ರಂದು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪೋಡು ಬಳಿ ಮುಂಡವಿಲ್ಲದ ರುಂಡ ಪತ್ತೆಯಾಗಿತ್ತು. ಹಂತಕರು ಕೊಲೆ ಮಾಡಿ ರುಂಡವನ್ನು ಎಸೆದು ಹೋಗಿದ್ದರು. ಮುಂಡ ಮತ್ತು ಕೈಕಾಲುಗಳು ಪತ್ತೆಯಾಗಿರಲಿಲ್ಲ. ಪತ್ತೆಯಾದ ರುಂಡವು ಪುರುಷ ಅಥವಾ ಮಹಿಳೆಯದ್ದ ಎನ್ನುವ ಚಹರೆ ಇನ್ನೂ ಪತ್ತೆಯಾಗಿರಲಿಲ್ಲ. ಇದೀಗ ಬ್ಯಾಟರಾಯನದೊಡ್ಡಿ ಬಳಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಕೈ ಪತ್ತೆಯಾಗಿದೆ. ಹೀಗಾಗಿ ಪೋಡು ಬಳಿ ಸಿಕ್ಕಿರುವ ರುಂಡಕ್ಕೂ ಬ್ಯಾಟರಾಯನದೊಡ್ಡಿಯಲ್ಲಿ ಸಿಕ್ಕಿರುವ ಕೈಗೂ ಏನಾದರೂ ಸಂಬಂಧ ಇದ್ಯಾ ಎಂದು ಪೊಲೀಸರು ತಾಳೆ ಹಾಕುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ